ಹತ್ತು ಆಟಗಾರ್ತಿಯರು ಶೂನ್ಯ ಸಂಪಾದನೆ ಮಾಡಿದರೂ ಎಂಪುಮಲಾಂಗ ತಂಡದವರು ಈ ಪಂದ್ಯವನ್ನು ಗೆಲ್ಲುವಲ್ಲಿ ಸಫಲರಾದರು. ಗೆಲ್ಲಲು 170 ರನ್ ಗುರಿ ಪಡೆದ ಈಸ್ಟರ್ನ್ಸ್ ತಂಡದವರು ನಿಗದಿತ 20 ಓವರ್’ನಲ್ಲಿ ಕೇವಲ 6 ವಿಕೆಟ್ ನಷ್ಟಕ್ಕೆ 127 ರನ್’ನಷ್ಟೇ ಗಳಿಸಲು ಶಕ್ಯರಾದರು.

ನವದೆಹಲಿ(ಡಿ. 16): ದಕ್ಷಿಣ ಆಫ್ರಿಕಾದಲ್ಲೊಂದು ವಿಶೇಷ ಕ್ರಿಕೆಟ್ ದಾಖಲೆ ಬಂದಿದೆ. ಇಡೀ ತಂಡದ ಸ್ಕೋರು 169 ರನ್ ಆದರೆ, ತಂಡದ 10 ಬ್ಯಾಟುಗಾರರು ಶೂನ್ಯ ಸಂಪಾದನೆ ಮಾಡಿದ್ದಾರೆ. ಮಹಿಳೆಯರ ಅಂಡರ್-19 ರಾಷ್ಟ್ರೀಯ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಎಂಪುಮಲಾಂಗ ಮತ್ತು ಈಸ್ಟರ್ನ್ಸ್ ನಡುವಿನ ಪಂದ್ಯದಲ್ಲಿ ಇಂಥದ್ದೊಂದು ದಾಖಲೆ ಬಂದಿದೆ. ಎಂಪುಮಲಾಂಗ ತಂಡ ನಿಗದಿತ 20 ಓವರ್’ನಲ್ಲಿ 8 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿತು. ಶಾನಿಯಾ ಲೀ ಸ್ವಾರ್ಟ್ ಅವರೊಬ್ಬರೇ 160 ರನ್ ಗಳಿಸಿ ಅಜೇಯರಾಗಿ ಉಳಿದರು. ತಂಡದ ಉಳಿದ ಆಟಗಾರ್ತಿಯರು 37 ಎಸೆತ ಎದುರಿಸಿ ಒಂದೂ ರನ್ ಗಳಿಸಲಿಲ್ಲ. ಎಂಟು ಆಟಗಾರ್ತಿಯರು ಶೂನ್ಯ ಸಂಪಾದನೆಯೊಂದಿಗೆ ಪೆವಿಲಿಯನ್’ಗೆ ಮರಳಿದರು. ಉಳಿದಂತೆ ಒಬ್ಬ ಆಟಗಾರ್ತಿ ಅಜೇಯ ಸೊನ್ನೆ ರನ್ ಹೊಡೆದರೆ, 11ನೇ ಕ್ರಮಾಂಕದ ಆಟಗಾರ್ತಿಗೆ ಬ್ಯಾಟ್ ಮಾಡುವ ಅವಕಾಶ ಸಿಗಲಿಲ್ಲ.

ವಿಚಿತ್ರವೆಂದರೆ, ಹತ್ತು ಆಟಗಾರ್ತಿಯರು ಶೂನ್ಯ ಸಂಪಾದನೆ ಮಾಡಿದರೂ ಎಂಪುಮಲಾಂಗ ತಂಡದವರು ಈ ಪಂದ್ಯವನ್ನು ಗೆಲ್ಲುವಲ್ಲಿ ಸಫಲರಾದರು. ಗೆಲ್ಲಲು 170 ರನ್ ಗುರಿ ಪಡೆದ ಈಸ್ಟರ್ನ್ಸ್ ತಂಡದವರು ನಿಗದಿತ 20 ಓವರ್’ನಲ್ಲಿ ಕೇವಲ 6 ವಿಕೆಟ್ ನಷ್ಟಕ್ಕೆ 127 ರನ್’ನಷ್ಟೇ ಗಳಿಸಲು ಶಕ್ಯರಾದರು.