National Open Athletics Championships: ಕೊನೆಯ ದಿನ ಕರ್ನಾಟಕಕ್ಕೆ 4 ಪದಕ, ರೈಲ್ವೇಸ್ ಚಾಂಪಿಯನ್
61ನೇ ರಾಷ್ಟ್ರೀಯ ಓಪನ್ ಅಥ್ಲೆಟಿಕ್ಸ್ ಕೂಟದಲ್ಲಿ ರೈಲ್ವೇಸ್ ಚಾಂಪಿಯನ್
10 ಪದಕಗಳೊಂದಿಗೆ ಅಭಿಯಾನ ಮುಗಿಸಿದ ಆತಿಥೇಯ ಕರ್ನಾಟಕ
297 ಅಂಕ ಪಡೆದ ರೈಲ್ವೇಸ್ ಚಾಂಪಿಯನ್
ಬೆಂಗಳೂರು(ಅ.20): 61ನೇ ರಾಷ್ಟ್ರೀಯ ಓಪನ್ ಅಥ್ಲೆಟಿಕ್ಸ್ ಕೂಟವನ್ನು ಕರ್ನಾಟಕ 10 ಪದಕಗಳೊಂದಿಗೆ ಮುಕ್ತಾಯಗೊಳಿಸಿದೆ. ಕೂಟದ ಅಂತಿಮ ದಿನವಾದ ಬುಧವಾರ ರಾಜ್ಯ ನಾಲ್ಕು ಪದಕಗಳನ್ನು ಜಯಿಸಿತು. ಕೂಟದಲ್ಲಿ 1 ಚಿನ್ನ, 3 ಬೆಳ್ಳಿ, 6 ಕಂಚಿನ ಪದಕಗಳನ್ನು ತನ್ನದಾಗಿಸಿಕೊಂಡಿತು.
ಬುಧವಾರ ಮಹಿಳೆಯರ 400 ಮೀ. ಹರ್ಡಲ್ಸ್ ಸ್ಪರ್ಧೆಯಲ್ಲಿ ಸಿಂಚಲ್ ಕಾವೇರಮ್ಮ 58.84 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಬೆಳ್ಳಿ ಪದಕ ಗೆದ್ದರು. ಪುರುಷರ 200 ಮೀ. ಓಟದಲ್ಲಿ ಅಭಿನ್ ದೇವಾಡಿಗ 21.05 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿ ಕಂಚು ಜಯಿಸಿದರೆ, ಪುರುಷ ಹಾಗೂ ಮಹಿಳಾ ತಂಡಗಳು 4*400 ಮೀ. ರಿಲೇ ಓಟದಲ್ಲಿ ಕಂಚಿನ ಪದಕಗಳನ್ನು ಪಡೆದವು. ಪುರುಷರ ತಂಡದಲ್ಲಿ ಸಿದ್ದಪ್ಪ, ಗೌರಿಶಂಕರ್, ಜೀವನ್ ಹಾಗೂ ನಿಹಾಲ್ ಜೋಯೆಲ್ ಇದ್ದರು. ಮಹಿಳೆಯರ ತಂಡ ಸಿಂಚಲ್, ಅರ್ಪಿತಾ, ಇಂಚರಾ ಮತ್ತು ಲಿಖಿತಾ ಅವರನ್ನು ಒಳಗೊಂಡಿತ್ತು.
National Open Athletics Championships: ಜಾವೆಲಿನ್‌ನಲ್ಲಿ ಚಿನ್ನಕ್ಕೆ ಮುತ್ತಿಕ್ಕಿದ ಕನ್ನಡಿಗ ಮನು
ರೈಲ್ವೇಸ್ ಚಾಂಪಿಯನ್
ಕೂಟದಲ್ಲಿ ಒಟ್ಟು 297 ಅಂಕ ಪಡೆದ ರೈಲ್ವೇಸ್ ಚಾಂಪಿಯನ್ ಆಗಿ ಹೊರಹೊಮ್ಮಿದರೆ, 174 ಅಂಕ ಪಡೆದ ಸವೀರ್‍ಸಸ್, 69.50 ಅಂಕ ಪಡೆದ ಉತ್ತರ ಪ್ರದೇಶ ಕ್ರಮವಾಗಿ 2 ಹಾಗೂ 3ನೇ ಸ್ಥಾನ ಪಡೆದವು. 61.5 ಅಂಕಗಳೊಂದಿಗೆ ಕರ್ನಾಟಕ 5ನೇ ಸ್ಥಾನ ಗಳಿಸಿತು.
61ನೇ ರಾಷ್ಟ್ರೀಯ ಓಪನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಸಮಾರೋಪ ಸಮಾರಂಭದ ವೇಳೆ ಕೂಟದ ಶ್ರೇಷ್ಠ ಮಹಿಳಾ ಅಥ್ಲೀಟ್ ಟ್ರೋಫಿಯನ್ನು ರೈಲ್ವೇಸ್‌ನ ಜ್ಯೋತಿ ಯರ್ರಾಜಿಗೆ ನೀಡಿ ಗೌರವಿಸಲಾಯಿತು. ಕರ್ನಾಟಕ ಒಲಿಂಪಿಕ್ಸ್ ಸಂಸ್ಥೆ ಅಧ್ಯಕ್ಷ ಡಾ.ಕೆ.ಗೋವಿಂದರಾಜು, ಭಾರತೀಯ ಅಥ್ಲೆಟಿಕ್ಸ್ ಸಂಸ್ಥೆಯ ಉಪಾಧ್ಯಕ್ಷ, ಮಾಜಿ ಅಥ್ಲೀಟ್ ಅಂಜು ಬಾಬಿ ಜಾಜ್‌ರ್ ಇದ್ದರು.
ಶೂಟಿಂಗ್ ವಿಶ್ವಕಪ್: ಚಿನ್ನ ಗೆದ್ದ ರಮಿತಾ
ಕೈರೋ: ಭಾರತದ ರಮಿತಾ ಇಲ್ಲಿ ನಡೆಯುತ್ತಿರುವ ಶೂಟಿಂಗ್ ವಿಶ್ವ ಚಾಂಪಿಯನ್‌ಶಿಪ್‌ನ ಕಿರಿಯರ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದ್ದಾರೆ. ಮಹಿಳೆಯರ 10 ಮೀ. ಏರ್ ರೈಫಲ್ ಸ್ಪರ್ಧೆಯಲ್ಲಿ ಅವರು ಮೊದಲ ಸ್ಥಾನ ಪಡೆದರು. ಇದೇ ಸ್ಪರ್ಧೆಯಲ್ಲಿ ಕರ್ನಾಟಕದ ತಿಲೋತ್ತಮ ಸೇನ್ ಕಂಚು ಜಯಿಸಿದರು.
ಡೆನ್ಮಾಕ್ ಓಪನ್: ಸೇನ್, ಪ್ರಣಯ್ ಪ್ರಿ ಕ್ವಾರ್ಟರ್‌ಗೆ
ಒಡೆನ್ಸ್: ಭಾರತದ ತಾರಾ ಶಟ್ಲರ್‌ಗಳಾದ ಲಕ್ಷ್ಯ ಸೇನ್, ಎಚ್.ಎಸ್.ಪ್ರಣಯ್ ಇಲ್ಲಿ ನಡೆಯುತ್ತಿರುವ ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಮಹಿಳಾ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲೇ ಸೋತ ಸೈನಾ ನೆಹ್ವಾಲ್ ಟೂರ್ನಿಯಿಂದ ಹೊರಬಿದ್ದರು.