ಕ್ರೀಡೆಗಳನ್ನು ಯುದ್ಧದ ರೀತಿಯಲ್ಲಿ ಬಿಂಬಿಸಲಾಗುತ್ತದೆ: ರವಿಶಂಕರ್ ಗುರೂಜಿ ಬೇಸರ
6ನೇ ವರ್ಲ್ಡ್ ಸಮ್ಮಿಟ್ ಫಾರ್ ಎಥಿಕ್ಸ್ ಆಂಡ್ ಲೀಡರ್ಶಿಪ್ ಇನ್ ಸ್ಪೋರ್ಟ್ಸ್ ಸಮಾವೇಶಕ್ಕೆ ಚಾಲನೆ
ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ಅಕ್ಟೊಬರ್ 13 & 14ರಂದು ಕಾರ್ಯಕ್ರಮ ಅಯೋಜನೆ
ಕಿರಣ್ ರಿಜಿಜು ಸೇರಿ ಹಲವು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿ
ಬೆಂಗಳೂರು(ಅ.13): "ಕ್ರೀಡೆಗಳು ಜನರನ್ನು ಒಗ್ಗೂಡಿಸುವ ಒಂದು ಮಾಧ್ಯಮವಾಗಬಲ್ಲವು. ಆದರೆ ಕ್ರೀಡೆಗಳನ್ನು ಯುದ್ಧೋಪಾದಿಯಲ್ಲಿ ಆಡಲಾಗುತ್ತದೆ ಮತ್ತು ಯುದ್ಧಗಳನ್ನು ಕ್ರೀಡೆಗಳಂತೆ ನಡೆಸುತ್ತಾರೆ. ಕ್ರೀಡಾಪಟುಗಳು ಜವಾಬ್ದಾರಿಯುತ ಭಾವದಿಂದ ಭಾಗವಹಿಸಬೇಕು ಮತ್ತು ತಮ್ಮ ಅಭಿಮಾನಿಗಳ ಬಗ್ಗೆ ಹಾಗೂ ವೀಕ್ಷಕರ ಬಗ್ಗೆ ಪವಿತ್ರಭಾವವನ್ನು ಹೊಂದಿರಬೇಕು ಎಂದು ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಮುಖ್ಯಸ್ಥ ರವಿಶಂಕರ್ ಗುರೂಜಿ ಹೇಳಿದ್ದಾರೆ.
ಇಲ್ಲಿನ ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ನಡೆದ 6ನೇ ವರ್ಲ್ಡ್ ಸಮ್ಮಿಟ್ ಫಾರ್ ಎಥಿಕ್ಸ್ ಆಂಡ್ ಲೀಡರ್ಶಿಪ್ ಇನ್ ಸ್ಪೋರ್ಟ್ಸ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನೈತಿಕತೆಯೆಂದರೆ, ತಮಗೆ ಇತರರು ಏನನ್ನು ಮಾಡಬಾರದ್ದೆಂದು ಬಯಸುತ್ತೇವೋ ಅದು. ಈ ಅರಿವು ಬಲು ಮುಖ್ಯ" ಎಂದು ರವಿಶಂಕರ್ ಗುರೂಜಿ ಅಭಿಪ್ರಾಯಪಟ್ಟರು.
ಇನ್ನು ಕೇಂದ್ರ ಸರ್ಕಾರದ ಕಾನೂನು ಹಾಗೂ ನ್ಯಾಯ ಮಂತ್ರಿಗಳಾದ ಕಿರಣ್ ರಿಜಿಜು ಮಾತನಾಡಿ "ಭಾರತದಲ್ಲಿ ಕ್ರೀಡಾ ಸಂಸ್ಕೃತಿಯನ್ನು ಪ್ರೋತ್ಸಾಹಿಸಬೇಕು. ಭಾರತವು ಪ್ರಾಚೀನ ಕಾಲದಿಂದಲೂ ಸಮೃದ್ಧ ಇತಿಹಾಸ ಹಾಗೂ ಕ್ರೀಡಾ ಪರಂಪರೆಯನ್ನು ಹೊಂದಿದೆ. ಕ್ರಿಕೆಟ್‌ನ ಹೊರತಾಗಿ ಇತರ ಕ್ರೀಡೆಗಳನ್ನೂ ವೀಕ್ಷಿಸುವ ವೀಕ್ಷಕರನ್ನು ಸೆಳೆಯುವಂತಹ ವಾತಾವರಣವನ್ನು ಸೃಷ್ಟಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
Murder Case: ಕುಸ್ತಿಪಟು ಸುಶೀಲ್ ಕುಮಾರ್ ಮೇಲೆ ಚಾರ್ಜ್ ಶೀಟ್ ಸಲ್ಲಿಕೆ..!
ಇತ್ತೀಚೆಗಿನ ವರ್ಷಗಳಲ್ಲಿ ದೇಶದೊಳಗೆ ಕ್ರೀಡಾ ಸಂಸ್ಕೃತಿಯನ್ನು, ಸಾಮಾಜಿಕ ವಿಕಸನವು ನಾವು ನಿರೀಕ್ಷಿಸಿದಷ್ಟು ಆಗಿಲ್ಲ. ಕ್ರೀಡೆ ಎಂದರೆ ಕೇವಲ ಸೋಲು-ಗೆಲುವು ಮಾತ್ರವಲ್ಲ. ನಿಮ್ಮ ನೆಚ್ಚಿನ ಕ್ರೀಡಾಪಟುಗಳನ್ನು ಪ್ರೀತಿಸುವುದು ಒಳ್ಳೆಯ ಲಕ್ಷಣ. ಎಲ್ಲರೂ ಕ್ರೀಡಾ ಸ್ಪೂರ್ತಿಯಿಂದ ಭಾಗವಹಿಸೋಣ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಹೇಳಿದರು.
" ಕ್ರೀಡೆಯೆಂದರೆ ಕೇವಲ ಆಟವಾಡುವುದಲ್ಲ. ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ರಾಷ್ಟ್ರ ಗೀತೆಯನ್ನು ಕೇಳಿಸಬಹುದಾದಂತಹ ಮಾಧ್ಯಮವಾಗಿ, ದೇಶಕ್ಕೆ ಗೌರವವನ್ನು ತರವಂತಹದ್ದು ನಿಜವಾದ ಸಾಧನೆ" ಎಂದು ಭಾರತ ಹಾಕಿ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದ ಹರ್ಯಾಣದ ಕ್ರೀಡಾ ಸಚಿವ ಸಂದೀಪ್ ಸಿಂಗ್ ಕಿವಿಮಾತು ಹೇಳಿದರು.
ದೇಶದ ಖ್ಯಾತ ಬಿಲಿಯರ್ಡ್ಸ್ ಹಾಗೂ ಸ್ನೂಕರ್ ಆಟಗಾರ ಪಂಕಜ್ ಅಡ್ವಾಣಿ ಮಾತನಾಡಿ, " ಕ್ರೀಡಾಜಗತ್ತಿನಲ್ಲಿ FIR ಎಂದರೆ- ಫೇರ್‌ಪ್ಲೇ, ಇಂಟಿಗ್ರಿಟಿ ಮತ್ತು ರೆಸ್ಪೆಕ್ಟ್- ನೇರ, ಸಮಗ್ರ, ಗೌರವ . ಕೇವಲ ನಮ್ಮ ಕ್ರೀಡೆಗಾಗಿ ಮಾತ್ರವಲ್ಲದೆ, ನಮ್ಮ ಎದುರಾಳಿಗಳಿಗಾಗಿ, ವೀಕ್ಷಕರಿಗಾಗಿ ಮತ್ತು ನಿಯಮಗಳಿಗಾಗಿ ನಾವು ಕ್ರೀಡೆಯನ್ನು ಗೌರವಾನ್ವಿತ ರೀತಿಯಲ್ಲಿ ಆಡಬೇಕು" ಎಂದರು.
"ಯುನೈಟೆಡ್ ಫಾರ್ ಎಥಿಕ್ಸ್ ಇನ್ ಸ್ಪೋರ್ಟ್ಸ್" ವಿಷಯಾಧಾರಿತಗೋಷ್ಠಿಯಲ್ಲಿ ಸಾಂಕ್ರಾಮಿಕದ ನಂತರದ ಜಗತ್ತಿನಲ್ಲಿ ತುಂಬಿರುವ ಘರ್ಷಣೆ,. ಆರ್ಥಿಕ ಬಿಕ್ಕಟ್ಟು ಹಾಗೂ ಮಾನಸಿಕ ರೋಗಗಳ ಸಮಸ್ಯೆಗಳು ತುಂಬಿ ಹೋಗಿರುವುದರಿಂದ, ನೇರವಾದ ಹಾಗೂ ಶುದ್ಧ ಕ್ರೀಡೆಗಳ ಮೂಲಕ ಜಗತ್ತಿನ ಜನರನ್ನು ಒಂದುಗೂಡಿಸುವ ಬಗ್ಗೆಯೂ ಚರ್ಚಿಸಲಾಯಿತು.
ಇದೇ ಸಂದರ್ಭದಲ್ಲಿ ಈ ಸಮಾವೇಶದಲ್ಲಿ 2022ನೇ ಎಥಿಕ್ಸ್ ಇನ್ ಸ್ಪೋರ್ಟ್ಸ್ ಪ್ರಶಸ್ತಿಯನ್ನು ನೀಡಲಾಯಿತು. ಕ್ರೀಡಾ ಕ್ಷೇತ್ರದಲ್ಲಿ ಹಾಗೂ ತಮ್ಮ ಜೀವನದಲ್ಲಿ ನೈತಿಕತೆಯ ಹಾಗೂ ಮಾನವೀಯ ಮೌಲ್ಯಗಳ ಮಹತ್ವವನ್ನು ಎತ್ತಿ ಹಿಡಿದ ವ್ಯಕ್ತಿಗಳಿಗೆ ಹಾಗೂ ಸಂಸ್ಥೆಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಈ ವರ್ಷದ ಪ್ರಶಸ್ತಿಯ ವಿಜೇತರು:
1. ಎಫ್ ಸಿ ಯೂನಿಯನ್: ಬರ್ಲಿನ್ ಇವಿ ಫಾರ್ ಔಟ್ ಸ್ಟಾಂಡಿಂಗ್ ಆರ್ಗನೈಸೇಷನ್.
2. ಕು. ಹಮ್ಜಾ ಹಾಮ್ಮರ್ಸೆಂಗ್ -ಎಡಿನ್, ಕ್ರೀಡೆಗಳಲ್ಲಿ ಮಾನಸಿಕ ಆರೋಗ್ಯದ ಪ್ರೋತ್ಸಾಹಕ್ಕಾಗಿ.
3. ಕ್ರೀಡೆಗೆ ಅದ್ಭುತ ಕೊಡುಗೆಯನ್ನು ನೀಡಿರುವ ಕಿರಣ್ ರಿಜುಜು.
4. ಶ್ರೀ ಸಂದೀಪ್ ಸಿಂಗ್- ಫಾರ್ ರೀತಿಯ ಸಿಲಿಯನ್ಸ್ ಇನ್ ಸ್ಪೋರ್ಟ್ಸ್.
ಈ ಸಮಾವೇಶದಲ್ಲಿ ಶ್ರೀ ಶ್ರೀ ರವಿಶಂಕರ್, ಕಿರಣ್ ರಿಜುಜು, ರಾಷ್ಟ್ರೀಯ ಬ್ಯಾಡ್ಮಿಂಟನ್ ತಂಡದ ರಾಷ್ಟ್ರೀಯ ತರಬೇತುದಾರರಾದ ಪುಲ್ಲೆಲ ಗೋಪಿಚಂದ್, ನರೇನ್ ಕಾರ್ತಿಕೇಯನ್, ಭಾರತ ಮಹಿಳಾ ಹಾಕಿ ತಂಡದ ನಾಯಕಿ ಸವಿತಾ ಪೂನಿಯ, ಸಂದೀಪ್ ಸಿಂಗ್, ಹಾಕಿ ತಂಡದ ಗೋಲ್ ಕೀಪರ್ ಆದ ಪಿ.ಆರ್. ಶ್ರೀಜೇಶ್, ಪಂಕಜ್ ಅಡ್ವಾಣಿ ಮುಂತಾದ ಗಣ್ಯರು ಉಪಸ್ಥಿತರಿದ್ದರು.