ಕೊನೆ ಓವರ್'ನ ವರೆಗೂ ತೀವ್ರ ಕುತೂಹಲ ಕೆರಳಿಸಿದ್ದ ಎರಡನೇ ಏಕದಿನ ಪಂದ್ಯದಲ್ಲಿ ಕಿವೀಸ್ ಪಡೆ ಕೊನೆಗೂ ಗೆಲುವಿನ ನಗೆ ಬೀರಿದೆ. ಸತತ ಸೋಲಿನಿಂದ ಬೆಂಡಾಗಿದ್ದ ನ್ಯೂಜಿಲ್ಯಾಂಡ್ ತಂಡವು ಟೀಂ ಇಂಡಿಯಾ ಎದುರು 6 ರನ್'ಗಳ ರೋಚಕ ಗೆಲುವು ಸಾಧಿಸಿತು.
ನವದೆಹಲಿ(ಅ.20): ಕೊನೆ ಓವರ್'ನ ವರೆಗೂ ತೀವ್ರ ಕುತೂಹಲ ಕೆರಳಿಸಿದ್ದ ಎರಡನೇ ಏಕದಿನ ಪಂದ್ಯದಲ್ಲಿ ಕಿವೀಸ್ ಪಡೆ ಕೊನೆಗೂ ಗೆಲುವಿನ ನಗೆ ಬೀರಿದೆ. ಸತತ ಸೋಲಿನಿಂದ ಬೆಂಡಾಗಿದ್ದ ನ್ಯೂಜಿಲ್ಯಾಂಡ್ ತಂಡವು ಟೀಂ ಇಂಡಿಯಾ ಎದುರು 6 ರನ್'ಗಳ ರೋಚಕ ಗೆಲುವು ಸಾಧಿಸಿತು.
ಇಲ್ಲಿಯವರೆಗೂ ಬಲಿಷ್ಟ ಬ್ಯಾಟಿಂಗ್ ಸಾಮರ್ಥ್ಯ ಪ್ರದರ್ಶಿಸಿದ್ದ ಟೀಂ ಇಂಡಿಯಾ, ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಕಳಪೆ ಪ್ರದರ್ಶನ ನೀಡುವುದರ ಮೂಲಕ ಕೇನ್ ವಿಲಿಯಮ್ಸ್ ಪಡೆಗೆ ಶರಣಾಯಿತು. ನ್ಯೂಜಿಲ್ಯಾಂಡ್ ನೀಡಿದ 242 ರನ್'ಗಳ ಸಾಧಾರಣ ಗುರಿ ಬೆನ್ನುಹತ್ತಿದ ಟೀಂ ಇಂಡಿಯಾ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ತಂಡದ ಮೊತ್ತ 21 ರನ್'ಗಳಾಗುವಷ್ಟರಲ್ಲಿ ಆರಂಭಿಕ ಆಟಗಾರ ರೋಹಿತ್ ಶರ್ಮಾ ಬೌಲ್ಟ್'ಗೆ ವಿಕೆಟ್ ಒಪ್ಪಿಸಿ ಹೊರನಡೆದರು. ಇನ್ನು ಭರವಸೆಯ ಆಟಗಾರ ವಿರಾಟ್ ಕೊಹ್ಲಿ ಕೂಡ ಕೇವಲ 9 ರನ್ ಗಳಿಸಿ ಔಟಾಗುವ ಮೂಲಕ ತೀವ್ರ ನಿರಾಸೆ ಅನುಭವಿಸಿದರು. ಮಧ್ಯಮ ಕ್ರಮಾಂಕದಲ್ಲಿ ನಾಯಕ ಧೋನಿ ಹಾಗೂ ಕೇದಾರ್ ಜಾದವ್ ತಂಡಕ್ಕೆ ಸ್ವಲ್ಪ ಚೇತರಿಕೆ ನೀಡಲು ಪ್ರಯತ್ನಿಸಿದರಾದರೂ ಗೆಲುವಿನ ಸನೀಹದಲ್ಲಿ ತಂದು ನಿಲ್ಲಿಸಲು ಸಾಧ್ಯವಾಗಲಿಲ್ಲ. ಕೊನೆಯ ಹಂತದಲ್ಲಿ ಆಲ್ರೌಂಡರ್ ಹಾರ್ಧಿಕ್ ಪಾಂಡ್ಯ ಏಕಾಂಗಿ ಹೋರಾಟ ನಡೆಸಿದರಾದರೂ ತಂಡವನ್ನು ಗೆಲುವಿನೆಡೆಗೆ ಸಾಗಿಸಲು ವಿಫಲರಾದರು.
ಮಿಂಚಿದ ಕೇನ್ ವಿಲಿಯಮ್ಸ್'ನ್:
ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ನಾಯಕ ಧೋನಿಯ ನಿರ್ಧಾರವನ್ನು ಸಮರ್ಥಿಸುವಂತೆ ಬೌಲಿಂಗ್ ಮಾಡಿದ ಉಮೇಶ್ ಯಾದವ್ ಮೊದಲ ಓವರ್'ನ ಎರಡನೇ ಎಸೆತದಲ್ಲೇ ಮಾರ್ಟಿನ್ ಗುಪ್ಟೀಲ್ ಅವರನ್ನು ಪೆವಿಲಿಯನ್'ಗೆ ಕಳಿಸಿ ಉತ್ತಮ ಆರಂಭ ಒದಗಿಸಿಕೊಟ್ಟರು. ಆದರೆ ನಾಯಕ ಕೇನ್ ವಿಲಿಯಮ್ಸ್ ನೆಲಕಚ್ಚಿ ಆಡುವ ಮೂಲಕ ತಂಡವನ್ನು ಸಂಕಷ್ಟದಿಂದ ಪಾರುಮಾಡಿದರು. 128 ಎಸೆತಗಳಲ್ಲಿ 118 ರನ್ ಬಾರಿಸಿದ ವಿಲಿಯಮ್ಸ್'ನ್ ತಮ್ಮ ವೃತ್ತಿ ಜೀವನದ 8 ನೇ ಶತಕ ದಾಖಲಿಸಿದರು. ಇವರಿಗೆ ಟಾಮ್ ಲಾಥಮ್ ಉತ್ತಮ ಸಾಥ್ ನೀಡಿದರು. ಒಂದು ಹಂತದಲ್ಲಿ ಕೀವಿಸ್ ಪಡೆ 300 ರನ್ ಗಳಿಸಬಹುದೇನೋ ಎಂದು ಊಹಿಸಲಾಗುತ್ತಿತ್ತು. ಆದರೆ ಬಿಗು ಬೌಲಿಂಗ್ ದಾಳಿ ನಡೆಸಿದ ಜಪ್ಫ್ರೀತ್ ಬುಮ್ರಾ ಹಾಗೂ ಅಮಿತ್ ಮಿಶ್ರಾ ತಲಾ ಮೂರು ವಿಕೆಟ್ ಪಡೆದು ಕಿವೀಸ್ ಪಡೆಗೆ ಬ್ರೇಕ್ ಹಾಕಿದರು.
ಶತಕ ಬಾರಿಸಿದ ಕೇನ್ ವಿಲಿಯಮ್ಸ್'ನ್ ಅರ್ಹವಾಗಿಯೇ ಪಂದ್ಯಪುರುಷೋತ್ತಮ ಗೌರವಕ್ಕೆ ಪಾತ್ರರಾ
