10 ಸದಸ್ಯರನ್ನೊಳಗೊಂಡ ಪಿಸಿಬಿ ಆಡಳಿತ ಮಂಡಳಿಯು ಅವಿರೋಧವಾಗಿ ನಜಾಮ್ ಸೇಥಿ ಅವರನ್ನು ಆಯ್ಕೆ ಮಾಡಿದೆ. ಇದು ಸೇಥಿ ಎರಡನೇ ಬಾರಿಗೆ ಪಿಸಿಬಿ ಚುಕ್ಕಾಣಿ ಹಿಡಿದಂತಾಗಿದೆ.

ಕರಾಚಿ(ಆ.09): ಖ್ಯಾತ ಪತ್ರಕರ್ತ ನಜಾಮ್ ಸೇಥಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ನೂತನ ಮುಖ್ಯಸ್ಥರಾಗಿ ಮೂರು ವರ್ಷಗಳ ಅವಧಿಗೆ ಆಯ್ಕೆಯಾಗಿದ್ದಾರೆ.

ಆರೋಗ್ಯ ಹಾಗೂ ಕೆಲವು ವೈಯುಕ್ತಿಕ ಕಾರಣಗಳಿಂದ ತಮ್ಮ ಅವಧಿ ಮುಕ್ತಾಯವಾಗುತ್ತಿದ್ದಂತೆ ಶಹರ್ಯಾರ್ ಖಾನ್ ತಮ್ಮ ಹುದ್ದಗೆ ರಾಜೀನಾಮೆ ಸಲ್ಲಿಸಿದ್ದರು. ಈಗ ಸೇಥಿಯವರು ಶಹರ್ಯಾರ್ ಖಾನ್ ಸ್ಥಾನವನ್ನು ತುಂಬಲಿದ್ದಾರೆ. ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಕೂಡಾ ಸೇಥಿ ಪಿಸಿಬಿ ಮುಖ್ಯಸ್ಥರಾಗಲಿ ಎಂದು ಬಯಸಿದ್ದರು.

10 ಸದಸ್ಯರನ್ನೊಳಗೊಂಡ ಪಿಸಿಬಿ ಆಡಳಿತ ಮಂಡಳಿಯು ಅವಿರೋಧವಾಗಿ ನಜಾಮ್ ಸೇಥಿ ಅವರನ್ನು ಆಯ್ಕೆ ಮಾಡಿದೆ. ಇದು ಸೇಥಿ ಎರಡನೇ ಬಾರಿಗೆ ಪಿಸಿಬಿ ಚುಕ್ಕಾಣಿ ಹಿಡಿದಂತಾಗಿದೆ.