ಪದಾರ್ಪಣೆ ಪಂದ್ಯದಲ್ಲೇ ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದ ಪೃಥ್ವಿ ಶಾ ಪ್ರತಿಭೆ ಕುರಿತು ನಾಯಕ ವಿರಾಟ್ ಕೊಹ್ಲಿ ಮಾತನಾಡಿದ್ದಾರೆ. 18ರ ಪೋರನ ಆತ್ಮವಿಶ್ವಾಸ ನೋಡಿ ಸ್ವತಃ ಕೊಹ್ಲಿಯೇ ಬೆಚ್ಚಿಬಿದ್ದಿದ್ದಾರೆ.

ನವದೆಹಲಿ(ಅ.16): ವೆಸ್ಟ್ಇಂಡೀಸ್ ವಿರುದ್ದದ ಟೆಸ್ಟ್ ಸರಣಿಯಲ್ಲಿ ಅದ್ಬುತ ಬ್ಯಾಟಿಂಗ್ ಪ್ರದರ್ಶನ ನೀಡಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಪೃಥ್ವಿ ಶಾ ದಿಗ್ಗಜ ಕ್ರಿಕೆಟಿಗರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಇದೀಗ ನಾಯಕ ವಿರಾಟ್ ಕೊಹ್ಲಿ ಕೂಡ ಪೃಥ್ವಿ ಶಾ ಪ್ರಬುದ್ಧತೆಗೆ ಹ್ಯಾಟ್ಸ್ ಆಫ್ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

18,19 ವರ್ಷ ವಯಸ್ಸಿದ್ದಾಗ ಪೃಥ್ವಿ ಶಾಗಿರುವಷ್ಟು ಕ್ರಿಕೆಟ್ ಕಲೆಯ ಶೇಕಡಾ 10 ರಷ್ಟು ಸಹ ನಮಗ್ಯಾರಿಗೂ ಇರಲಿಲ್ಲ. ಮೊದಲ ಸರಣಿಯಲ್ಲೇ ಇಷ್ಟೊಂದು ಆತ್ಮವಿಶ್ವಾಸಗಗೊಂದಿಗೆ ಬ್ಯಾಟಿಂಗ್ ಮಾಡಿದ್ದು ಪೃಥ್ವಿ ಮೇಲಿನ ವಿಶ್ವಾಸ ಹೆಚ್ಚಿಸಿದೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

ಪೃಥ್ವಿ ಶಾ ತಮ್ಮ ಪ್ರತಿಭೆಯನ್ನ ಬಳಿಸಿಕೊಂಡ ಟೀಂ ಇಂಡಿಯಾಗೆ ದೊಡ್ಡ ಮಟ್ಟದಲ್ಲಿ ನೆರವಾಗಲಿ ಎಂದು ಕೊಹ್ಲಿ ಹೇಳಿದ್ದಾರೆ. ವಿಂಡೀಸ್ ವಿರುದ್ದದ 2 ಪಂದ್ಯದಿಂದ 237 ರನ್ ಸಿಡಿಸಿದ ಪೃಥ್ವಿ ಶಾ 1 ಶತಕ ಹಾಗೂ 1 ಅರ್ಧಶತಕ ಸಿಡಿಸಿದ್ದಾರೆ.