ಟಿ20 ಇತಿಹಾಸದಲ್ಲೇ 4ನೇ ಅತಿ ದೊಡ್ಡ ಚೇಸಿಂಗ್ ಇದಾಗಿದೆ. ಶನಿವಾರ ಇಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ಕುಸಾಲ ಪೆರೇರಾ ಹಾಗೂ ಮೆಂಡಿಸ್‌ರ ಅರ್ಧಶತಕದ ನೆರವಿನಿಂದ 214 ರನ್ ಪೇರಿಸಿತು

ಕೊಲಂಬೊ(ಮಾ.11): ಮುಷ್ಫಿಕರ್ ರಹೀಮ್‌ರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ತ್ರಿಕೋನ ಟಿ20 ಸರಣಿಯಲ್ಲಿ ಶ್ರೀಲಂಕಾ ವಿರುದ್ಧ ಬಾಂಗ್ಲಾದೇಶ ದಾಖಲೆ ಜಯ ಸಾಧಿಸಿತು. ಟಿ20 ಇತಿಹಾಸದಲ್ಲೇ 4ನೇ ಅತಿ ದೊಡ್ಡ ಚೇಸಿಂಗ್ ಇದಾಗಿದೆ.

ಶನಿವಾರ ಇಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ಕುಸಾಲ ಪೆರೇರಾ ಹಾಗೂ ಮೆಂಡಿಸ್‌ರ ಅರ್ಧಶತಕದ ನೆರವಿನಿಂದ 214 ರನ್ ಪೇರಿಸಿತು. ಬೃಹತ್ ಮೊತ್ತ ಬೆನ್ನಟ್ಟಿದ ಬಾಂಗ್ಲಾ ಬ್ಯಾಟ್ಸ್‌ಮನ್‌ಗಳು ಲಂಕಾ ಬೌಲರ್‌ಗಳಿಗೆ ದಿಟ್ಟ ಉತ್ತರ ನೀಡಿದರು. 5 ವಿಕೆಟ್ ಕಳೆದುಕೊಂಡು ಇನ್ನೆರಡು ಎಸೆತಗಳು ಬಾಕಿ ಇರುವಂತೆ 215 ರನ್ ಗಳಿಸಿದ ಬಾಂಗ್ಲಾ ಗೆಲುವಿನ ನಗೆ ಬೀರಿತು.

ಸಂಕ್ಷಿಪ್ತ ಸ್ಕೋರ್: ಶ್ರೀಲಂಕಾ 215/6(ಪೆರೇರಾ 74, ಮೆಂಡಿಸ್ 57, ಮುಸ್ತಫಿಝರ್ ರಹಮಾನ್ 3-48), ಬಾಂಗ್ಲಾ 215/5

(ಮುಷ್ಫಿಕರ್ ರಹೀಮ್ 72*, ತಮೀಮ್ ಇಕ್ಬಾಲ್ 47, ಪ್ರದೀಪ್ 2-37)