Asianet Suvarna News Asianet Suvarna News

ರೋಹಿತ್ ಶರ್ಮಾ'ನಿಂದ ಕ್ರಿಕೆಟ್ ಇತಿಹಾಸದ ಹೊಸ ದಾಖಲೆ ನಿರ್ಮಾಣ: ಫೈನಲ್'ನಲ್ಲಿ ಸೋತರೂ ಸ್ವಲ್ಪ ಸಮಾಧಾನ !

ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಟೀಂ ಇಂಡಿಯಾವನ್ನು 180 ರನ್'ಗಳಿಂದ  ಮಣಿಸಿ ಭಾರತೀಯ ಅಭಿಮಾನಿಗಳಿಗೆ ನಿರಾಶೆ ಮೂಡಿಸಿದ್ದು ಹಳೆಯ ವಿಷಯ.

New Record from Rohit Sharma

ನವದೆಹಲಿ(ಜೂ.22): ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಟೀಂ ಇಂಡಿಯಾವನ್ನು 180 ರನ್'ಗಳಿಂದ  ಮಣಿಸಿ ಭಾರತೀಯ ಅಭಿಮಾನಿಗಳಿಗೆ ನಿರಾಶೆ ಮೂಡಿಸಿದ್ದು ಹಳೆಯ ವಿಷಯ.

ಆದರೆ ಇದೇ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತೀಯ ಆಟಗಾರನೊಬ್ಬ ಕ್ರಿಕೆಟ್ ಇತಿಹಾಸದ ಹೊಸ ದಾಖಲೆ ನಿರ್ಮಿಸಿದ್ದಾನೆ. ಆರಂಭಿಕ ಆಟಗಾರ ರೋಹಿತ್ ಶರ್ಮಾ ಸಿಡಿಸಿದ ಶತಕ ನೂತನ ದಾಖಲೆಯಾಗಿದೆ. ಸೆಮಿಫೈನಲ್'ನಲ್ಲಿ ಬಾಂಗ್ಲದೇಶದ ವಿರುದ್ಧ ರೋಹಿತ್ ಸಿಡಿಸಿದ ಶತಕ ಕ್ರಿಕೆಟ್ ಇತಿಹಾಸದಲ್ಲಿ ಹೊಸ ಮೈಲಿಗಲ್ಲಾಗಿದೆ. ವೈಯಕ್ತಿಕವಾಗಿ 11ನೇ ಶತಕವಾದರೂ ಇಂಗ್ಲೆಂಡ್ ನೆಲದಲ್ಲಿ ಈ ಶತಕ 1000 ದ್ದಾಗಿದೆ.ಈ ಸಾವಿರ ಶತಕ ಟೆಸ್ಟ್,ಏಕದಿನ ಹಾಗೂ ಟಿ20 ಪಂದ್ಯಗಳನ್ನು ಒಳಗೊಂಡಿದೆ.

ಎಲ್ಲ ದೇಶದ ಆಟಗಾರರಿಂದ 1880ರಿಂದ 2017ರವರೆಗೆ  ಮೂರು ರೀತಿಯ 971 ಪಂದ್ಯಗಳಿಂದ 1 ಸಾವಿರ ಶತಕ ದಾಖಲಾದರೂ 1000 ದ ಶತಕವನ್ನು ರೋಹಿತ್ ಸಿಡಿಸಿರುವುದು ಭಾರತಕ್ಕೆ ಹೆಮ್ಮೆಯ ವಿಚಾರ. ಈ ಸಾವಿರ ಶತಕದಲ್ಲಿ  ಟೆಸ್ಟ್'ನಿಂದ 836, ಏಕದಿನದಿಂದ 163 ಹಾಗೂ ಟಿ20ಯಿಂದ 1 ಶತಕ ದಾಖಲಾಗಿದೆ.

ಇಂಗ್ಲೆಂಡ್ ಬಿಟ್ಟರೆ ಇಲ್ಲಿಯವರೆಗೂ ಯಾವ ದೇಶದ ಕ್ರಿಕೆಟ್ ನೆಲದಲ್ಲೂ 1000 ಶತಕಗಳು ದಾಖಲಾಗಿಲ್ಲ. 2ನೇ ಸ್ಥಾನದಲ್ಲಿ ಆಸ್ಟ್ರೇಲಿಯಾ ದೇಶವಿದ್ದು 1054 ಪಂದ್ಯಗಳಿಂದ 994 ಶತಕಗಳು ಹಾಗೂ ಮೂರನೇ ಸ್ಥಾನದಲ್ಲಿ ಭಾರತದ ದೇಶವಿದ್ದು 739 ಪಂದ್ಯಗಳಿಂದ 701 ಶತಕಗಳನ್ನು ಬ್ಯಾಟ್ಸ್'ಮೆನ್'ಗಳು ಸಿಡಿಸಿದ್ದಾರೆ. ಇಲ್ಲಿ ಮತ್ತೊಂದು ಸಂತಸದ ವಿಚಾರವೆಂದರೆ ಏಕದಿನದಲ್ಲಿ 233 ಶತಕಗಳು ದಾಖಲಾಗಿದ್ದು ಇಷ್ಟು ಶತಕಗಳು ಯಾವ ದೇಶದಲ್ಲೂ ದಾಖಲಾಗಿಲ್ಲ. ಕ್ರಿಕೆಟ್ ಆಯೋಜಿಸುವ ಉಳಿದ 8 ದೇಶಗಳು 700ರ ಗಡಿ ದಾಟಿಲ್ಲ.

Follow Us:
Download App:
  • android
  • ios