ಚೆನ್ನೈ ನಗರವು ನಮ್ಮ ರಾಂಚಿ ಬಾಯ್'ಗೆ ಒಂದು ರೀತಿಯಲ್ಲಿ ಎರಡನೇ ತವರಿದ್ದಂತೆ. ಇಲ್ಲಿ ಸಾಕಷ್ಟು ಯಶಸ್ವಿ ಪ್ರದರ್ಶನಗಳನ್ನು ನೀಡಿದ್ದಾರೆ. ಟೀಮ್ ಇಂಡಿಯಾ ಪರವಾಗಿ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಇವರು ಅನೇಕ ಮ್ಯಾಚ್ ವಿನ್ನಿಂಗ್ಸ್ ಇನ್ನಿಂಗ್ಸ್ ಆಡಿದ್ದಾರೆ. ಇಲ್ಲಿ ಇವರು ಯಾವುದೇ ಫಿಲಂ ಸ್ಟಾರ್'ಗೂ ಕಡಿಮೆ ಇಲ್ಲದಷ್ಟು ಅಭಿಮಾನಿ ಬಳಗ ಹೊಂದಿದ್ದಾರೆ.

ಚೆನ್ನೈ(ಸೆ. 17): ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್ ಎಂಎಸ್ ಧೋನಿ ಇಂದು ತಮ್ಮ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತು ಮಾಡಿದರು. ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಧೋನಿ 79 ರನ್ ಗಳಿಸಿ ತಂಡಕ್ಕೆ ಉತ್ತಮ ಕಲೆಹಾಕಲು ನೆರವಾದರು. ಚೆನ್ನೈನ ಚೇಪಾಕ್ ಸ್ಟೇಡಿಯಂನಲ್ಲಿ ನೆರೆದಿದ್ದ ಪ್ರೇಕ್ಷಕರು ಧೋನಿ ಆಟ ನೋಡಿ ಸಂತೃಪ್ತರಾಗಿದ್ದಂತೂ ಹೌದು.

ಚೆನ್ನೈ ನಗರವು ನಮ್ಮ ರಾಂಚಿ ಬಾಯ್'ಗೆ ಒಂದು ರೀತಿಯಲ್ಲಿ ಎರಡನೇ ತವರಿದ್ದಂತೆ. ಇಲ್ಲಿ ಸಾಕಷ್ಟು ಯಶಸ್ವಿ ಪ್ರದರ್ಶನಗಳನ್ನು ನೀಡಿದ್ದಾರೆ. ಟೀಮ್ ಇಂಡಿಯಾ ಪರವಾಗಿ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಇವರು ಅನೇಕ ಮ್ಯಾಚ್ ವಿನ್ನಿಂಗ್ಸ್ ಇನ್ನಿಂಗ್ಸ್ ಆಡಿದ್ದಾರೆ. ಇಲ್ಲಿ ಇವರು ಯಾವುದೇ ಫಿಲಂ ಸ್ಟಾರ್'ಗೂ ಕಡಿಮೆ ಇಲ್ಲದಷ್ಟು ಅಭಿಮಾನಿ ಬಳಗ ಹೊಂದಿದ್ದಾರೆ. ಇವತ್ತು ಇವರು 5ನೇ ಕ್ರಮಾಂಕದಲ್ಲಿ ಕ್ರೀಸ್'ಗೆ ಆಗಮಿಸುತ್ತಿದ್ದಂತೆಯೇ ಚೇಪಾಕ್ ಸ್ಟೇಡಿಯಂನಲ್ಲಿ ಸಿಕ್ಕಾಪಟ್ಟೆ ಕರತಾಡನ ವ್ಯಕ್ತವಾಯಿತು. ಬಾಹುಬಲಿಯಂತೆ ಭರ್ಜರಿ ಎಂಟ್ರಿ ಕೊಟ್ಟ ಧೋನಿ ಬಹಳ ಕೂಲಾಗಿ ಇನ್ನಿಂಗ್ಸ್ ಕಟ್ಟಿ, ಕೊನೆಕೊನೆಯಲ್ಲಿ ತಮ್ಮ ಮಾಮೂಲಿಯ ಸ್ಫೋಟಕ ಆಟವಾಡಿ ಪ್ರೇಕ್ಷಕರ ನಿರೀಕ್ಷೆ ಉಳಿಸಿಕೊಂಡರು.

ಬಿಸಿಸಿಐ ಸಂಸ್ಥೆ ಕೂಡ ಧೋನಿಯನ್ನು ಕಿಂಗ್ ಎಂದೇ ಬಣ್ಣಿಸಿತು. ಚೆನ್ನೈಗೆ ಮರಳಿದ ಕಿಂಗ್ ಎಂದು ಬಿಸಿಸಿಐ ಧೋನಿಯ ಎಂಟ್ರಿಯನ್ನು ಬಣ್ಣಿಸಿ ಟ್ವೀಟ್ ಮಾಡಿತು.

Scroll to load tweet…

ಇವತ್ತಿನ ಆಟದಲ್ಲಿ ಧೋನಿ 88 ಬಾಲ್'ನಲ್ಲಿ 79 ರನ್ ಗಳಿಸಿದರು. ಕೊನೆಯ 2 ಎಸೆತ ಇರುವಾಗ ಇವರು ಔಟಾದರು. ಇವರ ಇನ್ನಿಂಗ್ಸಲ್ಲಿ 2 ಸಿಕ್ಸರ್ ಮತ್ತು 4 ಬೌಂಡರಿ ಒಳಗೊಂಡಿವೆ. 64 ರನ್'ಗೆ 4 ವಿಕೆಟ್ ಬಿದ್ದು ತಂಡವು ಸಂಕಷ್ಟದಲ್ಲಿದ್ದಾಗ ಕ್ರೀಸ್'ಗೆ ಬಂದ ಧೋನಿ ಬಹಳ ತಾಳ್ಮೆಯಿಂದ ಇನ್ನಿಂಗ್ಸ್ ಕಟ್ಟಿದರು. ಹಾರ್ದಿಕ್ ಪಾಂಡ್ಯ ಜೊತೆ 6ನೇ ವಿಕೆಟ್'ಗೆ 118 ರನ್ ಜೊತೆಯಾಟದಲ್ಲಿ ಭಾಗಿಯಾದರು. ಧೋನಿ-ಪಾಂಡ್ಯರ ಈ ಜೊತೆಯಾಟವು ಭಾರತದ ಇನ್ನಿಂಗ್ಸ್'ಗೆ ಚೇತರಿಕೆ ನೀಡಿ ದೊಡ್ಡ ಮೊತ್ತ ಕಲೆಹಾಕಲು ನೆರವಾಯಿತು. ಪಾಂಡ್ಯ ನಿರ್ಗಮನದ ಬಳಿಕ ಭುನವೇಶ್ವರ್ ಕುಮಾರ್ ಜೊತೆ ಧೋನಿ 7ನೇ ವಿಕೆಟ್'ಗೆ 72 ರನ್ ಜೊತೆಯಾಟದಲ್ಲಿ ಪಾಲ್ಗೊಂಡರು.