ಐಪಿಎಲ್'ನಲ್ಲಿ ಧೋನಿ ನಾಯಕತ್ವದಲ್ಲಿ ಸತತ ಎರಡು ಬಾರಿ(2010, 2011) ಚೆನ್ನೈ ಸೂಪರ್ ಕಿಂಗ್ಸ್ ಎರಡು ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.
ಚೆನ್ನೈ(ಜು.24): ನಿಮ್ಮ ನಿಷ್ಕಳಂಕ ಪ್ರೀತಿಗೆ ಅನನ್ಯ ಅಭಿನಂದನೆಗಳು ಎಂದು ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳಿಗೆ ಎಂ.ಎಸ್.ಧೋನಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
‘ಚೆನ್ನೈ ನನ್ನ ಎರಡನೇ ತವರು ಎಂದು ನಾನು ಯಾವಾಗಲೂ ಹೇಳುತ್ತಾ ಇರುತ್ತೇನೆ. ಹಳದಿ ಬಣ್ಣ ವಿಶೇಷವಾದುದು, ಅಲ್ಲದೇ ಹಳದಿ ಬಣ್ಣದ ಜೆರ್ಸಿ ಧರಿಸಿದ್ದಾಗ ಉತ್ತಮ ಸಾಧನೆ ತೋರಿದ್ದೇನೆ’ ಎಂದು ಧೋನಿ ಪ್ರತಿಕ್ರಿಯಿಸಿದ್ದಾರೆ.
‘ನಿಷೇಧ ಮುಗಿಸಿ ಮರಳಿರುವ ಸಿಎಸ್'ಕೆ ತಂಡಕ್ಕೆ ಅಭಿನಂದನೆ. ದೀರ್ಘಕಾಲದ ಕಾಯುವಿಕೆ ಇದೀಗ ಮುಗಿದಿದೆ. ಮುಂದಿನ ವರ್ಷ ನಮ್ಮ ಆಟವನ್ನು ನೀವು ನೋಡಲಿದ್ದೀರಿ’ ಎಂದು ಹೇಳಿದ್ದಾರೆ.
ಐಪಿಎಲ್'ನಲ್ಲಿ ಧೋನಿ ನಾಯಕತ್ವದಲ್ಲಿ ಸತತ ಎರಡು ಬಾರಿ(2010, 2011) ಚೆನ್ನೈ ಸೂಪರ್ ಕಿಂಗ್ಸ್ ಎರಡು ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.