ಪ್ರೊ ಕಬಡ್ಡಿ 2019: ದಬಾಂಗ್ ಡಿಚ್ಚಿಗೆ ಮೇಲೇಳದ ಮುಂಬಾ..!

ನವೀನ್ ಕುಮಾರ್ ಮಿಂಚಿನ ಪ್ರದರ್ಶನದ ನೆರವಿನಿಂದ ದಬಾಂಗ್ ಡೆಲ್ಲಿ ತಂಡವು ಪ್ರಸಕ್ತ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ದಾಖಲೆಯ ಸತತ 8ನೇ ಗೆಲುವು ಸಾಧಿಸಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

Naveen Kumar powers helps Dabang Delhi A record eighth straight win in PKL 2019

ನವದೆಹಲಿ[ಆ.29]: ನವೀನ್‌ ಕುಮಾರ್‌ (11) ದಾಖಲೆಯ ಸತತ 8ನೇ ಸೂಪರ್‌ ಟೆನ್‌ ನೆರವಿನಿಂದ ದಬಾಂಗ್‌ ಡೆಲ್ಲಿ ತಂಡ ಬುಧ​ವಾರ ಇಲ್ಲಿ ನಡೆದ ಯು ಮುಂಬಾ ವಿರು​ದ್ಧದ ಪಂದ್ಯ​ದಲ್ಲಿ 40-24 ಅಂಕ​ಗಳ ಭರ್ಜ​ರಿ ಗೆಲುವು ಸಾಧಿ​ಸಿತು. 

ಪ್ರೊ ಕಬಡ್ಡಿ 2019: ಬೆಂಗಾಲ್‌ ಜಯ ಕಸಿದ ಸ್ಟೀಲ​ರ್ಸ್

ತಂಡ​ಕ್ಕಿದು ಈ ಆವೃ​ತ್ತಿ​ಯಲ್ಲಿ 8ನೇ ಗೆಲು​ವಾ​ಗಿದ್ದು, 44 ಅಂಕ​ಗ​ಳೊಂದಿಗೆ ಅಗ್ರ​ಸ್ಥಾನ ಕಾಯ್ದು​ಕೊಂಡಿದೆ. ಡೆಲ್ಲಿ ಪ್ಲೇ-ಆಫ್‌ ಹಂತ​ಕ್ಕೇ​ರುವ ನೆಚ್ಚಿನ ತಂಡವಾಗಿ ತೋರು​ತ್ತಿದ್ದು, ತಂಡ ಸ್ಥಿರ ಪ್ರದ​ರ್ಶ​ನ​ದಿಂದ ಎದು​ರಾ​ಳಿ​ಗ​ಳಲ್ಲಿ ನಡುಕ ಹುಟ್ಟಿ​ಸಿದೆ.

PKL 2019: ಜೈಪುರ ಮಣಿಸಿ ಗೆಲುವಿನ ಹಳಿಗೆ ಮರಳಿದ ಬೆಂಗಳೂರು ಬುಲ್ಸ್

ಪಂದ್ಯ​ದಲ್ಲಿ ಸಾಂಘಿಕ ಪ್ರದ​ರ್ಶನ ತೋರಿದ ಡೆಲ್ಲಿ, ಮುಂಬಾ ಮೇಲೆ ಸವಾರಿ ಮಾಡಿತು. ರೈಡಿಂಗ್‌ನಲ್ಲಿ ನವೀನ್‌ಗೆ ಚಂದ್ರನ್‌ ರಂಜಿತ್‌ (04) ಉತ್ತಮ ಬೆಂಬಲ ನೀಡಿ​ದರು. ತಂಡದ ತಾರಾ ಡಿಫೆಂಡರ್‌ಗಳಾದ ರವೀಂದರ್‌ ಪೆಹಲ್‌ (08) ಹಾಗೂ ಜೋಗಿಂದರ್‌ ನರ್ವಾಲ್‌ (06) ಮಿಂಚಿನ ಆಟ​ವಾ​ಡಿ​ದರು. ಡೆಲ್ಲಿ 16 ಟ್ಯಾಕಲ್‌ ಅಂಕ​ಗ​ಳನ್ನು ಗಳಿ​ಸಿತು. ಪಂದ್ಯ​ದಲ್ಲಿ ಮುಂಬಾ 3 ಬಾರಿ ಆಲೌಟ್‌ ಆಯಿತು.

ಶ್ರೇಷ್ಠ ರೈಡರ್‌: ನವೀನ್‌, ಡೆಲ್ಲಿ, 11 ಅಂಕ

ಶ್ರೇಷ್ಠ ಡಿಫೆಂಡರ್‌: ರವೀಂದರ್‌, ಡೆಲ್ಲಿ, 08 ಅಂಕ

ಹರ್ಯಾಣಗೆ ಹ್ಯಾಟ್ರಿಕ್‌ ಜಯ!

ಬುಧ​ವಾರ ನಡೆದ 2ನೇ ಪಂದ್ಯ​ದಲ್ಲಿ ಗುಜರಾತ್‌ ಫಾರ್ಚೂನ್‌ಜೈಂಟ್ಸ್‌ ವಿರುದ್ಧ 41-25 ಅಂಕ​ಗಳ ಗೆಲುವು ಸಾಧಿ​ಸಿತು. ಈ ಮೂಲಕ ಹ್ಯಾಟ್ರಿಕ್‌ ಬಾರಿ​ಸಿತು. 

ಕನ್ನ​ಡಿಗ ಪ್ರಶಾಂತ್‌ ರೈ 8 ರೈಡ್‌ ಅಂಕ ಗಳಿಸಿ ತಂಡದ ಗೆಲು​ವಿಗೆ ನೆರ​ವಾ​ದರು. ಈ ಗೆಲು​ವಿನ ಮೂಲಕ ಹರ್ಯಾಣ ತಂಡ ಅಂಕ​ಪ​ಟ್ಟಿ​ಯಲ್ಲಿ 3ನೇ ಸ್ಥಾನ​ಕ್ಕೇ​ರಿದೆ. 2 ಬಾರಿ ರನ್ನರ್‌-ಅಪ್‌ ಗುಜ​ರಾತ್‌ಗಿದು 7ನೇ ಸೋಲಾ​ಗಿದ್ದು, ತಂಡದ ಪ್ಲೇ-ಆಫ್‌ ಹಾದಿ ಕಠಿ​ಣಗೊಳ್ಳು​ತ್ತಿದೆ.

Latest Videos
Follow Us:
Download App:
  • android
  • ios