Asianet Suvarna News Asianet Suvarna News

ಅಂದು ಒಲಿಂಪಿಯನ್ ಬಾಕ್ಸರ್; ಇಂದು ಟ್ಯಾಕ್ಸಿ ಡ್ರೈವರ್..!

1994ರ ಏಷ್ಯಡ್‌'ನ ಕಂಚಿನ ಪದಕ ವಿಜೇತ, ಏಷ್ಯಾ ಬಾಕ್ಸಿಂಗ್ ಚಾಂಪಿಯನ್‌'ಶಿಪ್‌'ನಲ್ಲಿ ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದಿದ್ದ ಪಂಜಾಬ್ ಮೂಲದ ಲಖಾ ಸಿಂಗ್‌'ರ ನೋವಿನ ಕಥೆಯಿದು. ಏಷ್ಯನ್ ಚಾಂಪಿಯನ್‌'ಶಿಪ್'ನಲ್ಲಿ ಮಾತ್ರವಲ್ಲ 1996ರಲ್ಲಿ ಅಟ್ಲಾಂಟದಲ್ಲಿ ನಡೆದಿದ್ದ ಒಲಿಂಪಿಕ್ಸ್‌'ನಲ್ಲೂ ದೇಶವನ್ನು ಪ್ರತಿನಿಧಿಸಿದ್ದರು.

Olympian Lakha Singh struggling to make ends meet

ಚಂಡೀಗಢ(ಡಿ.26): ಆತ ದೇಶಕಂಡ ಅಪ್ರತಿಮ ಬಾಕ್ಸಿಂಗ್ ಪಟು. 90ರ ದಶಕದಲ್ಲಿ ಸಾಲು ಸಾಲು ಪದಕಗಳನ್ನು ಗೆದ್ದಿದ್ದ ಆತ ಇಂದು ಯುವ ಬಾಕ್ಸರ್‌'ಗಳಿಗೆ ಮಾರ್ಗದರ್ಶಕರಾಗಿರುತ್ತಾರೆ ಎಂದು ಭಾವಿಸಲಾಗಿತ್ತು. ಆದರೆ, ಆ ಪ್ರತಿಭಾನ್ವಿತ ಆಟಗಾರ ಇಂದು ಬಾಕ್ಸಿಂಗ್ ರಿಂಗ್‌'ನಿಂದಲೇ ದೂರ ಸರಿದಿದ್ದು, ತುತ್ತಿನ ಚೀಲ ತುಂಬಿಸಿಕೊಳ್ಳಲು ಲೂಧಿ ಯಾನದಲ್ಲಿ ಟ್ಯಾಕ್ಸಿ ಚಾಲಕರಾಗಿದ್ದಾರೆ.

1994ರ ಏಷ್ಯಡ್‌'ನ ಕಂಚಿನ ಪದಕ ವಿಜೇತ, ಏಷ್ಯಾ ಬಾಕ್ಸಿಂಗ್ ಚಾಂಪಿಯನ್‌'ಶಿಪ್‌'ನಲ್ಲಿ ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದಿದ್ದ ಪಂಜಾಬ್ ಮೂಲದ ಲಖಾ ಸಿಂಗ್‌'ರ ನೋವಿನ ಕಥೆಯಿದು. ಏಷ್ಯನ್ ಚಾಂಪಿಯನ್‌'ಶಿಪ್'ನಲ್ಲಿ ಮಾತ್ರವಲ್ಲ 1996ರಲ್ಲಿ ಅಟ್ಲಾಂಟದಲ್ಲಿ ನಡೆದಿದ್ದ ಒಲಿಂಪಿಕ್ಸ್‌'ನಲ್ಲೂ ದೇಶವನ್ನು ಪ್ರತಿನಿಧಿಸಿದ್ದರು. ಆದರೆ, ನೀರಸ ಪ್ರದರ್ಶನ ನೀಡಿದ್ದ ಅವರು 17ನೇ ಸ್ಥಾನಗಳಿಸಿದ್ದರು.

ಇದಾದ ಬಳಿಕ ನಿಧಾನವಾಗಿ ಬಾಕ್ಸಿಂಗ್ ರಿಂಗ್‌'ನಿಂದ ಅವರು ದೂರ ಸರಿದಿದ್ದರು. ಆ ವೇಳೆ ರಾಜ್ಯ ಸರ್ಕಾರದಿಂದಾಗಲೀ, ಬಾಕ್ಸಿಂಗ್ ಸಂಸ್ಥೆಯಿಂದಾಗಲೀ ಯಾವುದೇ ಸಹಕಾರ ಕೂಡ ದೊರಕಲಿಲ್ಲ. ಇದರಿಂದ ಸಂಕಷ್ಟಕ್ಕೆ ಸಿಲುಕಿದ ಸಿಂಗ್, ಟ್ಯಾಕ್ಸಿ ಚಾಲಕ ವೃತ್ತಿಯನ್ನು ಆರಂಭಿಸಿದ್ದರು.

ಇದೀಗ ತಿಂಗಳಿಗೆ ₹8 ಸಾವಿರ ಸಂಪಾ ದಿಸುತ್ತಿದ್ದರೆ. ‘ನನ್ನ ಪರಿಸ್ಥಿತಿ ಕುರಿತು ಬಾಕ್ಸಿಂಗ್ ಸಂಸ್ಥೆಗೂ, ಪಂಜಾಬ್ ಸರ್ಕಾರಕ್ಕೂ ಹಲವು ಬಾರಿ ಪತ್ರ ಬರೆದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಸಿಂಗ್ ದೂರಿದ್ದಾರೆ.

Follow Us:
Download App:
  • android
  • ios