ನವದೆಹಲಿ(ಮಾ.12): ಸರ್ಕಾರದ ವಿವಿಧ ಯೋಜನೆಗಳಿಗೆ ಆಧಾರ್ ಕಡ್ಡಾಯವಾಗಿರುವಂತೆ, ಇನ್ಮುಂದೆ ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿಗಳಲ್ಲೂ ಆಧಾರ್ ಕಡ್ಡಾಯಗೊಂಡಿದೆ.

ಹಿರಿಯರ, ಕಿರಿಯ ಸಬ್-ಜೂನಿಯರ್ ಹಾಗೂ ಕೆಡೆಟ್ ಪಂದ್ಯಾವಳಿಗಳಲ್ಲಿ ಸ್ಪರ್ಧಿಸುವ ಕುಸ್ತಿಪಟುಗಳು ತಪ್ಪದೇ ಆಧಾರ್ ಕಾರ್ಡ್ ಹೊಂದಿರಬೇಕು ಎಂಬ ನಿಯಮವನ್ನು ಭಾರತ ಕುಸ್ತಿ ಸಂಸ್ಥೆ ಜಾರಿ ಮಾಡಿದೆ.

ವಯಸ್ಸಿನ ವಂಚನೆ, ಸುಳ್ಳು ವಾಸ ದೃಢೀಕರಣ ಪತ್ರ, ನಿರಾಪೇಕ್ಷಣ ಪತ್ರ ಪಡೆಯದೇ ಬೇರೆ ರಾಜ್ಯಗಳನ್ನು ಪ್ರತಿನಿಧಿಸುವುದು ಸೇರಿದಂತೆ ಇನ್ನೂ ಹಲವು ರೀತಿಯ ಮೋಸಗಳಿಗೆ ತೆರೆ ಎಳೆಯಲು ಆಧಾರ್ ಕಡ್ಡಾಯ ಗೊಳಿಸಲಾಗಿದೆ ಎಂದು ಕುಸ್ತಿ ಸಂಸ್ಥೆ ತಿಳಿಸಿದೆ.