ನನ್ನ ಹಾಗೂ ಧೋನಿಯ ನಡುವೆ ಅದ್ಭುತ ಹೊಂದಾಣಿಕೆಯಿದೆ. ಕ್ರೀಸ್'ನಲ್ಲಿ ನಾವಿಬ್ಬರು ಬ್ಯಾಟಿಂಗ್ ಮಾಡುವಾಗ ಧೋನಿ 2 ರನ್'ಗೆ ಕರೆ ನೀಡಿದರೆ ನಾನು ಕಣ್ಣುಮುಚ್ಚಿಕೊಂಡು ಓಡುತ್ತೇನೆ. ಯಾಕೆ ಅಂದ್ರೆ ಧೋನಿಯ ಲೆಕ್ಕಾಚಾರ ಯಾವಾಗಲೂ ಸರಿಯಾಗಿರುತ್ತದೆ. ಹಾಗಾಗಿ ಅವರ ಮೇಲೆ ಅಷ್ಟೊಂದು ವಿಶ್ವಾಸವಿದೆ ಎಂದು ವಿರಾಟ್ ಹೇಳಿದ್ದಾರೆ.

ನವದೆಹಲಿ(ನ.06): ಭಾರತ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ ಹಾಗೂ ತಮ್ಮ ನಡುವಿನ ಸಂಬಂಧವನ್ನು ಯಾರಿಂದಲೂ ಹಾಳು ಮಾಡಲು ಸಾಧ್ಯವಿಲ್ಲ ಎಂದು ವಿರಾಟ್ ಕೊಹ್ಲಿ ಸ್ಪಷ್ಟಪಡಿಸಿದ್ದಾರೆ.

‘ನಮ್ಮಿಬ್ಬರ ನಡುವೆ ಮನಸ್ತಾಪವಿದೆ. ಧೋನಿಯನ್ನು ತಂಡದಿಂದ ಹೊರಹಾಕಲು ನಾನು ಹೊಂಚು ಹಾಕಿದ್ದೇನೆ ಎಂದೆಲ್ಲಾ ಹಲವರು ಬರೆದಿದ್ದಾರೆ. ಆ ಬರಹಗಳನ್ನು ನಾನೂ ಓದುವುದಿಲ್ಲ, ಧೋನಿಯೂ ಓದುವುದಿಲ್ಲ. ನಮ್ಮಿಬ್ಬರ ನಡುವಿನ ಸಂಬಂಧ ದಿನೇ ದಿನೇ ಗಟ್ಟಿಯಾಗುತ್ತಿದೆ. ಅವರೇ ನನಗೆ ಸ್ಫೂರ್ತಿ’ ಎಂದಿದ್ದಾರೆ.

ನನ್ನ ಹಾಗೂ ಧೋನಿಯ ನಡುವೆ ಅದ್ಭುತ ಹೊಂದಾಣಿಕೆಯಿದೆ. ಕ್ರೀಸ್'ನಲ್ಲಿ ನಾವಿಬ್ಬರು ಬ್ಯಾಟಿಂಗ್ ಮಾಡುವಾಗ ಧೋನಿ 2 ರನ್'ಗೆ ಕರೆ ನೀಡಿದರೆ ನಾನು ಕಣ್ಣುಮುಚ್ಚಿಕೊಂಡು ಓಡುತ್ತೇನೆ. ಯಾಕೆ ಅಂದ್ರೆ ಧೋನಿಯ ಲೆಕ್ಕಾಚಾರ ಯಾವಾಗಲೂ ಸರಿಯಾಗಿರುತ್ತದೆ. ಹಾಗಾಗಿ ಅವರ ಮೇಲೆ ಅಷ್ಟೊಂದು ವಿಶ್ವಾಸವಿದೆ ಎಂದು ವಿರಾಟ್ ಹೇಳಿದ್ದಾರೆ.

ಇದೇವೇಳೆ ಟೀಂ ಇಂಡಿಯಾದಲ್ಲಿ ನಗಿಸುವ ಆಟಗಾರ ಹಾರ್ದಿಕ್ ಪಾಂಡ್ಯ ಹಾಗೂ ಊಹಿಸಲಾಗದ ಆಟಗಾರ ಶಿಖರ್ ಧವನ್ ಎಂದು ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.