ಕ್ರೈಸ್ಟ್‌ ಚರ್ಚ್(ಫೆ.17) : ಬೌಲರ್‌ಗಳ ಶಿಸ್ತುಬದ್ಧ ದಾಳಿ ಹಾಗೂ ಮಾರ್ಟಿನ್‌ ಗಪ್ಟಿಲ್‌ (118) ಶತಕದ ನೆರವಿನಿಂದ ಶನಿವಾರ ಇಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧ 2ನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್‌ 8 ವಿಕೆಟ್‌ ಗೆಲುವು ಸಾಧಿಸಿದೆ. ಇದರೊಂದಿಗೆ 3 ಪಂದ್ಯಗಳ ಸರಣಿಯಲ್ಲಿ 2-0 ಅಜೇಯ ಮುನ್ನಡೆ ಸಾಧಿಸಿ, ಸರಣಿ ವಶಪಡಿಸಿಕೊಂಡಿದೆ. 

ಇದನ್ನೂ ಓದಿ: ಕೊಹ್ಲಿ, ಧೋನಿ ಸೇರಿದಂತೆ ಸ್ಟಾರ್ ಆಟಗಾರರಿಗೆ ಐಪಿಎಲ್‌ನಿಂದ ವಿಶ್ರಾಂತಿ!

ಮೊದಲು ಬ್ಯಾಟ್‌ ಮಾಡಿದ ಬಾಂಗ್ಲಾ ಮೊಹಮದ್‌ ಮಿಥುನ್‌ (57) ಅರ್ಧಶತಕದ ನೆರವಿನಿಂದ 226 ರನ್‌ಗೆ ಆಲೌಟ್‌ ಆಯಿತು. ಕಿವೀಸ್‌ ಪರ ಫಗ್ರ್ಯೂಸನ್‌ 3 ವಿಕೆಟ್‌ ಕಿತ್ತರು. ಕಿವೀಸ್‌ 36.1 ಓವರಲ್ಲಿ 2 ವಿಕೆಟ್‌ ಕಳೆದುಕೊಂಡು ಗುರಿ ತಲುಪಿತು. ವಿಲಿಯಮ್ಸನ್‌ ಅಜೇಯ 65 ರನ್‌ ಗಳಿಸಿದರು.

ಇದನ್ನೂ ಓದಿ: 2019ರ ವಿಶ್ವಕಪ್‌ಗೆ 18 ಟೀಂ ಇಂಡಿಯಾ ಕ್ರಿಕೆಟಿಗರ ಪಟ್ಟಿ ರೆಡಿ!

ಮೊದಲ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ 8 ವಿಕೆಟ್ ಗೆಲುವು ಸಾಧಿಸಿತ್ತು. ಈ ಪಂದ್ಯದಲ್ಲಿ ಮಾರ್ಟಿನ್ ಗಪ್ಟಲ್ 117 ರನ್ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರನಿರ್ವಹಿಸಿದ್ದರು.  3ನೇ ಏಕದಿನ ಪಂದ್ಯ ಫೆ.20 ರಂದು ನಡೆಯಲಿದೆ.