Asianet Suvarna News Asianet Suvarna News

ಮುಂದಿನ ವರ್ಷದಿಂದ ರಣಜಿ ಪಂದ್ಯವನ್ನಾಡಲಿರುವ ಈಶಾನ್ಯ ರಾಜ್ಯಗಳು

ಮುಂದಿನ ವರ್ಷದಿಂದ ಪ್ರತ್ಯೇಕವಾಗಿ ಆರೂ ತಂಡಗಳಿಗೆ ರಣಜಿಯಲ್ಲಿ ಆಡಲು ಅವಕಾಶ ಕಲ್ಪಿಸಲಾಗುವುದು, ಕಿರಿಯರ ವಿಭಾಗದಲ್ಲಿ ಈ ವರ್ಷದಿಂದಲೇ ತಂಡಗಳು ಪಾಲ್ಗೊಳ್ಳಬಹುದು ಎಂದು ವಿನೋದ್ ಹೇಳಿದರು.

North East states to play Ranji Trophy next year

ನವದೆಹಲಿ(ಸೆ.09): ಆರು ಈಶಾನ್ಯ ರಾಜ್ಯಗಳಿಗೆ 2018ರಿಂದ ರಣಜಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗುವುದು ಎಂದು ಬಿಸಿಸಿಐ ಆಡಳಿತ ಮಂಡಳಿ ಮುಖ್ಯಸ್ಥ ವಿನೋದ್ ರಾಯ್ ಭರವಸೆ ನೀಡಿದ್ದಾರೆ.

ಮೇಘಾಲಯ, ಮಣಿಪುರ, ಮಿಜೋರಾಮ್, ಸಿಕ್ಕಿಂ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ ಅಧಿಕಾರಿಗಳು ವಿನೋದ್ ರಾಯ್ ಅವರನ್ನು ಭೇಟಿ ಮಾಡಿ ಆರು ರಾಜ್ಯಗಳು ಒಟ್ಟಾಗಿ ಒಂದು ತಂಡ ರಚಿಸಿ ರಣಜಿಯಲ್ಲಿ ಆಡಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.

ಮುಂದಿನ ವರ್ಷದಿಂದ ಪ್ರತ್ಯೇಕವಾಗಿ ಆರೂ ತಂಡಗಳಿಗೆ ರಣಜಿಯಲ್ಲಿ ಆಡಲು ಅವಕಾಶ ಕಲ್ಪಿಸಲಾಗುವುದು, ಕಿರಿಯರ ವಿಭಾಗದಲ್ಲಿ ಈ ವರ್ಷದಿಂದಲೇ ತಂಡಗಳು ಪಾಲ್ಗೊಳ್ಳಬಹುದು ಎಂದು ವಿನೋದ್ ಹೇಳಿದರು.

Follow Us:
Download App:
  • android
  • ios