ತೀರ್ಪಿನ ವೇಳೆ ನ್ಯಾಯಾಧೀಶರ ಕಾರ್ಲೊಸ್ ಮುಟಾ ‘ನೇಯ್ಮರ್‌ರಂತಹ ಜನಪ್ರಿಯ ಆಟಗಾರರು ಈ ರೀತಿ ಮಾಡುವುದು ಸಮಾಜಕ್ಕೆ ಕೆಟ್ಟ ಸಂದೇಶ ರವಾನಿಸಲಿದೆ’ ಎಂದರು.

ಲಂಡನ್(ಅ.20): ತೆರಿಗೆ ವಂಚನೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಬ್ರೆಜಿಲ್ ಹಾಗೂ ಪ್ಯಾರಿಸ್ ಸೇಂಟ್ ಜರ್ಮೈನ್ ತಂಡದ ತಾರಾ ಫುಟ್ಬಾಲಿಗ ನೇಯ್ಮರ್‌ಗೆ ಬ್ರೆಜಿಲ್ ನ್ಯಾಯಾಲಯ ಬರೋಬ್ಬರಿ 1.2 ಮಿಲಿಯನ್ ಡಾಲರ್ (₹7.7 ಕೋಟಿ ರುಪಾಯಿ) ದಂಡ ವಿಧಿಸಿದೆ.

ವಾದದ ವೇಳೆ ಸರ್ಕಾರಿ ವಕೀಲರು ನೇಯ್ಮರ್ ತಮ್ಮ ಕುಟುಂಬಸ್ಥರ ಹೆಸರಿಗೆ ಆದಾಯವನ್ನು ವರ್ಗಾಯಿಸುವ ಮೂಲಕ ತೆರಿಗೆ ವಂಚನೆ ನಡೆಸಿದ್ದಾರೆ. ನಿಯಮದ ಪ್ರಕಾರ ಕಟ್ಟಬೇಕಿದ್ದ ತೆರಿಗೆಗಿಂತ ಅರ್ಧದಷ್ಟನ್ನು ಮಾತ್ರ ಪಾವತಿಸಿದ್ದಾರೆ ಎಂದು ತಿಳಿಸಿದರು.

ತೀರ್ಪಿನ ವೇಳೆ ನ್ಯಾಯಾಧೀಶರ ಕಾರ್ಲೊಸ್ ಮುಟಾ ‘ನೇಯ್ಮರ್‌ರಂತಹ ಜನಪ್ರಿಯ ಆಟಗಾರರು ಈ ರೀತಿ ಮಾಡುವುದು ಸಮಾಜಕ್ಕೆ ಕೆಟ್ಟ ಸಂದೇಶ ರವಾನಿಸಲಿದೆ’ ಎಂದರು.