ಒಲಿಂಪಿಯನ್ ಕುಸ್ತಿಪಟು ಸುಶೀಲ್ ಕುಮಾರ್ ಮೇಲೆ ಕೊಲೆ ಪ್ರಕರಣದಡಿ ಚಾರ್ಜ್‌ ಶೀಟ್ಸುಶೀಲ್ ಕುಮಾರ್ ಹಾಗೂ ಮತ್ತವರ 17 ಸಹಚರರ ಮೇಲೆ ಕೊಲೆ ಕೇಸ್‌ಯುವ ಕುಸ್ತಿಪಟು ಸಾಗರ್ ಧನಕರ್ ಕೊಲೆ ಪ್ರಕರಣದಲ್ಲಿ ಸುಶೀಲ್ ಭಾಗಿ ಆರೋಪ

ನವದೆಹಲಿ(ಅ.12): ಯುವ ಕುಸ್ತಿಪಟು ಸಾಗರ್ ಧನಕರ್ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಲಿಂಪಿಕ್ಸ್ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್ ಹಾಗೂ ಮತ್ತವರ 17 ಜನ ಸಹಚರರ ಮೇಲೆ ಡೆಲ್ಲಿ ಕೋರ್ಟ್‌ನಲ್ಲಿ ಚಾರ್ಜ್‌ ಶೀಟ್ ಸಲ್ಲಿಸಲಾಗಿದೆ. ಡೆಲ್ಲಿ ಕೋರ್ಟ್‌ನಲ್ಲಿ ಸಲ್ಲಿಸಲಾದ ಚಾರ್ಜ್‌ಶೀಟ್‌ನಲ್ಲಿ ಭಾರತೀಯ ದಂಡ ಸಂಹಿತೆ(ಐಪಿಸಿ)ಯಡಿ ಕೊಲೆ, ಕೊಲೆಗೆ ಯತ್ನ, ಗಲಭೆ ಸೃಷ್ಠಿ ಸೇರಿದಂತೆ ಹಲವು ಪ್ರಕರಣಗಳಡಿ ಪ್ರಕರಣ ದಾಖಲಿಸಲಾಗಿದೆ. ಇನ್ನು ಇದೇ ವೇಳೆ ತಲೆಮರೆಸಿಕೊಂಡಿರುವ ಮತ್ತಿಬ್ಬರು ಆರೋಪಿಗಳ ಮೇಲೂ ಸಹಾ ಚಾರ್ಜ್‌ ಶೀಟ್‌ನಲ್ಲಿ ಪ್ರಕರಣ ದಾಖಲಿಸಲಾಗಿದೆ.

ಈಶಾನ್ಯ ದೆಹಲಿಯಲ್ಲಿರುವ ಛತ್ರಸಾಲ್ ಒಳಾಂಗಣ ಸ್ಟೇಡಿಯಂನಲ್ಲಿ ಅಭ್ಯಾಸ ನಡೆಸುತ್ತಿದ್ದ ಜೂನಿಯರ್ ನ್ಯಾಷನಲ್ ಕುಸ್ತಿ ಚಾಂಪಿಯನ್‌ ಸಾಗರ್ ಧನಕರ್ ಎನ್ನುವ ಕುಸ್ತಿಪಟುವನ್ನು ಹತ್ಯೆ ಮಾಡಲಾಗಿತ್ತು. ಇದಾದ ಬಳಿಕ ಸುಶೀಲ್ ಕುಮಾರ್ ಹಾಗೂ ಮತ್ತವರ ಸಂಗಡಿಗರು ತಲೆ ಮರೆಸಿಕೊಂಡಿದ್ದರು. ಆದರೆ 2021ರ ಮೇ ತಿಂಗಳಿನಲ್ಲಿ ಡೆಲ್ಲಿ ಪೊಲೀಸರು ಸುಶೀಲ್ ಕುಮಾರ್ ಹಾಗೂ ಮತ್ತವರ ಸಂಗಡಿಗರನ್ನು ಮಂಡ್ಕಾ ಎಂಬಲ್ಲಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.

Scroll to load tweet…

ಛತ್ರಸಾಲ್ ಸ್ಟೇಡಿಯಂನಲ್ಲಿ ಮೇ 04ರಂದು ಜೂನಿಯರ್ ನ್ಯಾಷನಲ್ ಕುಸ್ತಿ ಚಾಂಪಿಯನ್‌ ಸಾಗರ್ ಧನಕರ್ ಎನ್ನುವ ಕುಸ್ತಿಪಟುವಿನ ಮೇಲೆ ಸುಶೀಲ್ ಕುಮಾರ್ ಹಾಗೂ ಮತ್ತವರ ಸಂಗಡಿಗರು ಮಾರಣಾಂತಿಕ ಹಲ್ಲೆ ನಡೆಸಿದ್ದರು ಎನ್ನುವ ಆರೋಪ ಕೇಳಿ ಬಂದಿದೆ. ಇದಾದ ಬಳಿಕ ಸಾಗರ್ ಧನಕರ್ ಎನ್ನುವವರನ್ನು ಆತನ ಸ್ನೇಹಿತರು ಆಸ್ಪತ್ರೆಗೆ ದಾಖಲಿಸಿದರಾದರೂ, ಚಿಕಿತ್ಸೆ ಫಲಕಾರಿಯಾಗದೇ ಮರು ದಿನವೇ ಕೊನೆಯುಸಿರೆಳೆದಿದ್ದರು. ಇದರ ಬೆನ್ನಲ್ಲೇ ಸಾಗರ್ ಪೋಷಕರು ಸುಶೀಲ್ ಕುಮಾರ್ ಹಾಗೂ ಮತ್ತವರ ಸಹಚರರನ್ನು ಬಂಧಿಸಿ ಶಿಕ್ಷೆ ನೀಡುವಂತೆ ಆಗ್ರಹಿಸಿದ್ದರು.

Murder Case: ಕುಸ್ತಿಪಟು ಸುಶೀಲ್‌ ಕುಮಾರ್‌ಗೆ ಜಾಮೀನು ನಿರಾಕರಣೆ

ಪೊಲೀಸ್ ಮೂಲಗಳ ಪ್ರಕಾರ, ಯುವ ಕುಸ್ತಿಪಟುವಾಗಿದ್ದ ಸಾಗರ್ ಧನಕರ್, ಸುಶೀಲ್ ಕುಮಾರ್ ಒಡೆತನದ ಮಾಡೆಲ್ ಟೌನ್ ಫ್ಲಾಟ್‌ನಲ್ಲಿ ವಾಸವಾಗಿದ್ದರು. ಇನ್ನು ಸುಶೀಲ್ ಕುಮಾರ್, ಸಾಗರ್ ಧನಕರ್ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋವೊಂದನ್ನು ಸ್ಥಳೀಯರೊಬ್ಬರು ವಿಡಿಯೋ ರೆಕಾರ್ಡ್‌ ಮಾಡಿಕೊಂಡಿದ್ದರು. ಇನ್ನು ಸುಶೀಲ್ ಕುಮಾರ್ ಒಡೆತನದ ಫ್ಲಾಟ್‌ನಲ್ಲಿ ವಾಸವಿದ್ದ ಸಾಗರ್ ಧನಕರ್ ಹಾಗೂ ಸುಶೀಲ್ ಕುಮಾರ್ ನಡುವೆ ಬಾಡಿಗೆ ವಿಚಾರದಲ್ಲಿ ಆಗಾಗ ವಾಗ್ವಾದ ನಡೆಯುತ್ತಿತ್ತು. ಇದೇ ವಿಚಾರಕ್ಕೆ ಕೊಲೆ ನಡೆದಿರಬಹುದು ಎಂದು ಊಹಿಸಲಾಗಿದೆ.