ಇಂದು ರಾಷ್ಟ್ರೀಯ ಕ್ರೀಡಾ ದಿನ; ಸಂಜೆ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪ್ರದಾನ
ಭಾರತ ಹಾಕಿ ದಂತಕತೆ ಮೇಜರ್ ಧ್ಯಾನ್ ಚಂದ್ ಹುಟ್ಟುಹಬ್ಬವನ್ನು ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಕ್ರೀಡಾ ಕ್ಷೇತದಲ್ಲಿ ಅತ್ಯುನ್ನತ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಸಂಜೆ ಕ್ರೀಡಾ ಪ್ರಶಸ್ತಿಯನ್ನು ರಾಷ್ಟ್ರಪತಿಗಳು ಪ್ರದಾನ ಮಾಡಲಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ನವದೆಹಲಿ[ಆ.29]: ಹಾಕಿ ದೇವರು ಎಂದೇ ಕರೆಸಿಕೊಳ್ಳುವ ಧ್ಯಾನ್‌ಚಂದ್ ಹುಟ್ಟುಹಬ್ಬದ ಅಂಗವಾಗಿ ಆ.29ರಂದು ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಿಸಲಾಗುತ್ತದೆ.
#FitIndia ಆಂದೋಲನಕ್ಕೆ ಮೋದಿ ಗ್ರೀನ್ ಸಿಗ್ನಲ್!
ಗುರುವಾರ ಇಲ್ಲಿನ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದ್ದು, ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್ ಖೇಲ್ ರತ್ನ, ಅರ್ಜುನ, ದ್ರೋರ್ಣಾಚಾರ್ಯ, ಧ್ಯಾನ್‌ಚಂದ್ ಪ್ರಶಸ್ತಿಗಳನ್ನು ಸಾಧಕರಿಗೆ ಪ್ರದಾನ ಮಾಡಲಿದ್ದಾರೆ.
'ಖೇಲ್ ರತ್ನ: ರಾಜೀವ್ ಧ್ಯಾನ ಬಿಡಿ, ಧ್ಯಾನ್ ಚಂದ್ ಹೆಸರು ಕೊಡಿ'
ಕುಸ್ತಿಪಟು ಭಜರಂಗ್ ಪೂನಿಯಾ ಹಾಗೂ ಪ್ಯಾರಾ ಅಥ್ಲೀಟ್ ದೀಪಾ ಮಲಿಕ್‌ಗೆ ಖೇಲ್ ರತ್ನ ಪ್ರಶಸ್ತಿ ದೊರೆತಿದ್ದು, ಕ್ರಿಕೆಟಿಗ ರವೀಂದ್ರ ಜಡೇಜಾ ಸೇರಿದಂತೆ 19 ಕ್ರೀಡಾಪಟುಗಳು ಅರ್ಜುನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಈ ಪೈಕಿ ರಾಜ್ಯದ ಈಕ್ವೆಸ್ಟ್ರಿಯನ್ ಪಟು ಫೌವಾದ್ ಮಿರ್ಜಾ ಸಹ ಇದ್ದಾರೆ.
’ಸದೃಢ ಭಾರತ ಅಭಿಯಾನ’ ಇಂದು ಬಿಎಸ್‌ವೈ ಚಾಲನೆ
ಬೆಂಗಳೂರು: ರಾಷ್ಟ್ರೀಯ ಕ್ರೀಡಾ ದಿನದಂದು, ಪ್ರಧಾನಿ ನರೇಂದ್ರ ಮೋದಿ ‘ಫಿಟ್ ಇಂಡಿಯಾ ಅಭಿಯಾನ’ಕ್ಕೆ ಚಾಲನೆ ನೀಡಲಿದ್ದಾರೆ. ಅದರಂತೆ ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೂಡ ರಾಜ್ಯದಲ್ಲಿ ‘ಸದೃಢ ಭಾರತ ಅಭಿಯಾನ’ಕ್ಕೆ ಬೆಳಗ್ಗೆ 10 ಗಂಟೆಗೆ ಚಾಲನೆ ನೀಡಲಿದ್ದಾರೆ.
ಫಿಟ್ನೆಸ್ ಬಗ್ಗೆ ಜನ ಜಾಗೃತಿ ಮೂಡಿಸುವುದು ಇದರ ಉದ್ದೇಶವಾಗಿದೆ. ವಿಧಾನಸೌಧ ಮುಂಭಾಗ ಬೆಳಗ್ಗೆ 9.30ರಿಂದ ಕಾರ್ಯಕ್ರಮ ಅಯೋಜಿಸಲಾಗಿದೆ. ಈ ವೇಳೆ ರಾಜ್ಯ ಕ್ರೀಡಾ ಇಲಾಖೆ ಹಾಕಿ, ಬಾಕ್ಸಿಂಗ್, ಯೋಗಾ, ಬಾಸ್ಕೆಟ್‌ಬಾಲ್, ವಾಲ್ ಕ್ಲೈಂಬಿಂಗ್ ಹಾಗೂ ಸೈಕ್ಲಿಂಗ್ ಸೇರಿದಂತೆ ಇತರೆ ಕ್ರೀಡೆಗಳನ್ನು ಪ್ರಾಯೋಗಿಕವಾಗಿ ಆಡಿಸಲಿದೆ.
ಕಾರ್ಯಕ್ರಮದ ವೇಳೆ ಎನ್‌ಎಸ್‌ಎಸ್‌ನ 1000 ಸಿಬ್ಬಂದಿಗಳು ಹಾಗೂ ಕ್ರೀಡಾ ಹಾಸ್ಟೆಲ್‌ನ 200 ವಿದ್ಯಾರ್ಥಿಗಳು ಹಾಜರಿರಲಿದ್ದಾರೆ ಎಂದು ಕ್ರೀಡಾ ಇಲಾಖೆ ಜಂಟಿ ನಿರ್ದೇಶಕ ಎಂ.ಎಸ್. ರಮೇಶ್ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು.