ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಗೌರವ ಸೂಚಕವಾಗಿ ಬಿಸಿಸಿಐ ಟೆಸ್ಟ್ ಕ್ರಿಕೆಟ್‌ನಲ್ಲಿ ನಂ.7 ಜೆರ್ಸಿ ನಿವೃತ್ತಿಗೊಳಿಸಲು ಬಿಸಿಸಿಐ ತೀರ್ಮಾನಿಸಿದೆ ಎನ್ನಲಾಗಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ಮುಂಬೈ(ಜು.26): ಮುಂಬರುವ ವೆಸ್ಟ್‌ಇಂಡೀಸ್‌ ವಿರುದ್ಧದ ಟೆಸ್ಟ್‌ ಸರಣಿ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ವ್ಯಾಪ್ತಿಗೆ ಸೇರಲಿದ್ದು, ಐಸಿಸಿಯ ನೂತನ ನಿಯಮದನ್ವಯ ಭಾರತ ತಂಡದ ಆಟಗಾರರು ಸಂಖ್ಯೆಯುಳ್ಳ ಜೆರ್ಸಿಗಳನ್ನು ತೊಡಲಿದ್ದಾರೆ. 
ಕೊಹ್ಲಿ ಬಾಯ್ಸ್‌ಗೆ ಹೊಸ ಜರ್ಸಿ; ಬೆಂಗಳೂರು ಕಂಪನಿ ಪ್ರಾಯೋಜಕತ್ವ!

ತಂಡದ ಬಹುತೇಕ ಆಟಗಾರರು ತಮ್ಮ ಸೀಮಿತ ಓವರ್‌ ಜೆರ್ಸಿ ಸಂಖ್ಯೆಗಳನ್ನೇ ಉಳಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಏಕದಿನ, ಟಿ20ಯಲ್ಲಿ 18ನೇ ನಂಬರ್‌ ಜೆರ್ಸಿ ತೊಡಲಿರುವ ಕೊಹ್ಲಿ, ಟೆಸ್ಟ್‌ನಲ್ಲೂ ಅದೇ ಸಂಖ್ಯೆ ಆಯ್ಕೆ ಮಾಡಿಕೊಳ್ಳಲಿದ್ದಾರೆ ಎನ್ನಲಾಗಿದೆ. ಮಾಜಿ ನಾಯಕ ಎಂ.ಎಸ್‌.ಧೋನಿ, ಟೆಸ್ಟ್‌ ಕ್ರಿಕೆಟ್‌ನಲ್ಲಿ ಆಡದ ಕಾರಣ, ಅವರು ಧರಿಸುವ ನಂ.7 ಜೆರ್ಸಿಯನ್ನು ನಿವೃತ್ತಿಗೊಳಿಸಲು ಬಿಸಿಸಿಐ ಚಿಂತನೆ ನಡೆಸುತ್ತಿದೆ. 

ಟೀಂ ಇಂಡಿಯಾಗೆ 28 ವರ್ಷಗಳ ಬಳಿಕ 2011ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ಇನ್ನು ಐಸಿಸಿಯ ಮೂರು ಪ್ರಮುಖ ಟ್ರೋಫಿ ಗೆದ್ದುಕೊಟ್ಟ ಏಕೈಕ ನಾಯಕ ಎನ್ನುವ ದಾಖಲೆ ಧೋನಿ ಹೆಸರಿನಲ್ಲಿದೆ. ಧೋನಿ ನಾಯಕತ್ವದಲ್ಲಿ ಐಸಿಸಿ 3 ಪ್ರಶಸ್ತಿ[2007ರ ಟಿ20 ವಿಶ್ವಕಪ್, 2011ರ ಏಕದಿನ ವಿಶ್ವಕಪ್ ಹಾಗೂ 2013ರ ಚಾಂಪಿಯನ್ಸ್ ಟ್ರೋಫಿ]ಗಳನ್ನು ಭಾರತ ಜಯಿಸಿದೆ. ಹೀಗಾಗಿ ಬಿಸಿಸಿಐ ಧೋನಿಗೆ ಗೌರವ ಸೂಚಕವಾಗಿ ಧರಿಸುವ ನಂ.7 ಜೆರ್ಸಿಯನ್ನು ನಿವೃತ್ತಗೊಳಿಸಲು ಚಿಂತಿಸಿದೆ.