ವೈಜಾಗ್[ಫೆ.24]: ಟೀಂ ಇಂಡಿಯಾದ ಯುವ ಮಣಿಕಟ್ಟು ಲೆಗ್’ಸ್ಪಿನ್ನರ್ ಮಯಾಂಕ್ ಮಾರ್ಕಂಡೆ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಮಾರ್ಕಂಡೆ ಕಣಕ್ಕಿಳಿಯಲಿದ್ದಾರೆ.

ಟಾಸ್ ಗೆದ್ದ ಆಸ್ಟ್ರೇಲಿಯಾ ಫೀಲ್ಡಿಂಗ್ ಆಯ್ಕೆ: ಟೀಂ ಇಂಡಿಯಾದಲ್ಲಿ ಅಚ್ಚರಿಯ ಆಯ್ಕೆ

ಟಿ20 ಸರಣಿಯಿಂದ ಕುಲ್ದೀಪ್ ಯಾದವ್’ಗೆ ವಿಶ್ರಾಂತಿ ನೀಡಿದ್ದರಿಂದ ಮಯಾಂಕ್ ಮಾರ್ಕಂಡೆಗೆ ಬಿಸಿಸಿಐ ಬುಲಾವ್ ನೀಡಿತ್ತು. ಪಂಜಾಬ್ ಮೂಲದ 21 ವರ್ಷದ ಮಾರ್ಕಂಡೆ 2018ರಲ್ಲಿ ಪಂಜಾಬ್ ಪರ ಲಿಸ್ಟ್ ಎ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದರು. ಇನ್ನು 2018ರ ಐಪಿಎಲ್ ಆಟಗಾರರ ಹರಾಜಿನಲ್ಲಿ ಮಾರ್ಕಂಡೆ ಅವರನ್ನು ಮುಂಬೈ ಇಂಡಿಯನ್ಸ್ ತಂಡ 20 ಲಕ್ಷ ರುಪಾಯಿ ನೀಡಿ ಖರೀದಿಸಿತ್ತು.

ಕಳೆದ ಆವೃತ್ತಿಯ ಐಪಿಎಲ್’ನಲ್ಲಿ ಮುಂಬೈ ಇಂಡಿಯನ್ಸ್ ಪರ ಮಯಾಂಕ್ 14 ಪಂದ್ಯಗಳನ್ನಾಡಿ 15 ವಿಕೆಟ್ ಕಬಳಿಸಿದ್ದರು. ಪ್ರಸಕ್ತ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವು ಮಯಾಂಕ್ ಅವರನ್ನು ರೀಟೈನ್ ಮಾಡಿಕೊಂಡಿತ್ತು. 

ಇನ್ನು ರಣಜಿ ಟೂರ್ನಿಯಲ್ಲೂ ಕಮಾಲ್ ಮಾಡಿದ್ದ ಗೂಗ್ಲಿ ಸ್ಪೆಷಲಿಸ್ಟ್ ಮಾರ್ಕಂಡೆ 29 ವಿಕೆಟ್ ಕಬಳಿಸುವ ಮೂಲಕ ಪಂಜಾಬ್ ಪರ ಗರಿಷ್ಠ ವಿಕೆಟ್ ಪಡೆದ ಆಟಗಾರರಾಗಿ ಹೊರ ಹೊಮ್ಮಿದ್ದರು.