ನವದೆಹಲಿ: ಪ್ರತಿಷ್ಠಿತ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ(ಐಒಸಿ) ಸದಸ್ಯರಾಗಿ ಆಯ್ಕೆಯಾದ ಭಾರತ ಒಲಿಂಪಿಕ್ ಸಂಸ್ಥೆ ಅಧ್ಯಕ್ಷ ನರೀಂದರ್ ಧ್ರುವ್ ಬಾತ್ರಾ ಅವರನ್ನು ಹಾಕಿ ಇಂಡಿಯಾ ಅಭಿನಂದಿಸಿದೆ.

ಬುಧವಾರ ಲುಸಾನ್ನೆಯಲ್ಲಿ ನಡೆದ ಐಒಸಿ ಚುನಾವಣೆಯಲ್ಲಿ ಬಾತ್ರಾ 58 ಮತಗಳನ್ನು ಪಡೆದರು. ಬಾತ್ರಾ ಈ ಹಿಂದೆ ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್ (ಎಫ್‌ಐಎಚ್) ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಅಂತಾರಾಷ್ಟ್ರೀಯ ಹಾಕಿ ಸಂಸ್ಥೆಗೆ ಅಧ್ಯಕ್ಷರಾದ ಭಾರತದ ಮೊದಲಿಗ ಎನಿಸಿದ್ದಾರೆ.

ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಗೆ ಹೊಸ 10 ರಾಷ್ಟ್ರಗಳು ಸೇರ್ಪಡೆಗೊಂಡಿದ್ದು, ಇದೀಗ IOC ಒಟ್ಟು ಸದಸ್ಯ ರಾಷ್ಟ್ರಗಳ ಸಂಖ್ಯೆ 105ಕ್ಕೇ ಏರಿಕೆಯಾಗಿದೆ.