Asianet Suvarna News Asianet Suvarna News

ಡೈಮಂಡ್‌ ಲೀಗ್‌ ಫೈನಲ್ಸ್‌ ಆಡಲ್ಲ ಎಂದ ಮುರಳಿ ಶ್ರೀಶಂಕರ್‌

ಸೆಪ್ಟೆಂಬರ್ 23ರಿಂದ ಆರಂಭಗೊಳ್ಳಲಿರುವ ಏಷ್ಯಾಡ್‌ಗೂ ಮುನ್ನ ಗಾಯದ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಡೈಮಂಡ್‌ ಲೀಗ್‌ ಫೈನಲ್ಸ್‌ನಲ್ಲಿ ಕಣಕ್ಕಿಳಿಯದಿರಲು ತೀರ್ಮಾನಿಸಿದ್ದಾರೆ. ಅವರು ಇತ್ತೀಚೆಗೆ ಜ್ಯುರಿಚ್‌ ಡೈಮಂಡ್‌ ಲೀಗ್‌ನಲ್ಲಿ 5ನೇ ಸ್ಥಾನ ಪಡೆದು ಫೈನಲ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದರು.

Murali Sreeshankar to skip Diamond League final will focus on Asian Games 2023 kvn
Author
First Published Sep 8, 2023, 11:33 AM IST

ನವದೆಹಲಿ(ಸೆ.09): ಏಷ್ಯನ್‌ ಗೇಮ್ಸ್‌ನತ್ತ ಹೆಚ್ಚಿನ ಗಮನ ಕೊಡುವ ಸಲುವಾಗಿ ಭಾರತದ ತಾರಾ ಲಾಂಗ್‌ಜಂಪ್‌ ಪಟು ಮುರಳಿ ಶ್ರೀಶಂಕರ್‌ ಪ್ರತಿಷ್ಠಿತ ಡೈಮಂಡ್‌ ಲೀಗ್‌ ಫೈನಲ್ಸ್‌ ಆಡದಿರಲು ನಿರ್ಧರಿಸಿದ್ದಾರೆ. ಸೆಪ್ಟೆಂಬರ್ 17ಕ್ಕೆ ಅಮೆರಿಕದ ಯುಜೀನ್‌ನಲ್ಲಿ ಫೈನಲ್ಸ್‌ ನಿಗದಿಯಾಗಿದೆ. ಆದರೆ ಸೆಪ್ಟೆಂಬರ್ 23ರಿಂದ ಆರಂಭಗೊಳ್ಳಲಿರುವ ಏಷ್ಯಾಡ್‌ಗೂ ಮುನ್ನ ಗಾಯದ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಡೈಮಂಡ್‌ ಲೀಗ್‌ ಫೈನಲ್ಸ್‌ನಲ್ಲಿ ಕಣಕ್ಕಿಳಿಯದಿರಲು ತೀರ್ಮಾನಿಸಿದ್ದಾರೆ. ಅವರು ಇತ್ತೀಚೆಗೆ ಜ್ಯುರಿಚ್‌ ಡೈಮಂಡ್‌ ಲೀಗ್‌ನಲ್ಲಿ 5ನೇ ಸ್ಥಾನ ಪಡೆದು ಫೈನಲ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದರು.

ಮುರಳಿ ಶ್ರೀಶಂಕರ್‌ ಡೈಮಂಡ್ ಲೀಗ್ ಫೈನಲ್ ಟೂರ್ನಿಯಲ್ಲಿ ಲಾಂಗ್ ಜಂಪ್ ಸ್ಪರ್ಧೆಯಲ್ಲಿ ಫೈನಲ್‌ ಪ್ರವೇಶಿಸಿದ ಭಾರತದ ಮೊದಲ ಲಾಂಗ್‌ ಜಂಪ್ ಪಟು ಎನ್ನುವ ಹಿರಿಮೆಗೆ ಪಾತ್ರರಾಗಿದ್ದರು.

ಡಿ.5ರಿಂದ ಮುಂಬೈನಲ್ಲಿ ಟೆಕ್ವಾಂಡೋ ಲೀಗ್‌ ಶುರು

ನವದೆಹಲಿ: ಟೆಕ್ವಾಂಡೋ ಪ್ರೀಮಿಯರ್‌ ಲೀಗ್‌(ಟಿಪಿಎಲ್‌)ನ ಮೊದಲ ಆವೃತ್ತಿಯ 2ನೇ ಚರಣ ಡಿ.5ರಿಂದ 7ರವರೆಗೂ ಮುಂಬೈನಲ್ಲಿ ನಡೆಯಲಿದೆ. ಇದೇ ಮೊದಲ ಬಾರಿ ಪ್ರತಿ ತಂಡದಲ್ಲೂ ಪುರುಷ, ಮಹಿಳಾ ಟೆಕ್ವಾಂಡೋ ಪಟುಗಳಿದ್ದು, ಪುರುಷರಿಗೆ 55.1ರಿಂದ 60.9 ಕೆ.ಜಿ., ಮಹಿಳೆಯರಿಗೆ 48.1ರಿಂದ 53.9 ಕೆ.ಜಿ. ವರೆಗಿನ ತೂಕ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಈ ಬಾರಿಬೆಂಗಳೂರಿನ ನಿಂಜಾಸ್‌ ಸೇರಿದಂತೆ ಒಟ್ಟು 12 ತಂಡಗಳು ಸ್ಪರ್ಧಿಸಲಿವೆ. ಮೊದಲ ಚರಣದಲ್ಲಿ ಡೆಲ್ಲಿ ವಾರಿಯರ್ಸ್‌ ತಂಡವನ್ನು ಸೋಲಿಸಿ ರಾಜಸ್ಥಾನ ರೆಬೆಲ್ಸ್ ಪ್ರಶಸ್ತಿ ಎತ್ತಿ ಹಿಡಿದಿತ್ತು.

Indian Super League ವೇಳಾಪಟ್ಟಿ ಪ್ರಕಟ: ಬಿಎಫ್‌ಸಿ vs ಕೇರಳ ಬ್ಲಾಸ್ಟರ್ಸ್‌ ನಡುವೆ ಉದ್ಘಾಟನಾ ಪಂದ್ಯ

ಚೀನಾ ಓಪನ್ ಬ್ಯಾಡ್ಮಿಂಟನ್‌: ಭಾರತದ ಸವಾಲು ಮುಕ್ತಾಯ

ಚಾಂಗ್‌ಝೂ(ಚೀನಾ): ಕಾಮನ್‌ವೆಲ್ತ್ ಗೇಮ್ಸ್‌ ಪುರುಷರ ಡಬಲ್ಸ್‌ ಚಾಂಪಿಯನ್ನರಾದ ಸಾತ್ವಿಕ್‌ ಸಾಯಿರಾಜ್‌ ಹಾಗೂ ಚಿರಾಗ್‌ ಶೆಟ್ಟಿ, ಚೀನಾ ಓಪನ್‌ನ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದಿದ್ದಾರೆ. ಇದರೊಂದಿಗೆ ಟೂರ್ನಿಯಲ್ಲಿ ಭಾರತದ ಸವಾಲು ಮುಕ್ತಾಯಗೊಂಡಿದೆ.

US Open 2023: ಸೆಮಿಫೈನಲ್‌ಗೆ ಲಗ್ಗೆಯಿಟ್ಟಿ ಕಾರ್ಲೊಸ್ ಆಲ್ಕರಜ್

ಬುಧವಾರ ಮೊದಲ ಸುತ್ತಿನ ಪಂದ್ಯದಲ್ಲಿ ಭಾರತೀಯ ಜೋಡಿಯು ಇಂಡೋನೇಷ್ಯಾದ ಮುಹಮದ್‌ ಶೋಹಿಬುಲ್‌ ಹಾಗೂ ಮೌಲಾನ ಬಗಾಸ್‌ ವಿರುದ್ಧ 17-21, 21-11, 17-21 ಗೇಮ್‌ಗಳಲ್ಲಿ ಸೋಲುಂಡಿತು. ಮಿಶ್ರ ಡಬಲ್ಸ್‌ನ ಮೊದಲ ಸುತ್ತಿನಲ್ಲಿ ಸಿಕ್ಕಿ ರೆಡ್ಡಿ ಹಾಗೂ ರೋಹನ್‌ ಕಪೂರ್‌ ಜೋಡಿಯು ಪರಾಭವಗೊಂಡಿತು. ಟೂರ್ನಿಯ ಮೊದಲ ದಿನವಾದ ಮಂಗಳವಾರ ಎಚ್‌.ಎಸ್‌.ಪ್ರಣಯ್‌, ಲಕ್ಷ್ಯ ಸೇನ್‌ ಸೋತಿದ್ದರು.

Follow Us:
Download App:
  • android
  • ios