ಬೆಂಗಳೂರು(ಆ.02):  ಪ್ರತಿಷ್ಠಿತ 10ನೇ ಏಷ್ಯನ್ ಏಜ್ ಗ್ರೂಪ್ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್‌ಗೆ ಭಾರತ ಸಜ್ಜಾಗುತ್ತಿದೆ. ಬರೋಬ್ಬರಿ 20 ವರ್ಷಗಳ ಬಳಿಕ ಭಾರತದಲ್ಲಿ ಆಯೋಜನೆಯಾಗುತ್ತಿರುವ ಅಂತಾರಾಷ್ಟ್ರೀಯ ಸ್ಪಿಮ್ಮಿಂಗ್ ಚಾಂಪಿಯನ್‌ಶಿಪ್ ಕೂಟಕ್ಕೆ ಬೆಂಗಳೂರು ಸಿಂಗಾರಗೊಂಡಿದೆ. ಸೆಪ್ಟೆಂಬರ್ 24ರಿಂದ  ಆಗಸ್ಟ್ 2 ರವರೆಗೆ ನಡೆಯಲಿರುವ ನಗರದ ನಾಲ್ಕು ತಾಣಗಳಲ್ಲಿ ನಡೆಯಲಿದೆ. ಇದೀಗ ನಗರದ ಖಾಸಗಿ ಹೊಟೆಲ್‌ನಲ್ಲಿ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್ ಕೂಟದ ಲೋಗೋ ಹಾಗೂ ವೆಬ್‌ಸೈಟ್ ಅನಾವರಣ ಮಾಡಲಾಗಿದೆ.

ಇದನ್ನೂ ಓದಿ: ರಾಜ್ಯ ಈಜು: ಬಸವನಗುಡಿ ಕೇಂದ್ರಕ್ಕೆ ಸಮಗ್ರ ಪ್ರಶಸ್ತಿ

ಆಯೋಜಕ ಕಮಿಟಿ ಅಧ್ಯಕ್ಷ, ಮಾಜಿ ಐಪಿಎಸ್ ಅಧಿಕಾರಿ ಗೋಪಾಲ್ ಬಿ ಹೊಸೂರು, ಭಾರತದ ಸ್ವಿಮ್ಮಿಂಗ್ ಫೆಡರೇಶನ್ ಅಧ್ಯಕ್ಷ ಹಾಗೂ ಗೋವಾ ಮಾಜಿ ಮುಖ್ಯಮಂತ್ರಿ ದಿಗಂಬರ್ ಕಾಮತ್,  ಕಾರ್ಯದರ್ಶಿ ಮೋನಾಸ್ ಚೋಕ್ಸಿ ಸೇರಿದಂತೆ ಸ್ವಿಮ್ಮಿಂಗ್ ಫೆಡರೇಶನ್ ಗಣ್ಯರು 10ನೇ ಏಷ್ಯನ್ ಏಜ್ ಗ್ರೂಪ್ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್‌ ಕೂಟದ ಲಾಂಛನ ಹಾಗೂ ವೆಬ್‌ಸೈಟ್ ಅನಾವರಣ ಮಾಡಿದರು.

ಇದನ್ನೂ ಓದಿ: ರಾಜ್ಯ ಹಿರಿಯರ ಈಜು ಕೂಟ: ಮೊದಲ ದಿನ 6 ದಾಖಲೆ

ಏಷ್ಯಾ  ಅಮೆಚ್ಯೂರ್ ಸ್ವಿಮ್ಮಿಂಗ್ ಫೆಡರೇಶನ್ ಅಧೀನದಲ್ಲಿರುವ 45 ದೇಶಗಳ ಪೈಕಿ ಜಪಾನ್, ಹಾಂಕ್ ಕಾಂಗ್, ಮಲೇಷಿಯಾ, ಸಿಂಗಾಪೂರ್ ಸೇರಿದಂತೆ  ಈಗಾಗಲೇ 35 ದೇಶಗಳು ಈ ಕೂಟದಲ್ಲಿ ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸಿದೆ. 9 ದಿನಗಳ ಕಾಲ ನಡೆಯಲಿರುವ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್ ಕೂಟದಲ್ಲಿ 1200ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಲಿದ್ದಾರೆ. 4 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ.

ಇದನ್ನೂ ಓದಿ: ಇಂಡೋ-ಪಾಕ್ ಅಬ್ಬರದಲ್ಲಿ ಮರೆಯಾಯ್ತು ಬೆಂಗಳೂರು ಪ್ಯಾರಾ ಈಜುಪಟು ಸಾಧನೆ !

10ನೇ ಏಷ್ಯನ್ ಏಜ್ ಗ್ರೂಪ್ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್‌ ಉತ್ತಮ ನಿರ್ವಹಣೆ ನೀಡಿದ ಈಜುಪಟುಗಳು ನೇರವಾಗಿ 2022ರ ಟೊಕಿಯೋ ಒಲಿಂಪಿಕ್ಸ್ ಕೂಟಕ್ಕೆ ಅರ್ಹತೆ ಪಡೆಯಲಿದ್ದಾರೆ. ಹೀಗಾಗಿ ಭಾರತೀಯ ಈಜುಪಟುಗಳಿಗೆ ಸುವರ್ಣ ಅವಕಾಶ ಒಲಿದು ಬಂದಿದೆ. ಅದರಲ್ಲೂ ಈಜು ಸ್ಪರ್ಧೆಯಲ್ಲಿ ದಾಖಲೆ ಬರೆದಿರುವ ಬೆಂಗಳೂರಿಗೆ ಇದು ಹೆಮ್ಮಯ ಹಾಗೂ ಅತ್ಯುತ್ತಮ ಸಂದರ್ಭವಾಗಿ ಹೊರಹೊಮ್ಮಿದೆ.

ಈಜು ಕೂಟ ನಡೆಯುವ ಸ್ಥಳ ಹಾಗೂ ದಿನಾಂಕ:
ಸ್ವಿಮ್ಮಿಂಗ್:  ಪಡುಕೋಣೆ-ದ್ರಾವಿಡ್ ಸೆಂಟರ್, ಸೆ.24 ರಿಂದ ಸೆ.27
ವಾಟರ್ ಪೊಲೊ: ಸಾಯಿ(ಕೆಂಗೇರಿ), ಸೆ.24 ರಿಂದ ಸೆ.30
ಡೈವಿಂಗ್: ಸಾಯಿ(ಕೆಂಗೇರಿ), ಸೆ.29 ರಿಂದ  ಅ.02
ಆರ್ಟಿಸ್ಟಿಕ್: ಕೆನ್ನಿಂಗ್ಟನ್ ಸ್ವಿಮ್ಮಿಂಗ್ ಪೂಲ್, ಹಲಸೂರು, ಸೆ.29 ರಿಂದ ಅ.02

ಭಾರತದ ಸ್ಟಾರ್ ಸ್ಪರ್ಧಿಗಳು:
ವೀರ್‌ಧವಲ್ ಖಾಡೆ, ಸಜನ್ ಪ್ರಕಾಶ್, ಶಿವಾನಿ ಕಠಾರಿಯಾ, ಶ್ರೀಹರಿ ನಟರಾಜ್, ಅಂಶುಲ್ ಕೊಠರಿ, ಲಿಖಿತ್ ಎಸ್‌ಪಿ, ಕುಶಾಗರ ರಾವತ್, ಕೆನಿಶ್ ಗುಪ್ತಾ, ಕುಶಿ ದಿನೇಶ್, ಸುವಣ ಸಿ ಭಾಸ್ಕರ್, ತನೀಶ್ ಜಾರ್ಜ್ ಮ್ಯಾಥ್ಯೂ,ಸಂಜಯ್ ಸಿಜೆ, ರಿಧಿಮಾ ವಿರೇಂದ್ರ ಸೇರಿದಂತೆ ಹಲವು ಈಜು ಪಟುಗಳು ಪಾಲ್ಗೊಳ್ಳಲಿದ್ದಾರೆ.

ಈ ಹಿಂದಿನ ಏಷ್ಯನ್ ಏಜ್ ಗ್ರೂಪ್ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್‌ ತಾಷ್ಕೆಂಟ್‌ನಲ್ಲಿ ಆಯೋಜನೆಯಾಗಿತ್ತು. ಭಾರತದ ಈಜುಪಟುಗಳು 5 ಚಿನ್ನ, 13 ಬೆಳ್ಳಿ, 22 ಕಂಚಿನ ಪದಕ ಸೇರಿದಂತೆ ಒಟ್ಟು 40 ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದರು. ಇದೀಗ ಬೆಂಗಳೂರಿನಲ್ಲಿ ಆಯೋಜನೆಯಾಗಲಿರುವ ಈ ಕೂಟದಲ್ಲಿ ಹೆಚ್ಚಿನ ಪದಕಗಳನ್ನು ನಿರೀಕ್ಷಿಸಲಾಗಿದೆ.