ಎರಡೂ ಇಂಡಗಳು ಈಗಾಗಲೇ ಪ್ಲೇ'ಆಫ್ ಪ್ರವೇಶಿಸಿ ಆಗಿತ್ತು. ಒಂದು ವೇಳೆ ಕೋಲ್ಕತ್ತಾ ಈ ಪಂದ್ಯದಲ್ಲಿ ಗೆದ್ದಿದ್ದರೆ ಎರಡನೇ ಸ್ಥಾನದಲ್ಲಿರುತ್ತಿತ್ತು. ಮುಂಬೈ ಸ್ಥಾನ ಬದಲಾಗುತ್ತಿರಲಿಲ್ಲ
ಕೋಲ್ಕತಾ(ಮೇ.14): ಸಾವಾಲಿಲ್ಲದ್ದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 9 ರನ್'ಗಳ ಜಯಗಳಿಸಿದೆ.
ಎರಡೂ ಇಂಡಗಳು ಈಗಾಗಲೇ ಪ್ಲೇ'ಆಫ್ ಪ್ರವೇಶಿಸಿ ಆಗಿತ್ತು. ಒಂದು ವೇಳೆ ಕೋಲ್ಕತ್ತಾ ಈ ಪಂದ್ಯದಲ್ಲಿ ಗೆದ್ದಿದ್ದರೆ ಎರಡನೇ ಸ್ಥಾನದಲ್ಲಿರುತ್ತಿತ್ತು. ಮುಂಬೈ ಸ್ಥಾನ ಬದಲಾಗುತ್ತಿರಲಿಲ್ಲ. ಟಾಸ್ ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಮುಂಬೈ ತಂಡ ಆರಂಭದಲ್ಲಿಯೇ ಸಿಮನ್ಸ್ ವಿಕೇಟ್ ಕಳೆದುಕೊಂಡಿತು. ನಾಯಕ ರೋಹಿತ್ ಶರ್ಮಾ ಹಾಗೂ ಸೌರಭ್ ತಿವಾರಿ 8.2 ಓವರ್'ಗಳಲ್ಲಿ 69 ರನ್ ಸಾಧಾರಣ ಮೊತ್ತ ಕಲೆ ಹಾಕಿದರು.
ಶರ್ಮಾ ಔಟಾದಾಗ ಬಿರುಸಿನ ಆಟವಾಡುವ ಮೂಲಕ ತಿವಾರಿಗೆ ಜೊತೆಯಾದರು ಅಂಬಾಟಿ ರಾಯುಡು ಇವರಿಬ್ಬರ ಜೊತೆಯಾಟದಿಂದ ಮುಂಬೈ ತಂಡ 20 ಓ'ವರ್'ಗಳಲ್ಲಿ 5 ವಿಕೇಟ್ ನಷ್ಟಕ್ಕೆ 173 ಸಾಧಾರಣ ಮೊತ್ತ ಕಲೆ ಹಾಕಿದರು. ಸ್ಫೋಟಕ ಬ್ಯಾಟಿಂಗ್ ಮಾಡಿದ ರಾಯುಡು 37 ಎಸೆತಗಳಲ್ಲಿ 6 ಬೌಂಡರಿ ಹಾಗೂ 3 ಸಿಕ್ಸ್'ರ್'ನೊಂದಿಗೆ 63 ರನ್ ಚಚ್ಚಿದರೆ, ತಿವಾರಿ 43 ಚಂಡುಗಳಲ್ಲಿ 9 ಬೌಂಡರಿಗಳೊಂದಿಗೆ 52 ರನ್ ಗಳಿಸಿದರು. . ಕೋಲ್ಕತಾ ಪರ ಟ್ರೆಂಟ್ ಬೋಲ್ಟ್ 2, ಕುಲದೀಪ್ ಮತ್ತು ರಜಪೂತ್ ತಲಾ 1 ವಿಕೆಟ್ ಪಡೆದರು.
173 ರನ್'ಗಳ ಗುರಿ ಬೆನ್ನಟ್ಟಿದ ಕೋಲ್ಕತ್ತಾ ಮೊದಲ ಓವರ್'ನಲ್ಲಿಯೇ ಸುನೀಲ್ ನರೇನ್ ವಿಕೇಟ್ ಕಳೆದುಕೊಂಡಿತು. ಪಾಂಡೆ 33 ಎಸೆತಗಳಲ್ಲಿ 33 ರನ್ ಗಳಿಸಿದ್ದು ಬಿಟ್ಟರೆ ಕ್ರಿಸ್ ಲಿನ್ (26),ಗಂಭೀರ್(21),ಯೂಸಫ್ ಪಠಾಣ್(20) ಹಾಗೂ ಗ್ರಾಂಡೋ'ಮೆ(29) ಬಿರುಸಿನ ಬ್ಯಾಟಿಂಗ್ ಮಾಡಿದರೂ ಬೇಗನೆ ವಿಕೇಟ್ ಒಪ್ಪಿಸಿ ಪೆವಿಲಿಯನ್'ಗೆ ತೆರಳಿದರು. ಅಂತಿಮವಾಗಿ 20 ಓವರ್'ಗಳಲ್ಲಿ 8 ವಿಕೇಟ್ ಕಳೆದುಕೊಂಡು 164 ಮಾತ್ರ ಗಳಿಸಲಷ್ಟೆ ಸಾಧ್ಯವಾಯಿತು.
ಸಂಕ್ಷಿಪ್ತ ಸ್ಕೋರ್
ಮುಂಬೈ ಇಂಡಿಯನ್ಸ್:173/5 (20/20)
ಕೋಲ್ಕತ್ತಾ ನೈಟ್ ರೈಡರ್ಸ್: 164/8(20/20)
ಪಂದ್ಯ ಶ್ರೇಷ್ಠ: ಅಂಬಾಟಿ ರಾಯುಡು
