ಶಸ್ತ್ರ ಚಿಕಿತ್ಸೆಗೆ ಒಳಗಾದ ಟೆನಿಸ್ ಪಟು ಆ್ಯಂಡಿ ಮರ್ರೆ

ಇಂಜುರಿಯಿಂದ ವಿದಾಯದ ಸೂಚನೆ ನೀಡಿದ್ದ ಬ್ರಿಟನ್ ಟೆನಿಸ್ ಪಟು ಆ್ಯಂಡಿ ಮರ್ರೆ ಇದೀಗ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ಮರ್ರೆ ಸರ್ಜರಿ ಬಳಿಕ ಟೆನಿಸ್‌ಗೆ ಮರಳುತ್ತಾರ? ಇಲ್ಲಿದೆ ವಿವರ.

Britain tennis legend Andy Murray undergoes hip resurfacing surgery

ಲಂಡನ್(ಜ.30): ಬ್ರಿಟನ್ ನಂ.1 ಟೆನಿಸ್ ಪಟು ಆ್ಯಂಡಿ ಮರ್ರೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. 3 ಗ್ರ್ಯಾಂಡ್ ಸ್ಲಾಂ ಗೆದ್ದ ಆ್ಯಂಡಿ, ಆಸ್ಟ್ರೇಲಿಯನ್ ಓಪನ್ ಟೂರ್ನಿ ವೇಳೆ ಇಂಜುರಿ ಕಾರಣದಿಂದ ವಿದಾಯದ ಸೂಚನೆ ನೀಡಿದ್ದರು. ಇದೀಗ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ಮರ್ರೆ ಶೀಘ್ರದಲ್ಲೇ ಟೆನಿಸ್ ಅಂಗಣಕ್ಕೆ ಮರಳೋ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ರಾಫೆಲ್ ನಡಾಲ್ ಮಣಿಸಿ ಆಸ್ಟ್ರೇಲಿಯಾ ಓಪನ್ ಚಾಂಪಿಯನ್ ಆದ ಜೊಕೊವಿಚ್!

ಆಸ್ಟ್ರೇಲಿಯ ಓಪನ್ ಆರಂಭಕ್ಕೂ ಮುನ್ನ ಆ್ಯಂಡಿ ಇಂಜುರಿ ಗಂಭೀರವಾಗಿ ಪರಿಣಮಿಸಿತು. ಹೀಗಾಗಿ ಆ್ಯಂಡಿ ಇಂಜುರಿಯಿಂದ ಮುಕ್ತಿಗೊಳಿಸುವಂತೆ ತನ್ನ ಮೆಡಿಕಲ್ ತಂಡದ ಜೊತೆ ಚರ್ಚೆ ನಡೆಸಿದ್ದರು. ಇಂಜುರಿ ಹೀಗೆ ಮುಂದುವರಿದರೆ 2019ರ ವಿಂಬಲ್ಡನ್ ಆಡೋ ಸಾಧ್ಯತೆ ಕಡಿಮೆ ಎಂದು ಆ್ಯಂಡಿ ಹೇಳಿದ್ದರು.

 

 

ಇದನ್ನೂ ಓದಿ: ಸ್ಪೇನ್ ವಿರುದ್ದ ಭಾರತ ಮಹಿಳಾ ತಂಡಕ್ಕೆ 5-2 ಅಂತರದ ಗೆಲುವು!

2013 ಹಾಗೂ 2016ರಲ್ಲಿ ವಿಂಬಲ್ಡನ್ ಗ್ರ್ಯಾಂಡ್ ಸ್ಲಾಂ ಗೆದ್ದ ಆ್ಯಂಡಿ, 2012ರಲ್ಲಿ ಯುಎಸ್ ಓಪನ್ ಗೆದ್ದಿದ್ದರು. 3 ಗ್ರ್ಯಾಂಡ್ ಸ್ಲಾಂ ಗೆದ್ದಿರುವ ಆ್ಯಂಡಿ, 2018ರ ಜನವರಿಯಲ್ಲಿ ಹಿಪ್ ಸರ್ಜರಿ ಮಾಡಿಕೊಂಡಿದ್ದರು. ಬಳಿಕ ಆ್ಯಂಡಿ ನೈಜ ಆಟ ಪ್ರದರ್ಶಿಸಲು ಸಾಧ್ಯವಾಗಿರಲಿಲ್ಲ.
 

Latest Videos
Follow Us:
Download App:
  • android
  • ios