2 ವರ್ಷಗಳ ಮೊದಲೇ ಅವರು ಸ್ಯಾಂಪ್ರಸ್‌ ದಾಖಲೆಯನ್ನು ಮುರಿದಿದ್ದರು. ಸ್ಯಾಂಪ್ರಸ್‌ 6 ವರ್ಷಗಳ ಕಾಲ ನಂ.1 ಸ್ಥಾನಿಯಾಗಿದ್ದರು. ಇದೇ ವೇಳೆ ಜೋಕೋ 400 ವಾರಗಳ ಕಾಲ ನಂ.1 ಸ್ಥಾನದಲ್ಲಿದ್ದ ದಾಖಲೆಯನ್ನೂ ಬರೆಯಲಿದ್ದಾರೆ.

ಟ್ಯುರಿನ್‌(ನ.14): 24 ಗ್ರ್ಯಾನ್‌ಸ್ಲಾಂಗಳ ಒಡೆಯ ನೋವಾಕ್‌ ಜೋಕೋವಿಚ್‌ ಎಟಿಪಿ ವಿಶ್ವ ರ್‍ಯಾಂಕಿಂಗ್‌ನಲ್ಲಿ ದಾಖಲೆಯ 8ನೇ ವರ್ಷ ನಂ.1 ಸ್ಥಾನಿಯಾಗಿರಲಿದ್ದಾರೆ. ವರ್ಷಾಂತ್ಯಕ್ಕೆ ಅಗ್ರಸ್ಥಾನಿಯಾಗಿರಬೇಕಿದ್ದರೆ ಸರ್ಬಿಯಾದ ಜೋಕೋಗೆ ಎಟಿಪಿ ಫೈನಲ್ಸ್‌ನಲ್ಲಿ ಮೊದಲ ಸುತ್ತಿನ ಪಂದ್ಯ ಗೆಲ್ಲಬೇಕಿತ್ತು. ಅದನ್ನು ಸಾಧಿಸಿದ ಅವರು ಹೊಸ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡರು. 2 ವರ್ಷಗಳ ಮೊದಲೇ ಅವರು ಸ್ಯಾಂಪ್ರಸ್‌ ದಾಖಲೆಯನ್ನು ಮುರಿದಿದ್ದರು. ಸ್ಯಾಂಪ್ರಸ್‌ 6 ವರ್ಷಗಳ ಕಾಲ ನಂ.1 ಸ್ಥಾನಿಯಾಗಿದ್ದರು. ಇದೇ ವೇಳೆ ಜೋಕೋ 400 ವಾರಗಳ ಕಾಲ ನಂ.1 ಸ್ಥಾನದಲ್ಲಿದ್ದ ದಾಖಲೆಯನ್ನೂ ಬರೆಯಲಿದ್ದಾರೆ.

ಜಪಾನ್‌ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌ ಟೂರ್ನಿ ಇಂದಿನಿಂದ ಆರಂಭ

ಕುಮಮೊಟೊ: ಜಪಾನ್‌ ಮಾಸ್ಟರ್ಸ್‌ ಸೂಪರ್‌ 500 ಬ್ಯಾಡ್ಮಿಂಟನ್‌ ಟೂರ್ನಿ ಮಂಗಳವಾರದಿಂದ ಆರಂಭಗೊಳ್ಳಲಿದ್ದು, ಭಾರತದ ತಾರಾ ಶಟ್ಲರ್‌ಗಳಾದ ಎಚ್‌.ಎಸ್‌.ಪ್ರಣಯ್‌, ಲಕ್ಷ್ಯ ಸೇನ್‌ ಪ್ರಶಸ್ತಿ ನಿರೀಕ್ಷೆಯಲ್ಲಿದ್ದಾರೆ. ಏಷ್ಯನ್‌ ಗೇಮ್ಸ್‌ ಬಳಿಕ ಗಾಯದಿಂದಾಗಿ ಡೆನ್ಮಾರ್ಕ್‌ ಓಪನ್‌ ಹಾಗೂ ಪ್ರೆಂಚ್‌ ಓಪನ್‌ ಟೂರ್ನಿಗೆ ಗೈರಾಗಿದ್ದ ಪ್ರಣಯ್‌ ಮತ್ತೆ ಅಂಕಣದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಸೇನ್‌ ಹಾಗೂ ಮಾಜಿ ವಿಶ್ವ ನಂ.1 ಕಿದಂಬಿ ಶ್ರೀಕಾಂತ್‌ ಸುಧಾರಿತ ಪ್ರದರ್ಶನ ನೀಡಲು ಕಾಯುತ್ತಿದ್ದಾರೆ. 

ವಿಶ್ವಕಪ್ ಲೀಗ್ ಹಂತದ ಶ್ರೇಷ್ಠ ತಂಡ ಪ್ರಕಟಿಸಿದ ಕ್ರಿಕೆಟ್ ಆಸ್ಟ್ರೇಲಿಯಾ..! ವಿರಾಟ್ ಕೊಹ್ಲಿಗೆ ನಾಯಕ ಪಟ್ಟ

ಪುರುಷರ ಸಿಂಗಲ್ಸ್‌ನಲ್ಲಿ ಪ್ರಿಯಾನ್ಶು ರಾಜಾವತ್‌ ಕೂಡಾ ಕಣದಲ್ಲಿದ್ದಾರೆ. ಮಹಿಳಾ ಸಿಂಗಲ್ಸ್‌ನಲ್ಲಿ ಪಿ.ವಿ.ಸಿಂಧು ಭಾರತದಿಂದ ಸ್ಪರ್ಧಿಸುತ್ತಿರುವ ಏಕೈಕ ಶಟ್ಲರ್‌ ಎನಿಸಿಕೊಂಡಿದ್ದು, ಪುರುಷರ ಡಬಲ್ಸ್‌ನಲ್ಲಿ ಭಾರತದ ತಾರಾ ಜೋಡಿ ಸಾತ್ವಿಕ್‌-ಚಿರಾಗ್‌ ಶೆಟ್ಟಿ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.

ಚಾಂಪಿಯನ್ಸ್‌ ಟ್ರೋಫಿಗಿಲ್ಲ ಶ್ರೀಲಂಕಾ, ನೆದರ್‌ಲೆಂಡ್ಸ್‌

ನವದೆಹಲಿ: ಈ ಬಾರಿ ವಿಶ್ವಕಪ್‌ನಲ್ಲಿ ಅಗ್ರ-8ರಲ್ಲಿ ಸ್ಥಾನ ಗಿಟ್ಟಿಸಲು ವಿಫಲವಾದ ಶ್ರೀಲಂಕಾ ಹಾಗೂ ನೆದರ್‌ಲೆಂಡ್ಸ್‌ 2025ರ ಚಾಂಪಿಯನ್ಸ್‌ ಟ್ರೋಫಿಯಿಂದಲೂ ಹೊರಗುಳಿಯಲಿವೆ. ಮಾಜಿ ಚಾಂಪಿಯನ್‌ ಶ್ರೀಲಂಕಾ ಇತಿಹಾಸದಲ್ಲೇ ಮೊದಲ ಬಾರಿ ಟೂರ್ನಿಗೆ ಅರ್ಹತೆ ಪಡೆಯಲು ವಿಫಲವಾಯಿತು. ಆತಿಥೇಯ ಪಾಕಿಸ್ತಾನ ನೇರವಾಗಿ ಅರ್ಹತೆ ಪಡೆದಿದ್ದರೆ, ಭಾರತ, ದ.ಆಫ್ರಿಕಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್‌, ಅಫ್ಘಾನಿಸ್ತಾನ, ಇಂಗ್ಲೆಂಡ್‌, ಬಾಂಗ್ಲಾದೇಶ ವಿಶ್ವಕಪ್‌ನ ಅಂಕಪಟ್ಟಿಯ ಅಧಾರದಲ್ಲಿ ಟೂರ್ನಿ ಪ್ರವೇಶಿಸಿದವು. 2025ರ ಟೂರ್ನಿ ಪಾಕಿಸ್ತಾನದಲ್ಲಿ ನಿಗದಿಯಾಗಿದೆ.