ಚೆನ್ನೈ (ಅ.17): ಪಿ.ವಿ.ಸಿಂಧು ಒಲಂಪಿಕ್ಸ್​​ನಲ್ಲಿ ಪದಕ ಗೆದ್ದಮಾತ್ರಕ್ಕೆ ಆಕೆ ಪರಿಪೂರ್ಣ ಆಟಗಾರ್ತಿಯಾಗೋಕೆ ಸಾಧ್ಯವಿಲ್ಲ. ಸಿಂಧು ಇನ್ನೂ ಹಲವು ವಿಭಾಗಗಳಲ್ಲಿ ಗಮನಹರಿಸಿ, ಹಿಡಿತ ಸಾಧಿಸಬೇಕು ಅದಕ್ಕಾಗಿ ಆಕೆ ಇನ್ನೂ ಹೆಚ್ಚು ಶ್ರಮ ಪಡಬೇಕು ಎಂದು ಸಿಂಧುಳ ತರಬೇತುದಾರ ಮಾಜಿ ಬ್ಯಾಡ್ಮಿಟಂನ್​​ ಚಾಂಪಿಯನ್​​ ಪುಲ್ಲೇಲ ಗೋಪಿಚಂದ್ ಹೇಳಿದ್ದಾರೆ. ಇಂದಿನಿಂದ ಡೆನ್ಮಾರ್ಕ್​ ಓಪನ್​​ನಲ್ಲಿ ಭಾಗವಹಿಸುತ್ತಿರುವ ಸಿಂಧು ಪ್ರಶಸ್ತಿ ಏತ್ತಿ ಹಿಡಿಯುವ ವಿಶ್ವಾಸದಲ್ಲಿದ್ದಾರೆ.​​