ಹ್ಯಾಮಿಲ್ಟನ್[ನ.07]: ಇತ್ತೀಚಿನ ದಿನಗಳಲ್ಲಿ ಕ್ರಿಕೆಟ್ ಬ್ಯಾಟ್ಸ್’ಮನ್ ಸ್ನೇಹಿಯಾಗಿ ಬದಲಾಗುತ್ತಿದೆ. ಟಿ20 ಕ್ರಿಕೆಟ್ ಪರಿಚಯವಾದ ಮೇಲಂತೂ ಬೌಲರ್’ಗಳ ಮಾರಣಹೋಮ ಸಾಮಾನ್ಯ ಎಂಬಂತಾಗಿದೆ. ಓವರ್’ವೊಂದರಲ್ಲಿ ಆರು ಎಸೆತಗಳಲ್ಲೂ ಸಿಕ್ಸರ್ ಸಿಡಿಸಿದ ಆಟಗಾರರನ್ನು ನಾವು ಕಂಡಿದ್ದೇವೆ.

ಯುವರಾಜ್ ಸಿಂಗ್, ಹರ್ಷೆಲ್ ಗಿಬ್ಸ್ ಮುಂತಾದ ಕ್ರಿಕೆಟಿಗರು ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ 6 ಎಸೆತಗಳನ್ನು ಸಿಕ್ಸರ್ ಸಿಡಿಸಿ ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾರೆ. ಆದರೆ ಇದೀಗ ನ್ಯೂಜಿಲೆಂಡ್ ಕ್ರಿಕೆಟಿಗರು ಒಂದು ಓವರ್’ನಲ್ಲಿ ಬರೋಬ್ಬರಿ 43 ರನ್ ಸಿಡಿಸುವ ಮೂಲಕ ಹೊಸ ವಿಶ್ವದಾಖಲೆ ಬರೆದಿದ್ದಾರೆ. ನ್ಯೂಜಿಲೆಂಡ್’ನ ಲಿಸ್ಟ್ ’ಎ’ ಕ್ರಿಕೆಟ್’ನಲ್ಲಿ ನಾರ್ಥನ್ ಡಿಸ್ಟ್ರಿಕ್ಟ್ ತಂಡದ ಜೋ ಕಾರ್ಟರ್ ಹಾಗೂ ಬ್ರೆಟ್ ಹ್ಯಾಂಪ್ಟನ್ ಜೋಡಿ ಈ ದಾಖಲೆ ನಿರ್ಮಿಸಿದ್ದಾರೆ.  21 ವರ್ಷದ ವಿಲಿಯಂ ಲೂಡಿಕ್ ಬೌಲಿಂಗ್’ನಲ್ಲಿ ಬರೋಬ್ಬರಿ 43 ರನ್ ಚಚ್ಚಿ ಹೊಸ ಇತಿಹಾಸ ಬರೆದಿದ್ದಾರೆ.

ಈ ಮೊದಲು ಜಿಂಬಾಬ್ವೆ ತಂಡದ ಎಲ್ಟನ್ ಚಿಗುಂಬರ 39 ರನ್ ಸಿಡಿಸಿದ್ದೇ ಇಲ್ಲಿವರೆಗಿನ ದಾಖಲೆಯಾಗಿತ್ತು. ಚಿಗುಂಬರ ಡಾಕಾದಲ್ಲಿ 2013ರಲ್ಲಿ ನಡೆದ ಶೈಖ್ ಜಮಾಲ್ ಪರ ಆಡುವಾಗ ಅಲ್ಲಾವುದ್ದೀನ್ ಬಾಬು ವಿರುದ್ಧ 39 ರನ್ ಸಿಡಿಸಿದ್ದರು. 6 ಹಾಗೂ 7ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕಾರ್ಟರ್ ಮತ್ತು ಹ್ಯಾಮಿಲ್ಟನ್ ಜೋಡಿ ವಿಲಿಯಂ ಲೂಡಿಕ್ ಬೌಲಿಂಗ್’ನಲ್ಲಿ ರನ್ ಸಿಡಿಸಿದ್ದು ಹೀಗೆ..

4,6+nb,6+nb,6,1,6,6,6.