ವೆಲ್ಲಿಂಗ್ಟನ್‌[ಆ.06]: ನ್ಯೂಜಿಲೆಂಡ್‌ನ ದಿಗ್ಗಜ ಸ್ಪಿನ್ನರ್‌ ಡೇನಿಯಲ್‌ ವೆಟ್ಟೋರಿ ಅವರ ಜೆರ್ಸಿ ಸಂಖ್ಯೆ 11 ಅನ್ನು ನ್ಯೂಜಿಲೆಂಡ್‌ ಕ್ರಿಕೆಟ್‌ ಮಂಡಳಿ ನಿವೃತ್ತಿಗೊಳಿಸಿದೆ. ಈ ಮೂಲಕ ಮಾಜಿ ನಾಯಕನಿಗೆ ಗೌರವ ಸಲ್ಲಿಸಿದೆ. 

ಭಾರತ ವಿರುದ್ಧದ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ನ್ಯೂಜಿಲೆಂಡ್‌ಗೆ ವೆಟೋರಿ ಟಿಪ್ಸ್!

ವೆಟ್ಟೋರಿ ಮಾತ್ರವಲ್ಲ ತಂಡದ ಪರ 200ಕ್ಕಿಂತ ಹೆಚ್ಚು ಏಕದಿನ ಪಂದ್ಯಗಳನ್ನಾಡಿದ ಎಲ್ಲಾ ಆಟಗಾರರ ಜೆರ್ಸಿ ಸಂಖ್ಯೆಯನ್ನೂ ನಿವೃತ್ತಿಗೊಳಿಸುವುದಾಗಿ ನ್ಯೂಜಿಲೆಂಡ್‌ ಕ್ರಿಕೆಟ್‌ ಮಂಡಳಿ ತಿಳಿಸಿದೆ. ವೆಟ್ಟೋರಿ 291 ಏಕದಿನ ಪಂದ್ಯಗಳಿಂದ 305 ವಿಕೆಟ್‌ ಪಡೆದಿದ್ದರು.

ಟೆಸ್ಟ್‌ನಲ್ಲಿ ನಂ.7 ಜೆರ್ಸಿಗೆ ಬಿಸಿಸಿಐ ವಿದಾಯ?

ನ್ಯೂಜಿಲೆಂಡ್ ಪರ ಸ್ಟಿಫನ್ ಫ್ಲೆಮಿಂಗ್, ಕ್ರಿಸ್ ಹ್ಯಾರಿಸ್, ರಾಸ್ ಟೇಲರ್, ನೇಥನ್ ಆ್ಯಶ್ಲೆ ಹಾಗೂ ಕ್ರಿಸ್ ಕ್ರೇನ್ಸ್ ಕೂಡಾ ಇನ್ನೂರಕ್ಕೂ ಹೆಚ್ಚು ಏಕದಿನ ಪಂದ್ಯಗಳನ್ನಾಡಿದ್ದಾರೆ. ಆದರೆ ಯಾವೆಲ್ಲಾ ನಂಬರ್ ಜೆರ್ಸಿಗಳನ್ನು ನಿವೃತ್ತಿಗೊಳಿಸಲಿದೆ ಎನ್ನುವುದನ್ನು ಇದುವರೆಗೂ ಸ್ಪಷ್ಟ ಪಡಿಸಿಲ್ಲ.