ಈ ಆವೃತ್ತಿಯ ಮೊದಲ ಮೂರು ಪಂದ್ಯಗಳಲ್ಲಿ ಧೋನಿ ಕ್ರಮವಾಗಿ 12, 5 ಹಾಗೂ 11 ರನ್ ಗಳಿಸಿದ್ದಾರೆ.

ಕೋಲ್ಕತಾ(ಏ.13): ಪುಣೆ ಸೂಪುರ್‌'ಜೈಂಟ್ ತಂಡದ ಮಾಜಿ ನಾಯಕ ಎಂ.ಎಸ್. ಧೋನಿ ಅವರ ಟಿ20 ಕ್ರಿಕೆಟ್ ಬ್ಯಾಟಿಂಗ್ ಅನ್ನು ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಪ್ರಶ್ನಿಸಿದ್ದಾರೆ. ಐಪಿಎಲ್‌ನಲ್ಲಿ ಸಾದಾರಣ ಆಟ ಪ್ರದರ್ಶಿಸುತ್ತಿರುವ ಧೋನಿ ಚುಟುಕು ಮಾದರಿಗೆ ಸೂಕ್ತರೋ ಅಲ್ಲವೋ ಎಂಬ ಗೊಂದಲವಿದೆ ಎಂದು ಗಂಗೂಲಿ ಹೇಳಿದ್ದಾರೆ.

‘‘ಏಕದಿನ ಮಾದರಿಯಲ್ಲಿ ಅವರೊಬ್ಬ ಶ್ರೇಷ್ಠ ಆಟಗಾರ. ಆದರೆ ಟಿ20 ಮಾದರಿಗೂ ಅವರು ಸೂಕ್ತ ಬ್ಯಾಟ್ಸ್‌ಮನ್ ಅನ್ನುವ ಬಗ್ಗೆ ಅನುಮಾನವಿದೆ’’ ಎಂದು ಸೌರವ್ ಹೇಳಿದ್ದಾರೆ. ಕಳೆದ 10 ವರ್ಷಗಳಿಂದ ಟಿ20 ಕ್ರಿಕೆಟ್ ಆಡುತ್ತಿರುವ ಧೋನಿ ಕೇವಲ ಒಂದು ಅರ್ಧಶತಕವನ್ನಷ್ಟೇ ದಾಖಲಿಸಿದ್ದಾರೆ. ಇದು ಅವರ ಚುಟುಕು ಕ್ರಿಕೆಟ್ ಬಗ್ಗೆ ಪ್ರಶ್ನೆಯೇಳುವಂತೆ ಮಾಡಿದೆ ಎಂದು ದಾದಾ ಹೇಳಿದ್ದಾರೆ

ಈ ಆವೃತ್ತಿಯ ಮೊದಲ ಮೂರು ಪಂದ್ಯಗಳಲ್ಲಿ ಧೋನಿ ಕ್ರಮವಾಗಿ 12, 5 ಹಾಗೂ 11 ರನ್ ಗಳಿಸಿದ್ದಾರೆ.