ಬೆಂಗಳೂರು(ಫೆ.16):  ಫೆ.21 ರಿಂದ ಮಾಚ್‌ರ್‍ 2 ರವರೆಗೆ ನಡೆಯಲಿರುವ ಸೈಯದ್‌ ಮುಷ್ತಾಕ್‌ ಅಲಿ ಟಿ20 ಕ್ರಿಕೆಟ್‌ ಟೂರ್ನಿಯ ಗುಂಪು ಹಂತದ ಪಂದ್ಯಗಳಿಗೆ ಬಲಿಷ್ಠ ಕರ್ನಾಟಕ ತಂಡವನ್ನ ಪ್ರಕಟಿಸಲಾಗಿದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಆಯ್ಕೆ ಸಮಿತಿ 15 ಸದಸ್ಯರ ತಂಡ ಪ್ರಕಟಿಸಿದೆ.

ಇದನ್ನೂ ಓದಿ: ಭಾರತ-ಆಸ್ಟ್ರೇಲಿಯಾ ಟಿ20, ಏಕದಿನ ಸರಣಿ ವೇಳಾಪಟ್ಟಿ ಇಲ್ಲಿದೆ!

ತಂಡಕ್ಕೆ ಮನೀಶ್‌ ಪಾಂಡೆ ನಾಯಕರಾಗಿದ್ದಾರೆ. ‘ಡಿ’ ಗುಂಪಿನಲ್ಲಿರುವ ಕರ್ನಾಟಕ ಫೆ.21ರಂದು ಮೊದಲ ಪಂದ್ಯದಲ್ಲಿ ಅಸ್ಸಾಂ ತಂಡವನ್ನು ಎದುರಿಸಲಿದೆ. ಉಳಿದಂತೆ ಬಂಗಾಳ, ಅರುಣಾಚಲ ಪ್ರದೇಶ, ಮಿಜೋರಾಂ, ಛತ್ತೀಸ್‌ಗಢ, ಒಡಿಶಾ ಹಾಗೂ ಹರಾರ‍ಯಣ ತಂಡಗಳು ‘ಡಿ’ ಗುಂಪಿನಲ್ಲಿವೆ.

ಇದನ್ನೂ ಓದಿ: 2019ರ ವಿಶ್ವಕಪ್‌ಗೆ 18 ಟೀಂ ಇಂಡಿಯಾ ಕ್ರಿಕೆಟಿಗರ ಪಟ್ಟಿ ರೆಡಿ!

ಕರ್ನಾಟಕ ತಂಡ: 
ಮನೀಶ್‌ (ನಾಯಕ), ಕರುಣ್‌, ಮಯಾಂಕ್‌, ರೋಹನ್‌, ಶರತ್‌, ಸುಚಿತ್‌, ಶ್ರೇಯಸ್‌, ಪ್ರಸಿದ್ಧ, ಮಿಥುನ್‌, ವಿನಯ್‌, ಕರಿಯಪ್ಪ, ಕೌಶಿಕ್‌, ಸಿದ್ಧಾಥ್‌ರ್‍, ಮನೋಜ್‌, ಲುವ್‌ನಿತ್‌.