ಪರುಪಳ್ಳಿ ಕಶ್ಯಪ್ ಕ್ವಾರ್ಟರ್'ಫೈನಲ್ ಪಂದ್ಯದಲ್ಲಿ ತಮ್ಮ ದೇಶದವರೇ ಆದ ಸಮೀರ್ ವರ್ಮಾ ಅವರನ್ನು ಎದುರಿಸಲಿದ್ದಾರೆ.

ಅನಾಹೀಮ್(ಯುಎಸ್): ಭಾರತದ ಸ್ಟಾರ್ ಶಟ್ಲರ್ ಪಿ. ಕಶ್ಯಪ್, ಸಮೀರ್ ವರ್ಮಾ ಮತ್ತು ಎಚ್.ಎಸ್. ಪ್ರಣಯ್, ಯುಎಸ್ ಓಪನ್ ಗ್ರ್ಯಾನ್ ಪ್ರೀ ಗೋಲ್ಡ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಕ್ವಾರ್ಟರ್‌'ಫೈನಲ್ ಹಂತ ಪ್ರವೇಶಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಂದು ನಡೆದ ಪುರುಷರ ಸಿಂಗಲ್ಸ್‌'ನ 2ನೇ ಸುತ್ತಿನ ಪಂದ್ಯದಲ್ಲಿ ಕಶ್ಯಪ್ 21-18, 17-6 ಗೇಮ್‌'ಗಳಿಂದ ಹಂಗೇರಿಯ ಜಾರ್ಜಿಲಿ ಕ್ರಸ್ಜ್ ಎದುರು ಗೆಲುವು ಸಾಧಿಸಿದರು. ಪಂದ್ಯ ನಡೆಯುವ ಮಧ್ಯದಲ್ಲಿ ಗಾಯಕ್ಕೆ ತುತ್ತಾದ ಹಂಗೇರಿಯ ಶಟ್ಲರ್ ನಿವೃತ್ತಿ ತೆಗೆದುಕೊಂಡರು. ನಂತರ ನಡೆದ ಪ್ರೀ ಕ್ವಾರ್ಟರ್ ಪಂದ್ಯದಲ್ಲಿ ಕಶ್ಯಪ್ 21-19, 21-10 ಗೇಮ್‌'ಗಳಿಂದ ಶ್ರೀಲಂಕಾದ ನಿಲುಕಾ ಕರುಣರತ್ನೆ ಎದುರು ಜಯ ಪಡೆದರು.

ಪರುಪಳ್ಳಿ ಕಶ್ಯಪ್ ಕ್ವಾರ್ಟರ್'ಫೈನಲ್ ಪಂದ್ಯದಲ್ಲಿ ತಮ್ಮ ದೇಶದವರೇ ಆದ ಸಮೀರ್ ವರ್ಮಾ ಅವರನ್ನು ಎದುರಿಸಲಿದ್ದಾರೆ.

ಇನ್ನು ಎರಡನೇ ಶ್ರೇಯಾಂಕಿತ ಹೆಚ್.ಎಸ್ ಪ್ರಣಯ್, ಐರ್ಲ್ಯಾಂಡ್'ನ ಜೋಸ್ಹ್ ಮಗೀಯನ್ನು 21-13, 21-17 ನೇರ ಸೆಟ್'ನಲ್ಲಿ ಮಣಿಸಿದ ಪ್ರಣಯ್ ಎರಡನೇ ಪಂದ್ಯದಲ್ಲಿ ನೆದರ್'ಲ್ಯಾಂಡ್'ನ ಮಾರ್ಕ್ ಕಾಲ್ಜೋ ಅವರನ್ನು 21-8, 14-21, 21-18 ಸೆಟ್'ಗಳಲ್ಲಿ ಮಣಿಸಿ ಎಂಟರ ಘಟ್ಟ ಪ್ರವೇಶಿಸಿದ್ದಾರೆ

ಸಮೀರ್ ವರ್ಮಾ ಸಹ ಆಕರ್ಷಕ ಪ್ರದರ್ಶನ ತೋರುವ ಮೂಲಕ ಕ್ವಾರ್ಟರ್'ಫೈನಲ್ ಹಂತ ಪ್ರವೇಶಿಸಿದ್ದಾರೆ.