Asianet Suvarna News Asianet Suvarna News

ಕಾಮಣ್ಣ ಕಣ್ಣಿನಿಂದ ಬಾಲೆಯರ ರಕ್ಷಿಸಿದ ಕೃಷ್ಣೆ

50 ಮೀಟರ್‌'ಗಳವರೆಗೆ ಬಿಡದೆ ಬೆಂಬತ್ತಿದ ಕೃಷ್ಣ ಪೂನಿಯಾ, ಒಬ್ಬನನ್ನು ಹಿಡಿಯುವಲ್ಲಿ ಸಫಲವಾದರು. ಆದರೆ, ಇನ್ನಿಬ್ಬರು ಆಕೆಯಿಂದ ಬಚಾವಾದರು.

Olympian Krishna Poonia a real life hero after saving three women from being molested
  • Facebook
  • Twitter
  • Whatsapp

ನವದೆಹಲಿ(ಜ.03): ಮೂವರು ಬಾಲಕಿಯರನ್ನು ಬೀದಿ ಕಾಮಣ್ಣರ ಕಾಟದಿಂದ ರಕ್ಷಿಸುವುದರೊಂದಿಗೆ ಒಲಿಂಪಿಯನ್ ಹಾಗೂ 2010ರ ದೆಹಲಿ ಕಾಮನ್ವೆಲ್ತ್ ಕ್ರೀಡಾಕೂಟದ ಡಿಸ್ಕಸ್ ಥ್ರೋ ವಿಭಾಗದಲ್ಲಿ ಚಿನ್ನದ ಪದಕ ವಿಜೇತೆ ಕೃಷ್ಣ ಪೂನಿಯಾ ಕ್ರೀಡಾ ಬದುಕಿನಲ್ಲಿ ಮಾತ್ರವಲ್ಲ, ನಿಜ ಜೀವಿತದಲ್ಲಿಯೂ ತಾವೊಬ್ಬ ದಿಟ್ಟೆ ಎಂಬುದನ್ನು ನಿರೂಪಿಸಿದ್ದಾರೆ.

ರಾಜಸ್ಥಾನದ ಚಾರು ಜಿಲ್ಲೆಯ ರಾಜ್‌'ಗರ್‌'ನ ರೇಲ್ವೆ ಗೇಟ್ ಬಳಿ ನಡೆದ ಸಿನಿಮೀಯ ರೀತಿಯ ಘಟನೆಯನ್ನು ಅವರ ಪೂನಿಯಾ ಪತಿ ವಿರೇಂದ್ರ ಪೂನಿಯಾ ‘ಇಂಡಿಯಾ ಟುಡೇ’ಗೆ ವಿವರಿಸುವುದು ಹೀಗೆ.

ಘಟನೆ ನಡೆದದ್ದ ಹೊಸ ವರ್ಷದಂದು. ಸಾದಲ್‌'ಪುರದತ್ತ ತಮ್ಮ ಕಾರಿನಲ್ಲಿ ಪಯಣಿಸುತ್ತಿದ್ದ ಕೃಷ್ಣ ಪೂನಿಯಾ, ರೇಲ್ವೆ ಕ್ರಾಸಿಂಗ್ ಬಳಿ ಮೂವರು ಬಾಲಕಿಯರನ್ನು ಪುಂಡರ ಗುಂಪೊಂದು ಹಿಂಸಿಸುತ್ತಿದ್ದುದನ್ನು ಕಂಡರು. ಕಣ್ಣುಗಳಲ್ಲಿ ನೀರು ತುಂಬಿಕೊಂಡಿದ್ದ ಬಾಲಕಿಯರನ್ನು ಗಮನಿಸಿದ ಪೂನಿಯಾ ಕಾರು ನಿಲ್ಲಿಸಿ, ಅವರ ಬಳಿ ಸಾಗಿ ‘‘ಏನಾಯಿತು, ಯಾಕೆ ಅಳುತ್ತಿರುವಿರಿ?’’ ಎಂದು ಕೇಳಿದಾಗ, ‘‘ರೇಲ್ವೆ ಗೇಟ್ ಬಳಿ ಸಾಗುತ್ತಿದ್ದಾಗ ಪುಂಡರ ಗುಂಪೊಂದು ನಮ್ಮನ್ನು ಕಂಡು ಅಶ್ಲೀಲವಾಗಿ ಮಾತನಾಡುತ್ತಾ ಸಾಗಿದರಲ್ಲದೆ, ನಮ್ಮನ್ನು ಹಿಂಸಿಸಿದರು. ಸಾಲದ್ದಕ್ಕೆ ನಮ್ಮಲ್ಲಿ ಒಬ್ಬಳನ್ನು ಥಳಿಸಿದರು,’’ ಎಂದು ವಿವರಿಸಿದರು. ಯಾವಾಗ ಗೆಳತಿಯರು ಕೃಷ್ಣ ಪೂನಿಯಾಗೆ ನಡೆದ ಘಟನೆಯನ್ನು ವಿವರಿಸಿದರೋ, ಒಡನೆಯೇ ಅಲ್ಲಿಂದ ಪರಾರಿಯಾಗಲು ಬೀದಿ ಕಾಮಣ್ಣರು ಯತ್ನಿಸಿದರು. ಆದರೆ, 50 ಮೀಟರ್‌'ಗಳವರೆಗೆ ಬಿಡದೆ ಬೆಂಬತ್ತಿದ ಕೃಷ್ಣ ಪೂನಿಯಾ, ಒಬ್ಬನನ್ನು ಹಿಡಿಯುವಲ್ಲಿ ಸಫಲವಾದರು. ಆದರೆ, ಇನ್ನಿಬ್ಬರು ಆಕೆಯಿಂದ ಬಚಾವಾದರು.

ಈ ಘಟನೆಗೆ 300ರಿಂದ 400 ಜನರು ಸಾಕ್ಷಿಯಾದರು. ಬಳಿಕ ಪೊಲೀಸರು ಸುರಕ್ಷಿತವಾಗಿ ಬಾಲಕಿಯರನ್ನು ಅವರ ಮನೆಗೆ ತಲುಪಿಸಿದರು.

Follow Us:
Download App:
  • android
  • ios