ಈ ಪರಿಷ್ಕೃತ ದರ ಜನವರಿ ತಿಂಗಳು ಮಾತ್ರ ಇರಲಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದರೆ, ಈ ಯೋಜನೆಯನ್ನು ಮುಂದುವರೆಸುವುದಾಗಿ ಬಿಎಂಟಿಸಿ ತಿಳಿಸಿದೆ.

ಬೆಂಗಳೂರು(ಡಿ.30): ನೂತನ ವರ್ಷಕ್ಕೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ಪ್ರಯಾಣಿಕರಿಗೆ ಭರ್ಜರಿ ಉಡುಗೊರೆಯನ್ನು ನೀಡಿದ್ದು, ವಜ್ರಕಾಯ ಮತ್ತು ವಾಯು ವಜ್ರಕಾಯ ಬಸ್ ಪ್ರಯಾಣ ದರದಲ್ಲಿ ಶೇ.37 ರಷ್ಟು ಇಳಿಕೆ ಮಾಡಿದೆ.

ಹೆಬ್ಬಾಳ, ಎಸ್ಟೀಮ್ ಮಾಲ್, ಕೋಗಿಲು ಕ್ರಾಸ್, ಮೇಕ್ರಿ ವೃತ್ತದಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆ ಹೋಗುವ ಎಸಿ ಬಸ್ ದರದಲ್ಲಿ ಕಡಿತ ಮಾಡಲಾಗಿದೆ.

ಎಲ್ಲಿ ಎಷ್ಟು ಇಳಿಕೆ...

ಮೇಕ್ರಿ ವೃತ್ತದಿಂದ: 190 ರು ನಿಂದ 175 ರೂ.ಗೆ ಇಳಿಕೆ

ಹೆಬ್ಬಾಳದಿಂದ: 170 ರು. ನಿಂದ 150 ರೂ.ಗೆ ಇಳಿಕೆ

ಎಸ್ಟೀಮ್ ಮಾಲ್: 170 ರು. ನಿಂದ 140 ರೂ.ಗೆ ಇಳಿಕೆ

ಕೋಗಿಲು ಕ್ರಾಸ್'ನಿಂದ: 170 ರು. ನಿಂದ 125 ರೂ.ಗೆ ಇಳಿಕೆ

ಈ ಪರಿಷ್ಕೃತ ದರ ಜನವರಿ ತಿಂಗಳು ಮಾತ್ರ ಇರಲಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದರೆ, ಈ ಯೋಜನೆಯನ್ನು ಮುಂದುವರೆಸುವುದಾಗಿ ಬಿಎಂಟಿಸಿ ತಿಳಿಸಿದೆ.