ರಾಷ್ಟ್ರೀಯ ಈಜು: ಕರ್ನಾಟಕ ಚಾಂಪಿಯನ್
73ನೇ ರಾಷ್ಟ್ರೀಯ ಹಿರಿಯರ ಈಜು ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ. ಬೋಪಾಲ್‌ನಲ್ಲಿ ನಡೆದ ಕೂಟದಲ್ಲಿ ಕರ್ನಾಟಕ ತಂಡ ಪುರುಷರ ವಿಭಾಗದಲ್ಲಿ 12 ಚಿನ್ನ, 3 ಬೆಳ್ಳಿ, 5 ಕಂಚು ಹಾಗೂ ಮಹಿಳಾ ವಿಭಾಗದಲ್ಲಿ 2 ಚಿನ್ನ, 9 ಬೆಳ್ಳಿ ಮತ್ತು 5 ಕಂಚು ಜಯಿಸಿದೆ.
ಭೋಪಾಲ್(ಸೆ.05): ತಾರಾ ಈಜುಪಟು ಶ್ರೀಹರಿ ನಟರಾಜ್, ಇಲ್ಲಿ ಬುಧವಾರ ಮುಕ್ತಾಯವಾದ 73ನೇ ರಾಷ್ಟ್ರೀಯ ಹಿರಿಯರ ಈಜು ಚಾಂಪಿಯನ್‌ಶಿಪ್‌ನ 100 ಮೀ. ಬ್ಯಾಕ್ ಸ್ಟ್ರೋಕ್‌ನಲ್ಲಿ ಕೂಟ ದಾಖಲೆ ನಿರ್ಮಿಸಿದರು. ಕೂಟದಲ್ಲಿ ಶ್ರೀಹರಿ ಒಟ್ಟಾರೆ 3 ವೈಯಕ್ತಿಕ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡರು.
ಉಕ್ಕಿಹರಿಯುವ ಕೃಷ್ಣಾದಲ್ಲಿ ಯುವಕರಿಂದ ಈಜು ಸ್ಪರ್ಧೆ!
ಕರ್ನಾಟಕ ತಂಡ ಪುರುಷರ ವಿಭಾಗದಲ್ಲಿ 12 ಚಿನ್ನ, 3 ಬೆಳ್ಳಿ, 5 ಕಂಚು ಹಾಗೂ ಮಹಿಳಾ ವಿಭಾಗದಲ್ಲಿ 2 ಚಿನ್ನ, 9 ಬೆಳ್ಳಿ ಮತ್ತು 5 ಕಂಚು ಜಯಿಸಿದೆ. ಒಟ್ಟಾರೆ 14 ಚಿನ್ನ, 12 ಬೆಳ್ಳಿ, 10 ಕಂಚಿನೊಂದಿಗೆ 36 ಪದಕ ಗೆದ್ದ ರಾಜ್ಯ ತಂಡ ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿದೆ. 27ನೇ ಬಾರಿ ಕರ್ನಾಟಕ ತಂಡ ಸಮಗ್ರ ಪ್ರಶಸ್ತಿ ಬಾಚಿಕೊಂಡು ದಾಖಲೆ ಬರೆಯಿತು.
ಏಷ್ಯನ್ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್; ಬೆಂಗಳೂರಲ್ಲಿ ಲೋಗೋ ಅನಾವರಣ!
ಕೂಟದ ಕೊನೆ ದಿನವಾದ ಬುಧವಾರ ಶ್ರೀಹರಿ ಪುರುಷರ 100 ಮೀ. ಬ್ಯಾಕ್ ಸ್ಟ್ರೋಕ್‌ನಲ್ಲಿ 55.63ಸೆ.ಗಳಲ್ಲಿ ಗುರಿ ತಲುಪಿ ಚಿನ್ನದೊಂದಿಗೆ ದಾಖಲೆ ನಿರ್ಮಿಸಿದರು. ರಕ್ಷಿತ್ ಶೆಟ್ಟಿ58.89 ಸೆ.ಗಳಲ್ಲಿ ಗುರಿ ತಲುಪಿ ಕಂಚು ಗೆದ್ದರು. 200 ಮೀ. ಬಟರ್‌ಫ್ಲೈನಲ್ಲಿ ತನೀಶ್ ಜಾಜ್‌ರ್ 2 ನಿಮಿಷ 04.23 ಸೆ.ಗಳಲ್ಲಿ ಗುರಿ ಮುಟ್ಟಿಕಂಚು ಗೆದ್ದರು. 100 ಮೀ. ಬ್ರೆಸ್ಟ್ ಸ್ಟ್ರೋಕ್‌ನಲ್ಲಿ ಲಿಖಿತ್ ಎಸ್.ಪಿ ಚಿನ್ನ ಗೆದ್ದರು.
ಮಹಿಳೆಯರ 200 ಮೀ. ಬಟರ್‌ಫ್ಲೈನಲ್ಲಿ ಅನ್ವೇಷಾ ಗಿರೀಶ್ 2 ನಿಮಿಷ 25.43 ಸೆ.ಗಳಲ್ಲಿ ಗುರಿ ತಲುಪಿ ಬೆಳ್ಳಿ ಗೆದ್ದರು. 100 ಮೀ. ಬ್ಯಾಕ್‌ಸ್ಟೊ್ರೕಕ್‌ನಲ್ಲಿ ರಿದಿಮಾ 1 ನಿಮಿಷ 07.19 ಸೆ. ಹಾಗೂ ಸುವನಾ 1 ನಿಮಿಷ 07.22 ಸೆ.ಗಳಲ್ಲಿ ಗುರಿ ಮುಟ್ಟಿ ಕ್ರಮವಾಗಿ ಚಿನ್ನ, ಬೆಳ್ಳಿ ಜಯಿಸಿದರು. 100 ಮೀ. ಬ್ರೆಸ್ಟ್ ಸ್ಟ್ರೋಕ್‌ನಲ್ಲಿ ಸಲೋನಿ ದಲಾಲ್ ಬೆಳ್ಳಿ ಗೆದ್ದರು.