ಮುಂಂಬೈ(ಫೆ.17): ವಿಶ್ವಕಪ್ ಟೂರ್ನಿ ದೃಷ್ಟಿಯಿಂದ ಬಿಸಿಸಿಐ ಮಹತ್ವದ ನಿರ್ಧಾರ ಕೈಗೊಳ್ಳಲು ಮುಂದಾಗಿದೆ. 12ನೇ ಆವೃತ್ತಿಯ ಐಪಿಎಲ್‌ ಮುಗಿದ ಬೆನ್ನಲ್ಲೇ ಇಂಗ್ಲೆಂಡ್‌ನಲ್ಲಿ ಐಸಿಸಿ ಏಕದಿನ ವಿಶ್ವಕಪ್‌ ನಡೆಯಲಿರುವ ಕಾರಣ, ವಿಶ್ವಕಪ್‌ ತಂಡದಲ್ಲಿ ಸ್ಥಾನ ಪಡೆಯಲಿರುವ ಆಟಗಾರರಿಗೆ ಐಪಿಎಲ್‌ ವೇಳೆ ಸಾಧ್ಯವಾದಷ್ಟುವಿಶ್ರಾಂತಿ ಕೊಡಿಸಲು ಬಿಸಿಸಿಐ ಯೋಜನೆ ರೂಪಿಸುತ್ತಿದೆ. 

ಇದನ್ನೂ ಓದಿ: ಐಪಿಎಲ್ 2019: ವಿರಾಟ್ ಕೊಹ್ಲಿ ಪುಡಿ ಮಾಡಲಿದ್ದಾರೆ 3 ದಾಖಲೆ!

ಈ ಕುರಿತು ಈಗಾಗಲೇ ಫ್ರಾಂಚೈಸಿಗಳ ಜತೆ ಮಾತುಕತೆ ಆರಂಭಿಸಿರುವುದಾಗಿ ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್‌.ಕೆ.ಪ್ರಸಾದ್‌ ಹೇಳಿದ್ದಾರೆ. ಆದರೆ ಆಟಗಾರರಿಗೆ ಎಷ್ಟು ಪಂದ್ಯಗಳಿಗೆ ವಿಶ್ರಾಂತಿ ಸಿಗಲಿದೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಸದ್ಯದ ಮಟ್ಟಿಗೆ ಈ ವರ್ಷದ ಐಪಿಎಲ್‌ ಮಾ.23ಕ್ಕೆ ಆರಂಭಗೊಂಡು ಮೇ 12ಕ್ಕೆ ಮುಕ್ತಾಯಗೊಳ್ಳಲಿದೆ ಎನ್ನಲಾಗಿದೆ. 

ಇದನ್ನೂ ಓದಿ: IPL ಟೂರ್ನಿಯಲ್ಲಿ ಗರಿಷ್ಠ ಸೆಂಚುರಿ ಸಿಡಿಸಿದ ಸಾಧಕರು!

ವಿಶ್ವಕಪ್‌ ಮೇ 30ರಿಂದ ಆರಂಭಗೊಳ್ಳಲಿದ್ದು, ಮೇ 20ರ ವೇಳೆಗೆ ಭಾರತ ತಂಡ ಇಂಗ್ಲೆಂಡ್‌ ತಲುಪಬೇಕಿದೆ. ಪ್ರಧಾನ ಸುತ್ತಿಗೂ ಮುನ್ನ ತಂಡ 2 ಅಭ್ಯಾಸ ಪಂದ್ಯಗಳನ್ನು ಆಡಲಿದೆ. ವಿಶ್ವಕಪ್ ಟೂರ್ನಿಗೆ ಆಯ್ಕೆಯಾಗೋ ಆಟಗಾರರು ಇಂಜುರಿ ಹಾಗೂ ಇತರ ಸಮಸ್ಯೆಗಳಿಂದ ಮುಕ್ತವಾಗಿರಿಸಲು ಬಿಸಿಸಿಐ ಮಹತ್ವದ ನಿರ್ಧರ ಪ್ರಕಟಿಸಲಿದೆ.