ವೆಲ್ಲಿಂಗ್ಟನ್[ಏ.20]: ನ್ಯೂಜಿಲ್ಯಾಂಡ್ ನ ಮಹಿಳಾ ಕ್ರಿಕೆಟರ್ ಹ್ಯಾಲೆ ಜೆನ್ಸನ್ ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟರ್ ಹೆನ್ಕಾಕ್ ರನ್ನು ವರಿಸಿದ್ದಾರೆ. ಇವರಿಬ್ಬರೂ  ಮೊದಲ ಬಾರಿ 'ಮೆಲ್ಬರ್ನ್ ಸ್ಟಾರ್ಸ್' ತಂಡದ ಪರವಾಗಿ ಆಟವಾಡಿದ್ದರು. ಜೆನ್ಸನ್ ಎರಡು ವರ್ಷ ಮೆಲ್ಬರ್ನ್ ಸ್ಟಾರ್ಸ್ ತಂಡದ ಪರವಾಗಿ ಆಡಿದ್ದರು. ಬಳಿಕ ಮೆಲ್ಬರ್ನ್ ರೆನೆಗೆಡ್ಸ್ ತಂಡಕ್ಕೆ ಸೇರ್ಪಡೆಗೊಂಡರು. ಆದರೆ ಹೆನ್ಕಾಕ್ ಮಾತ್ರ ತಮ್ಮ ತಂಡವನ್ನು ಬದಲಾಯಿಸಿಕೊಂಡಿಲ್ಲ. ಕಳೆದ ವಾರಾಂತ್ಯದಲ್ಲಿ ಈ ಸ್ಟಾರ್ ಕ್ರಿಕೆಟ್ ಜೋಡಿ ಮದುವೆಯಾಗಿದ್ದಾರೆ.

ಬಿಗ್ ಬ್ಯಾಶ್ ಲೀಗ್ ಮೆಲ್ಬರ್ನ್ ಸ್ಟಾರ್ಸ್ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ವಿವಾಹದ ಮಾಹಿತಿ ನೀಡಿದೆ ಹಾಗೂ ಈ ಇಬ್ಬರೂ ಕ್ರಿಕೆಟರ್ ಗಳ ವೈವಾಹಿಕ ಜೀವನಕ್ಕೆ ಶುಭ ಕೋರಿದೆ. 

26 ವರ್ಷದ ಜೆನ್ಸನ್ 2014ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಅಂತರಾಷ್ಟ್ರೀಯ ಡೆಬ್ಯೂ ಮಾಡಿದ್ದರು. ಇನ್ನು 23 ವರ್ಷದ ಹೆನ್ಕಾಕ್ ಕಳೆದ BBL ಸೀಜನ್ ನಲ್ಲಿ ನಡೆದ 14 ಪಂದ್ಯಗಳಲ್ಲಿ 14 ವಿಕೆಟ್ ಉರುಳಿಸುವ ಮೂಲಕ ದ್ವಿತೀಯ ಸ್ಟಾರ್ ಬೌಲರ್ ಪಟ್ಟ ಗಳಿಸಿದ್ದರು.