ಲೆಜೆಂಡ್ ಆಟಗಾರನಿಂದ ಬದುಕಿದ್ದೀನಿ ಅಂತಾ ಟ್ವೀಟ್! ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಸಾವಿನ ಸುಳ್ಳು ಸುದ್ದಿ! ನ್ಯೂಜಿಲ್ಯಾಂಡ್ ಮಾಜಿ ಆಟಗಾರ ನಾಥನ್ ಮೆಕಲಮ್ ಸಾವಿನ ಸುದ್ದಿ ವೈರಲ್! ಫೋಟೋ ಸಮೇತ ಸಾವಿನ ಸುದ್ದಿ ಅಲ್ಲಗಳೆದ ನಾಥನ್ ಮೆಕಲಮ್ 

ವೆಲ್ಲಿಂಗ್ಟನ್(ಡಿ.01): ನ್ಯೂಜಿಲ್ಯಾಂಡ್ ತಂಡದ ಮಾಜಿ ಕ್ರಿಕೆಟಿಗ ನಾಥನ್ ಮೆಕಲಮ್ ಮೃತಪಟ್ಟಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 

ಸಾವಿನ ಸುದ್ದಿಗೆ ಪ್ರತಿಕ್ರಿಯಿಸಿರುವ ನಾಥನ್ ಮೆಕಲಮ್, ತಾವು ಜೀವಂತವಾಗಿರುವುದಾಗಿ ಟ್ವೀಟ್ ಮಾಡಿದ್ದಾರೆ. ತಮ್ಮ ಸಹೋದರ ಬ್ರೆಂಡನ್ ಮೆಕಲಮ್ ಜೊತೆಗಿನ ತಮ್ಮ ಸೆಲ್ಫಿ ಫೋಟೋವನ್ನು ಟ್ವೀಟ್ ಮಾಡುತ್ತಾ ಸಾವಿನ ಸುಳ್ಳು ವದಂತಿಗೆ ಅಂತ್ಯವಾಡಿದ್ದಾರೆ.

ಮೆಕಲಮ್ ಟ್ವೀಟ್ ನಲ್ಲಿ ನಾನು ಜೀವಂತವಾಗಿದ್ದೇನೆ ಮತ್ತು ಹಿಂದಿಗಿಂತಲೂ ಹೆಚ್ಚು ಬಲಿಷ್ಠನಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.

Scroll to load tweet…

ನ್ಯೂಜಿಲ್ಯಾಂಡ್ ಪರ 2007 ರಿಂದ 2016ರ ವರೆಗೆ ತಂಡವನ್ನು ಪ್ರತಿನಿಧಿಸಿದ್ದ ಮೆಕಲಂ, 84 ಏಕದಿನ ಹಾಗೂ 63 ಟಿ20 ಪಂದ್ಯಗಳನ್ನು ಆಡಿದ್ದಾರೆ.