ಕರ್ನಾಟಕದಿಂದ ನೂರಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಲಿದ್ದು, ಒಲಿಂಪಿಯನ್ ಶ್ರೀಹರಿ ನಟರಾಜ್, ಸಾಜನ್ ಪ್ರಕಾಶ್, ಶಿವ ಶ್ರೀಧರ್, ರಿಧಿಮಾ, ಎ.ಎಸ್.ಆನಂದ್, ನೀನಾ ವೆಂಕಟೇಶ್, ಎಸ್‌.ಪಿ.ಲಿಖಿತ್, ಹರ್ಷಿತಾ ಜಯರಾಮ್ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಈಜುಪಟುಗಳು ಕೂಟದಲ್ಲಿ ಸ್ಪರ್ಧಿಸಲಿದ್ದಾರೆ.

ಬೆಂಗಳೂರು(ನ.25): ನೆಟ್ಟಕಲ್ಲಪ್ಪ ಈಜು ಕೇಂದ್ರ(ಎನ್‌ಎಸಿ) ಆಯೋಜಿಸುವ 2ನೇ ಆವೃತ್ತಿಯ ರಾಷ್ಟ್ರೀಯ ಈಜು ಸ್ಪರ್ಧೆ ಶನಿವಾರ ಹಾಗೂ ಭಾನುವಾರ ನಗರದಲ್ಲಿ ನಡೆಯಲಿದೆ. ಪದ್ಮನಾಭ ನಗರದಲ್ಲಿರುವ ಎನ್‌ಎಸಿ ಈಜುಕೊಳದಲ್ಲಿ ಸ್ಪರ್ಧೆಗಳು ನಡೆಯಲಿವೆ. ಶನಿವಾರ ಸಂಜೆ ರಾಜ್ಯ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಕೂಟಕ್ಕೆ ಚಾಲನೆ ನೀಡಲಿದ್ದಾರೆ. ಕೂಟದಲ್ಲಿ ವಿವಿಧ ರಾಜ್ಯಗಳ 153 ಪುರುಷರು ಮತ್ತು 97 ಮಹಿಳೆಯರು ಸೇರಿ 250 ಈಜುಪಟುಗಳು ಪಾಲ್ಗೊಳ್ಳಲಿದ್ದಾರೆ. 

ಕರ್ನಾಟಕದಿಂದ ನೂರಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಲಿದ್ದು, ಒಲಿಂಪಿಯನ್ ಶ್ರೀಹರಿ ನಟರಾಜ್, ಸಾಜನ್ ಪ್ರಕಾಶ್, ಶಿವ ಶ್ರೀಧರ್, ರಿಧಿಮಾ, ಎ.ಎಸ್.ಆನಂದ್, ನೀನಾ ವೆಂಕಟೇಶ್, ಎಸ್‌.ಪಿ.ಲಿಖಿತ್, ಹರ್ಷಿತಾ ಜಯರಾಮ್ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಈಜುಪಟುಗಳು ಕೂಟದಲ್ಲಿ ಸ್ಪರ್ಧಿಸಲಿದ್ದಾರೆ.

ಹಾಕಿ: ರಾಜ್ಯಕ್ಕೆ ಕ್ವಾರ್ಟರಲ್ಲಿ ಇಂದು ಜಾರ್ಖಂಡ್‌ ಸವಾಲು

ಚೆನ್ನೈ: 13ನೇ ರಾಷ್ಟ್ರೀಯ ಹಿರಿಯ ಪುರುಷರ ಹಾಕಿ ಟೂರ್ನಿಯ ಕ್ವಾರ್ಟರ್‌ ಫೈನಲ್‌ನಲ್ಲಿ ಕರ್ನಾಟಕ ತಂಡ ಶನಿವಾರ ಜಾರ್ಖಂಡ್‌ ವಿರುದ್ಧ ಸೆಣಸಾಡಲಿದೆ. ‘ಸಿ’ ಗುಂಪಿನಲ್ಲಿ ಸ್ಥಾನ ಪಡೆದಿದ್ದ ಕರ್ನಾಟಕ ಆಡಿರುವ 2 ಪಂದ್ಯಗಳಲ್ಲೂ ಗೆದ್ದು ಅಜೇಯವಾಗಿ ಅಂತಿಮ 8ರ ಘಟ್ಟ ಪ್ರವೇಶಿಸಿದೆ. ಆರಂಭಿಕ ಪಂದ್ಯದದಲ್ಲಿ ದಾದರ್‌ ಮತ್ತು ನಗರ್‌ ಹವೇಲಿ ವಿರುದ್ಧ 5-0 ಹಾಗೂ 2ನೇ ಪಂದ್ಯದಲ್ಲಿ ಬಿಹಾರ ವಿರುದ್ಧ 12-1 ಅಂತರದಲ್ಲಿ ಗೆಲುವು ಸಾಧಿಸಿತ್ತು. 

ರಾಜ್ಯ ಫುಟ್ಬಾಲ್‌ನಲ್ಲಿ ಹೊಸ ಸ್ಟಾರ್: ಬಿಎಫ್‌ಸಿ ಕಿರಿಯರ ತಂಡದಲ್ಲಿ ವಿನೀತ್ ಮಿಂಚು..!

ಅತ್ತ ಜಾರ್ಖಂಡ್‌ ‘ಎಫ್‌’ ಗುಂಪಿನಲ್ಲಿ ಆಡಿರುವ 3 ಪಂದ್ಯಗಳಲ್ಲೂ ಗೆಲುವು ಸಾಧಿಸಿದೆ. ಆಂಧ್ರಪ್ರದೇಶ ವಿರುದ್ಧ 10-3, ಚಂಡೀಗಢ ವಿರುದ್ಧ 2-0 ಹಾಗೂ ಗೋವಾ ವಿರುದ್ಧ 3-0 ಅಂತರದಲ್ಲಿ ಜಯಗಳಿಸಿವೆ. ಗುಂಪು ಹಂತದಲ್ಲಿ ಒಂದೂ ಗೋಲ್‌ ಬಿಟ್ಟುಕೊಡದ ಜಾರ್ಖಂಡ್‌ನಿಂದ ರಾಜ್ಯಕ್ಕೆ ಕಠಿಣ ಸವಾಲು ಎದುರಾಗುವ ಸಾಧ್ಯತೆಯಿದೆ.

ಒಲಿಂಪಿಕ್ಸ್‌ಗಾಗಿ ಬ್ರಿಸ್ಬೇನ್‌ ಸ್ಟೇಡಿಯಂ ಪುನರ್‌ನಿರ್ಮಾಣ

ಬ್ರಿಸ್ಟೇನ್‌(ಆಸ್ಟ್ರೇಲಿಯಾ): 2032ರ ಒಲಿಂಪಿಕ್ಸ್‌ಗಾಗಿ ಆಸ್ಟ್ರೇಲಿಯಾದ ಪ್ರಸಿದ್ಧ ಬ್ರಿಸ್ಬೇನ್‌ ಕ್ರೀಡಾಂಗಣವನ್ನು ಸಂಪೂರ್ಣವಾಗಿ ಕೆಡವಿ, ಹೊಸದಾಗಿ ನಿರ್ಮಾಣ ಮಾಡಲು ಆಯೋಜಕರು ನಿರ್ಧರಿಸಿದ್ದಾರೆ. ವರದಿಗಳ ಪ್ರಕಾರ ಒಲಂಪಿಕ್ಸ್‌ಗೆ ಬೇಕಾದ ರೀತಿ ಕ್ರೀಡಾಂಗಣ ನಿರ್ಮಿಸಲು ಅಧಿಕಾರಿಗಳು ಒಪ್ಪಿಗೆ ನೀಡಿದ್ದಾರೆ. ಕ್ರೀಡಾಂಗಣದ ಆಸನ ಸಾಮರ್ಥ್ಯ 50,000ಕ್ಕೆ ಹೆಚ್ಚಿಸಲಾಗುತ್ತಿದೆ. 2025ರ ಆ್ಯಶಸ್‌ ಟೆಸ್ಟ್‌ ಸರಣಿ ಬಳಿಕ ಕಾಮಗಾರಿ ಆರಂಭಗೊಳ್ಳಲಿದ್ದು, 2030ರ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ತಿಳಿದುಬಂದಿದೆ.