ಈ ವಿಜಯಕ್ಕೆ ಭಾರತದಾದ್ಯಂತ ಟೀ ಇಂಡಿಯಾಗೆ ಅಭಿನಂದನೆಗಳ ಮಹಪೂರವೇ ವ್ಯಕ್ತವಾಗಿದ್ದರೆ, ಪಾಕಿಸ್ತಾನಲ್ಲಿ ಆಟಗಾರರಿಗೆ ಬೈಗುಳವೆ ಬೈಗುಳ. ಗಣ್ಯರಿಂದ ಹಿಡಿದು ಸಾಮಾನ್ಯ ಜನರು ಪಾಕ್'ನ ಕಳಪೆಯಾಟದ ಬಗ್ಗೆ ಟೀಕಿಸುತ್ತಿದ್ದಾರೆ.
ನಿನ್ನೆ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಬಿ ಗುಂಪಿನ ಭಾರತ-ಪಾಕ್ ಲೀಗ್ ಕ್ರಿಕೆಟ್ ಪಂದ್ಯದಲ್ಲಿ ಪಾಕಿಸ್ತಾನವನ್ನು ಭಾರತ ತಂಡ 164 ಕ್ಕೆ ಆಲ್'ಔಟ್ ಮಾಡಿ 124 ರನ್'ಗಳ ಭಾರಿ ಅಂತರದಿಂದ ಮಣಿಸಿತ್ತು.
ಈ ವಿಜಯಕ್ಕೆ ಭಾರತದಾದ್ಯಂತ ಟೀ ಇಂಡಿಯಾಗೆ ಅಭಿನಂದನೆಗಳ ಮಹಪೂರವೇ ವ್ಯಕ್ತವಾಗಿದ್ದರೆ, ಪಾಕಿಸ್ತಾನಲ್ಲಿ ಆಟಗಾರರಿಗೆ ಬೈಗುಳವೆ ಬೈಗುಳ. ಗಣ್ಯರಿಂದ ಹಿಡಿದು ಸಾಮಾನ್ಯ ಜನರು ಪಾಕ್'ನ ಕಳಪೆಯಾಟದ ಬಗ್ಗೆ ಟೀಕಿಸುತ್ತಿದ್ದಾರೆ.
1992ರ ಏಕದಿನ ವಿಶ್ವಕಪ್ ಗೆಲ್ಲಲು ಪಾಕ್ ತಂಡದ ನೇತೃತ್ವ ವಹಿಸಿದ್ದ ಮಾಜಿ ನಾಯಕ ಹಾಗೂ ಹಾಲಿ ರಾಜಕಾರಣಿ ಇಮ್ರಾನ್ ಖಾನ್ ಅಂತೂ ತಂಡ ಹಾಗೂ ಆಟಗಾರರ ಬಗ್ಗೆ ತುಂಬ ಕೋಪದ್ರಕ್ತರಾಗಿದ್ದಾರೆ. ಟ್ವೀಟ್'ಗಳ ಸರಮಾಲೆಯನ್ನೇ ಮಾಡಿರುವ ಅವರು ' ಪಂದ್ಯವೆಂದ ಮೇಲೆ ಸೋಲು ಗೆಲುವು ಇದ್ದಿದ್ದೆ ಆದರೆ ಪಾಕ್ ತಂಡ ಸ್ವಲ್ಪವೂ ಹೋರಾಟ ನಡಸದೆ ಸೋತಿದೆ. ಪಾಕ್ ತಂಡ ಹಾಗೂ ಮಂಡಳಿಯನ್ನು ಪುನರಚಿಸದೆ ಇದ್ದರೆ ಸೋಲುಗಳ ಸರಮಾಲೆ ಮುಂದುವರಿಯುವುದು ಖಂಡಿತ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.