ಈ ಪಂದ್ಯ ಸುನಿಲ್ ಗವಾಸ್ಕರ್ ಪಾಲಿಗೆ ಎಂದೆಂದೂ ಮರೆಯಾಲಾಗದ ಪಂದ್ಯವಾಗಿ ಉಳಿದಿದೆ. ಅದು ಪ್ರಖ್ಯಾತಿಯ ಸಲುವಾಗಿಯಲ್ಲ ಬದಲಾಗಿ ಕುಖ್ಯಾತಿಯ ಸಲುವಾಗಿ.
ಬೆಂಗಳೂರು(ಜೂ.07); ಅದು ಭಾರತ ಹಾಗೂ ಇಂಗ್ಲೆಂಡ್ ನಡುವೆ ಲಾರ್ಡ್ಸ್'ನಲ್ಲಿ ನಡುವೆ ನಡೆದ ಮೊದಲ ವಿಶ್ವಕಪ್ ಪಂದ್ಯ.
ಉದ್ಘಾಟನಾ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ ನಿಗದಿತ 60 ಓವರ್'ಗಳಲ್ಲಿ 334ರನ್'ಗಳ ಬೃಹತ್ ಮೊತ್ತ ಕಲೆಹಾಕಿತು. ಸವಾಲಿನ ಮೊತ್ತ ಬೆನ್ನತ್ತಿದ ಭಾರತ ಕೇವಲ 132ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಆ ಪಂದ್ಯವನ್ನು ಭಾರತ 202ರನ್'ಗಳ ಅಂತರದ ಹೀನಾಯ ಸೋಲು ಕಂಡಿತು.
ಈ ಪಂದ್ಯ ಸುನಿಲ್ ಗವಾಸ್ಕರ್ ಪಾಲಿಗೆ ಎಂದೆಂದೂ ಮರೆಯಾಲಾಗದ ಪಂದ್ಯವಾಗಿ ಉಳಿದಿದೆ. ಅದು ಪ್ರಖ್ಯಾತಿಯ ಸಲುವಾಗಿಯಲ್ಲ ಬದಲಾಗಿ ಕುಖ್ಯಾತಿಯ ಸಲುವಾಗಿ. ಹೌದು ಲಿಟ್ಲ್ ಮಾಸ್ಟರ್ ಆ ಪಂದ್ಯದಲ್ಲಿ 174 ಎಸೆತಗಳನ್ನೆದುರಿಸಿ ಕಲೆಹಾಕಿದ್ದು ಕೇವಲ 36 ರನ್ ಮಾತ್ರ.
ಸನ್ನಿ ಬ್ಯಾಟಿಂಗ್ ಹೈಲೈಟ್ಸ್ ಹೀಗಿತ್ತು ನೋಡಿ...
ರನ್ : 36
ಎಸೆತಗಳು : 174
ಬೌಂಡರಿ : 01
ಸಿಕ್ಸರ್ : 00
ಸರಾಸರಿ : 20.68
