ಮುಂಬೈ(ಫೆ.25): ಐಪಿಎಲ್ ಟೂರ್ನಿಯಲ್ಲಿ ನೀಲಿ ಬಣ್ಣದ ಜರ್ಸಿಯಲ್ಲಿ ಮಿಂಚಿರುವ ಮುಂಬೈ ಇಂಡಿಯನ್ಸ್ ತಂಡ ಇದೀಗ ನೂತನ ಜರ್ಸಿ ಅನಾವರಣ ಮಾಡಿದೆ. 2019ರ ಐಪಿಎಲ್ ಟೂರ್ನಿಗಾಗಿ ಹೊಸ ಜರ್ಸಿ ಬಿಡುಗಡೆ ಮಾಡಿದ್ದು, ಮತ್ತೊಮ್ಮೆ ಚಾಂಪಿಯನ್ ಪಟ್ಟ ಅಲಂಕರಿಸೋ ವಿಶ್ವಾಸದಲ್ಲಿದೆ.

ಇದನ್ನೂ ಓದಿ: ಐಪಿಎಲ್ 2019ರ ವೇಳಾಪಟ್ಟಿ ಪ್ರಕಟ-ಉದ್ಘಾಟನಾ ಪಂದ್ಯದಲ್ಲಿ RCB -CSK ಫೈಟ್!

ಮುಂಬೈ ಇಂಡಿಯನ್ಸ್ ನೂತನ ಜರ್ಸಿಯ ಬಣ್ಣಯದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ನೀಲಿ ಹಾಗೂ ಚಿನ್ನದ ಬಣ್ಣದ ಅದೇ ಬಣ್ಣದಲ್ಲಿ ನೂತನ ಜರ್ಸಿ ಬಿಡುಗಡೆ ಮಾಡಲಾಗಿದೆ. ಆದರೆ ವಿನ್ಯಾಸದಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. ಅಧಿಕೃತ ಟ್ವಿಟರ್ ಖಾತೆಯಲ್ಲಿ ತಂಡದ ನೂತನ ಜರ್ಸಿ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

 

 

ಇದನ್ನೂ ಓದಿ: ಮುಂಬೈ ಇಂಡಿಯನ್ಸ್ ಫುಲ್ ಟೀಂ- ಎಂಟ್ರಿಕೊಟ್ಟ ಯುವಿ, ಮಲಿಂಗ!

2013, 2015 ಹಾಗೂ 2017ಲ್ಲಿ ಮುಂಬೈ ಇಂಡಿಯನ್ಸ್ ಐಪಿಎಲ್ ಟ್ರೋಫಿ ವಶಪಡಿಸಿಕೊಂಡಿದೆ. ಇನ್ನು 2011 ಹಾಗೂ 2013ರಲ್ಲಿ ಚಾಂಪಿಯನ್ಸ್ ಲೀಗ್ ಟ್ರೋಫಿ ಕೂಡ ಗೆದ್ದುಕೊಂಡಿದೆ. ಐಪಿಎಲ್ ಟೂರ್ನಿಯಲ್ಲಿ ಬಲಿಷ್ಠ ಹಾಗೂ ಯಶಸ್ವಿ ತಂಡ ಎಂದೇ ಗುರುತಿಸಿಕೊಂಡಿದೆ. ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ಈ ಬಾರಿ 4ನೇ ಪ್ರಶಸ್ತಿ ಮೇಲೆ ಕಣ್ಣಟ್ಟಿದೆ.

ಇದನ್ನೂ ಓದಿ: ಐಪಿಎಲ್ ಉದ್ಘಾಟನಾ ಸಮಾರಂಭ ರದ್ದು - ಭಾರತೀಯರ ಹೃದಯ ಗೆದ್ದ ಬಿಸಿಸಿಐ!