ಅಭಿಮಾನಿಗಳನ್ನು ನಿರಾಸೆಗೀಡು ಮಾಡಿದ ಧೋನಿಯ ಅರ್ಧಶತಕದ ಇನ್ನಿಂಗ್ಸ್'ನಲ್ಲಿ ತಮಗೇ ಅರಿವಿಲ್ಲದೇ ಎರಡು ದಾಖಲೆಗಳು ನಿರ್ಮಾಣವಾಗಿವೆ. ಬಹುಶಃ ಧೋನಿ ತನ್ನ ಜೀವಮಾನವಿಡೀ ತನ್ನ ಈ ದಾಖಲೆಗಳನ್ನು ಯಾವತ್ತೂ ನೆನಪಿಸಿಕೊಳ್ಳಲು ಇಷ್ಟಪಡುವುದಿಲ್ಲವೇನೋ. ಹಾಗಾದರೆ ನಿರ್ಮಾಣವಾದ ಆ ದಾಖಲೆಗಳು ಯಾವುದು? ಇಲ್ಲಿದೆ ವಿವರ

ನವದೆಹಲಿ(ಜು.03): ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕ್ ವಿರುದ್ಧ ಟೀಂ ಇಂಡಿಯಾ ಅನುಭವಿಸಿದ ಹೀನಾಯ ಸೋಲಿನಿಂದ ಅಭಿಮಾನಿಗಳು ಇನ್ನೂ ಹೊರಬಂದಿರಲಿಲ್ಲ, ಅಷ್ಟರಲ್ಲಾಗಲೇ ಟೀಂ ಇಂಡಿಯಾ ಇದೀಗ ವೆಸ್ಟ್ ಇಂಡೀಸ್ ವಿರುದ್ಧ ಮತ್ತೊಮ್ಮೆ ಸೋಳನುಭವಿಸಿದೆ. ಈ ಸೋಲಿನಿಂದ ಅಭಿಮಾನಿಗಳು ಮತ್ತೊಮ್ಮೆ ನಿರಾಸೆಗೊಂಡಿದ್ದಾರೆ.

ಕ್ರಿಕೆಟ್ ಪಂದ್ಯದಲ್ಲಿ ಸೋಲು ಗೆಲುವು ಎಂಬುವುದು ಸಾಮಾನ್ಯ ಆದರೆ ಟೀಂ ಇಂಡಿಯಾ ಯಾವ ರೀತಿ ಕಳೆದ ಎರಡು ಪಂದ್ಯಗಳಲ್ಲಿ ಪ್ರಯತ್ನವಿಲ್ಲದೆಯೇ ಸೋಲಿಗೆ ಶರಣಾಗಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಇದೇ ವಿಚಾರವಾಗಿ ಟೀಂ ಇಂಡಿಯಾದ ಅಭಿಮಾನಿಗಳು ಸಾಮಾಜಿಕ ಜಾಲಾತಾಣಗಳಲ್ಲಿ ಸ್ಪೋಟಕ ಬ್ಯಾಟ್ಸ್'ಮನ್'ಗಳ ಬಳಿ ಎಗ್ಗಿಲ್ಲದೆ ಪ್ರಶ್ನಿಸುತ್ತಿದ್ದಾರೆ.

ವೆಸ್ಟ್ ಇಂಡೀಸ್ ನೀಡಿದ ಕೇವಲ 190 ರನ್'ಗಳ ಗುರಿಯನ್ನು ಬೆನ್ನಟ್ಟಲು ಸಾಧ್ಯವಾಗದಿರುವುದಕ್ಕೆ ಧೋನಿಯ ಅತ್ಯಂತ ನಿಧಾನಗತಿಯಲ್ಲಿ ಮಾಡಿದ ಬ್ಯಾಟಿಂಗ್ ಕಾರಣ ಎಂದು ಟೀಕಿಸಿದ್ದಾರೆ. ಧೋನಿಯ ಮೇಲೆ ಅಭಿಮಾನಿಗಳಿಗೆ ಬಹಳಷ್ಟು ನಿರೀಕ್ಷೆ ಇತ್ತು, ಆದರೆ ಅವರು ಅಭಿಮಾನಿಗಳ ನಿರೀಕ್ಷೆಯಂತೆ ಉತ್ತಮ ಪ್ರದರ್ಶನ ನೀಡಲು ಎಡವಿದ್ದೇ ಟೀಕಾಕಾರರ ಮುನಿಸಿಗೆ ಕಾರಣವೆಂಬುವುದು ಸಾಮಾಜಿಕ ಜಾಲಾತಾಣಗಳಲ್ಲಿ ಶೇರ್ ಆಗಿರುವ ಪೋಸ್ಟ್'ಗಳಿಂದ ತಿಳಿದು ಬರುತ್ತದೆ.

ಅಭಿಮಾನಿಗಳನ್ನು ನಿರಾಸೆಗೀಡು ಮಾಡಿದ ಧೋನಿಯ ಈ ಅರ್ಧಶತಕದ ಇನ್ನಿಂಗ್ಸ್'ನಲ್ಲಿ ತಮಗೇ ಅರಿವಿಲ್ಲದೇ ಎರಡು ದಾಖಲೆಗಳು ನಿರ್ಮಾಣವಾಗಿವೆ. ಬಹುಶಃ ಧೋನಿ ತನ್ನ ಜೀವಮಾನವಿಡೀ ತನ್ನ ಈ ದಾಖಲೆಗಳನ್ನು ಯಾವತ್ತೂ ನೆನಪಿಸಿಕೊಳ್ಳಲು ಇಷ್ಟಪಡುವುದಿಲ್ಲವೇನೋ. ಹಾಗಾದರೆ ನಿರ್ಮಾಣವಾದ ಆ ದಾಖಲೆಗಳು ಯಾವುದು? ಇಲ್ಲಿದೆ ವಿವರ

ಏಕದಿನ ಪಂದ್ಯದಲ್ಲಿ ಟೆಸ್ಟ್ ಪಂದ್ಯದಂತಹ ಪ್ರದರ್ಶನ ನೀಡಿದ ಆಟಗಾರರ ಪಟ್ಟಿಯಲ್ಲಿ ಧೋನಿ!

ಸಾಮಾನ್ಯವಾಗಿ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಬ್ಯಾಟ್ಸ್'ಮನ್ ಒಬ್ಬ ಕ್ರೀಸ್'ನಲ್ಲಿ ಸಮಯ ಕಳೆದ ಬಳಿಕ ಶಾಟ್ಸ್'ಗಳನ್ನು ಹೊಡೆಯುತ್ತಾರೆ, ಕಳೆದ ಕೆಲ ಸಮಯದಿಂದ ಆಟದ ಸ್ವರೂಪ ಬದಲಾಗಿದೆ. ಆದರೆ ಏಕದಿನ ಹಾಗೂ ಟಿ 20 ಪಂದ್ಯಗಳು ಒತ್ತಡದ ಬ್ಯಾಟಿಂಗ್'ಗೆ ಹೆಸರುವಾಸಿಯಾಗಿವೆ. ಹೀಗಿರುವಾಗ ಸೀಮಿತ ಓವರ್'ಗಳ ಕ್ರಿಕೆಟ್ ಫಾರ್ಮೆಟ್'ನಲ್ಲಿ ಓರ್ವ ಆಟಗಾರ ತನ್ನ ಇನ್ನಿಂಗ್ಸ್'ನಲ್ಲಿ ಹೆಚ್ಚು ಬಾಲ್'ಗಳಲ್ಲಿ ಕಡಿಮೆ ರನ್ ಗಳಿಸಿದರೆ ಅವರ ಆಟವನ್ನು ಟೆಸ್ಟ್ ಪಂದ್ಯದೊಡನೆ ಹೋಲಿಸಲಾಗುತ್ತದೆ. ಬಹುಶಃ ವೆಸ್ಟ್ ಇಂಡೀಸ್ ವಿರುದ್ಧ ಧೋನಿ ನಿರ್ಮಿಸಿದ ಅರ್ಧಶತಕ ಅವರ ಅಭಿಮಾನಿಗಳು ಇದೇ ವಿಭಾಗದಲ್ಲಿ ಇಡುತ್ತಾರೇನೋ.

ವಿಶ್ವದ ಅತಿ ದೊಡ್ಡ ಫಿನಿಶರ್ ಎಂದೇ ಕರೆಯಲ್ಪಡುವ ಧೋನಿ ತನ್ನ ಕ್ರಿಕೆಟ್ ಪಯಣದಲ್ಲಿ ಅದೆಷ್ಟೋ ಅತ್ಯದ್ಭುತ ಇನ್ನಿಂಗ್ಸ್'ಗಳನ್ನಾಡಿದ್ದಾರೆ. ಆದರೆ ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾಗೆ ಗೆಲುವು ತಂದುಕೊಡಲು ಧೋನಿಯಿಂದ ಸಾಧ್ಯವಾಗಲಿಲ್ಲ. ತನ್ನ ಆಟ ಆರಂಭಿಸಿದ ಧೋನಿ 114 ಎಸೆತಗಳಲ್ಲಿ ಕೇವಲ 54 ರನ್ ಗಳಿಸಿದರು ಆದರೆ 49ನೇ ಓವರ್'ಗೆ ಔಟಾದರು. ಇದರಿಂದ ಟೀಂ ಇಂಡಿಯಾ ಗೆಲುವು ಸಾಧಿಸಲುತ್ತದೆ ಎಂಬ ನಿರೀಕ್ಷೆ ಮುರಿದು ಬಿತ್ತು. ಈ ಪಂದ್ಯದಲ್ಲಿ ಧೋನಿ 108 ಬಾಲ್'ಗಳಿಗೆ 50 ರನ್ ಗಳಿಸಿದ್ದು, ಇದು ಭಾರತೀಯ ಕ್ರಿಕೆಟ್ ಇತಿಹಾಸದಲ್ಲೇ ಭಾರತೀಯನೊಬ್ಬಗಳಿಸಿದ ಎರಡನೆಯ ಅತ್ಯಂತ ನಿಧಾನಗತಿಯ ಅರ್ಧಶತಕವಾಗಿದೆ.

ಟೀಂ ಇಂಡಿಯಾದ ಇನ್ನಿಂಗ್ಸ್'ನಲ್ಲಿ 100 ಎಸೆತಗಳವರೆಗೂ ಬೌಂಡ್ರಿ ಸಿಡಿಸಲು ಸಾಧ್ಯವಾಗಿಲ್ಲ

ಟೀಂ ಇಂಡಿಯಾದ ಆಟಗಾರರು ಬೌಂಡ್ರಿ ಶಾಟ್ಸ್'ಗಳಿಗೆ ಅತಿ ಹೆಚ್ಚು ಫೇಮಸ್. ಭಾರತೀಯ ಆಟಗಾರರ ಗಮನ ಓಡಿ ರನ್ ಗಳಿಸುವುದಕ್ಕಿಂತಲೂ ಹೆಚ್ಚು ಬೌಂಡ್ರಿ ಸಿಡಿಸಿ ರನ್ ಪೇರಿಸುವುದರಲ್ಲಿರುತ್ತದೆ ಎಂಬುವುದಕ್ಕೆ ಇಡೀ ವಿಶ್ವಕ್ಕೇ ತಿಳಿದಿದೆ. ಇನ್ನು ಒತ್ತಡವಿದ್ದಾಗ ಧೋನಿಯ ಬ್ಯಾಟ್'ನಿಂದ ಅದೆಷ್ಟು ಸಿಕ್ಸರ್'ಗಳು ಸಿಡಿಯುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಹೀಗಿರುವಾಗ ನಿನ್ನೆಯ ಪಂದ್ಯದಲ್ಲಿ ಅಷ್ಟು ಒತ್ತಡವಿದ್ದರೂ 100 ಎಸೆತಗಳಾಗುವವರೆಗೂ ಯಾವೊಬ್ಬ ಆಟಗಾರನ ಬ್ಯಾಟ್'ನಿಂದ ಸಿಡಿಸಿದ ಬಾಲ್ ಬೌಂಡ್ರಿ ಲೈನ್ ದಾಟಿಲ್ಲ. 114 ಬಾಲ್'ಗಳಲ್ಲಿ 54 ರನ್'ಗಳಿಸಿದ ಧೋನಿ, 100 ಎಸೆತಗಲ್ಲಿ ಯಾವೊಂದೂ ಬಾಲ್ ಬೌಂಡ್ರಿ ದಾಟದಿರುವ ದಾಖಲೆಯನ್ನೂ ನಿರ್ಮಿಸಿದ್ದಾರೆ.