ಕಳೆದ ರಾತ್ರಿಯಷ್ಟೇ ಗ್ರೇಟರ್ ನೋಯ್ಡಾದಲ್ಲಿ ಐರ್ಲೆಂಡ್ ವಿರುದ್ಧ ನಡೆದ ಟಿ20 ಪಂದ್ಯದಲ್ಲಿ ರಶೀದ್ ಮೂರು ರನ್ ನೀಡಿ 5 ವಿಕೆಟ್ ಪಡೆದು ಮಿಂಚಿದ್ದರು.

ಬೆಂಗಳೂರು(ಮಾ.11): ಐಪಿಎಲ್ ಹರಾಜಿನಲ್ಲಿ ಬರೋಬ್ಬರಿ 12.5 ಕೋಟಿ ರೂಪಾಯಿಗೆ ಆರ್‌ಸಿಬಿ ತಂಡ ಸೇರಿಕೊಂಡಿದ್ದ ಇಂಗ್ಲೆಂಡ್ ವೇಗಿ ಟೈಮಲ್ ಮಿಲ್ಸ್ ಅವರನ್ನು ಸಿಪಿಎಲ್ ಪ್ಲೇಯರ್ ಡ್ರಾಫ್ಟ್‌ನಲ್ಲಿ ಯಾವ ತಂಡವೂ ಖರೀದಿ ಮಾಡದೇ ಇರುವುದು ಅಚ್ಚರಿ ಮೂಡಿಸಿದೆ. ಇನ್ನು ನ್ಯೂಜಿಲ್ಯಾಂಡ್ ತಂಡದ ಟೆಸ್ಟ್ ಸ್ಪೆಷಲಿಸ್ಟ್ ಎಂದೇ ಗುರುತಿಸಿಕೊಂಡಿರುವ ಕೋರಿ ಆ್ಯಂಡರ್'ಸನ್ ಕೂಡ 2017ರ ಕೆರಿಬಿಯನ್ ಪ್ರೀಮಿಯರ್ ಲೀಗ್'ನಲ್ಲಿ ಯಾವ ಪ್ರಾಂಚೈಸಿಯು ಕೊಂಡುಕೊಳ್ಳಲು ಮನಸ್ಸು ಮಾಡಲಿಲ್ಲ.

ಐಪಿಎಲ್ 10ನೇ ಆವೃತ್ತಿಯ ಆಟಗಾರರ ಹರಾಜಿನಲ್ಲಿ ಸನ್‌ರೈಸರ್ಸ್‌ ತಂಡದ ಪಾಲಾಗಿದ್ದ ಆಫ್ಘಾನಿಸ್ತಾದ ಕ್ರಿಕೆಟಿಗರಾದ ಮೊಹಮದ್ ನಬಿ ಹಾಗೂ ರಶೀದ್ ಖಾನ್, ಈ ಆವೃತ್ತಿಯ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲೂ ಆಡುವ ಅವಕಾಶ ಪಡೆದಿದ್ದಾರೆ.

ಆಲ್‌ರೌಂಡರ್ ನಬಿ ಅವರನ್ನು ಸೇಂಟ್ ಕೀಟ್ಸ್ ತಂಡ 90,000 ಅಮೆರಿಕನ್ ಡಾಲರ್ ನೀಡಿ ಖರೀದಿ ಮಾಡಿದರೆ, ಲೆಗ್ ಸ್ಪಿನ್ನರ್ ರಶೀದ್ ಖಾನ್ 60,000 ಅಮೆರಿಕನ್ ಡಾಲರ್ ಮೊತ್ತಕ್ಕೆ ಗಯಾನಾ ವಾರಿಯರ್ಸ್‌ ತಂಡ ಸೇರಿಕೊಂಡರು.

ಕಳೆದ ರಾತ್ರಿಯಷ್ಟೇ ಗ್ರೇಟರ್ ನೋಯ್ಡಾದಲ್ಲಿ ಐರ್ಲೆಂಡ್ ವಿರುದ್ಧ ನಡೆದ ಟಿ20 ಪಂದ್ಯದಲ್ಲಿ ರಶೀದ್ ಮೂರು ರನ್ ನೀಡಿ 5 ವಿಕೆಟ್ ಪಡೆದು ಮಿಂಚಿದ್ದರು.