ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಅಪಾರ ಕನ್ನಡ ಅಭಿಮಾನಿಗಳಿದ್ದರೂ ಐಪಿಎಲ್'ನಲ್ಲಿ ಕನ್ನಡ ವೀಕ್ಷಕ ವಿವರಣೆ ನೀಡದೆ ಕನ್ನಡವನ್ನು ಕಡೆಗಣಿಸಲಾಗುತ್ತಿದೆ ಎಂಬ ಆರೋಪವೂ ಕೇಳಿಬರುವ ಸಾಧ್ಯತೆಯಿದೆ.

ಕೋಲ್ಕತಾ(ಮಾ.29): ಹತ್ತನೇ ಆವೃತ್ತಿಯ ಐಪಿಎಲ್'ನಲ್ಲಿ ಟಿವಿಯಲ್ಲಿ ಕನ್ನಡ ವೀಕ್ಷಕ ವಿವರಣೆ ನೀಡುತ್ತಿಲ್ಲ ಎಂದು ಸೋನಿ ಪಿಕ್ಚರ್ಸ್ ನೆಟ್'ವರ್ಕ್ ಸ್ಪಷ್ಟಪಡಿಸಿದೆ.

ಈ ಬಾರಿಯ ಐಪಿಎಲ್ ವೀಕ್ಷಕ ವಿವರಣೆಯು ಇಂಗ್ಲೀಷ್, ಹಿಂದಿ, ತಮಿಳು, ತೆಲುಗು ಹಾಗೂ ಬೆಂಗಾಲಿ ಭಾಷೆಯಲ್ಲಿ ಪ್ರಸಾರವಾಗಲಿದೆ. ಕನ್ನಡದಲ್ಲಿ ಐಪಿಎಲ್ ವೀಕ್ಷಕ ವಿವರಣೆ ನೀಡುತ್ತಿಲ್ಲ ಎಂದು ಸೋನಿ ಪಿಕ್ಚರ್ಸ್ ನೆಟ್'ವರ್ಕ್'ನ ವಕ್ತಾರರು ಸ್ಪಷ್ಟಪಡಿಸಿದ್ದಾರೆ.

ಕಳೆದ ಆವೃತ್ತಿಯಿಂದ ಸೋನಿಯು ಕೆಲವು ಪ್ರಾದೇಶಿಕ ಭಾಷೆಯಲ್ಲಿ ವೀಕ್ಷಕ-ವಿವರಣೆ ನೀಡಲು ಪ್ರಾರಂಭಿಸಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಅಪಾರ ಕನ್ನಡ ಅಭಿಮಾನಿಗಳಿದ್ದರೂ ಐಪಿಎಲ್'ನಲ್ಲಿ ಕನ್ನಡ ವೀಕ್ಷಕ ವಿವರಣೆ ನೀಡದೆ ಕನ್ನಡವನ್ನು ಕಡೆಗಣಿಸಲಾಗುತ್ತಿದೆ ಎಂಬ ಆರೋಪವೂ ಕೇಳಿಬರುವ ಸಾಧ್ಯತೆಯಿದೆ.

10ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಏಪ್ರಿಲ್ 5ರಿಂದ ಮೇ 21ರವರೆಗೆ ನಡೆಯಲಿದೆ.

ಈ ಮೊದಲೇ ತಮಿಳು ಭಾಷೆಯಲ್ಲಿ ವೀಕ್ಷಕ ವಿವರಣೆ ನೀಡುವುದರ ಕುರಿತು ಸೋನಿ ಸ್ಷಷ್ಟಪಡಿಸಿತ್ತು. 2017 ಆವೃತ್ತಿಯಲ್ಲಿ ಶಡಗೋಪ್ಪನ್ ರಮೇಶ್, ಹೇಮಂಗ್ ಬದಾನಿ ಮತ್ತು ವಿ.ಬಿ. ಚಂದ್ರಶೇಖರ್ ತಮಿಳಿನಲ್ಲಿ ವೀಕ್ಷಕ ವಿವರಣೆ ನೀಡಿದರೆ, ವೆಂಕಟಾಪತಿ ರಾಜು, ವೇಣುಗೋಪಾಲ ರಾವ್ ಮತ್ತು ಕಲ್ಯಾಣ ಕೃಷ್ಣನ್ ತೆಲುಗಿನಲ್ಲಿ ಕಾಮೆಂಟರಿ ನೀಡಲಿದ್ದಾರೆ.