ಮುಂಬೈ(ಮಾ.07): ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಟೀಂ ಇಂಡಿಯಾ ಕ್ರಿಕೆಟಿಗ ಎಂ.ಎಸ್.ಧೋನಿ ಪರ ಮಾಜಿ ನಾಯಕ ಸೌರವ್ ಗಂಗೂಲಿ ಬ್ಯಾಟ್ ಬೀಸಿದ್ದಾರೆ. 2019ರ ವಿಶ್ವಕಪ್ ಬಳಿಕವೂ ಧೋನಿ ತಂಡದಲ್ಲಿ ಮುಂದುವರಿಯಬೇಕು ಎಂದು ಗಂಗೂಲಿ ಹೇಳಿದ್ದಾರೆ.

ಇದನ್ನೂ ಓದಿ: ಇಂಡೋ-ಆಸಿಸ್ 3ನೇ ಏಕದಿನ: ಸಂಭವನೀಯ ಟೀಂ ಇಂಡಿಯಾ ಪ್ರಕಟ!

ವಯಸ್ಸು ಕೇವಲ ಸಂಖ್ಯೆ ಮಾತ್ರ. ಪ್ರತಿಭೆ ಇದ್ದರೆ ತಂಡದಲ್ಲಿ ಮಂದುವರಿಯುವುದು ಸೂಕ್ತ. ಧೋನಿ ಇದೇ ರೀತಿ ಬ್ಯಾಟಿಂಗ್ ಮಾಡಿದರೆ 2019ರ ವಿಶ್ವಕಪ್ ಭಾರತ ಗೆಲ್ಲಲಿದೆ ಎಂದು ಗಂಗೂಲಿ ಹೇಳಿದ್ದಾರೆ. ವಿಶ್ವಕಪ್ ಬಳಿಕವೂ ಧೋನಿ ತಂಡದಲ್ಲಿ ಮುಂದುವರಿಯಬೇಕು ಎಂದಿದ್ದಾರೆ.

ಇದನ್ನೂ ಓದಿ: ಐಪಿಎಲ್ ಪಂದ್ಯದ ಸಮಯ ಬಹಿರಂಗ ಪಡಿಸಿದ ಬಿಸಿಸಿಐ!

ಸದ್ಯ ಟೀಂ ಇಂಡಿಯಾ ಅತ್ಯುತ್ತಮ ಬೌಲಿಂಗ್ ವಿಭಾಗ ಹೊಂದಿದೆ. ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್ ಹಾಗೂ ಮೊಹಮ್ಮದ್ ಶಮಿ ಸೇರಿದಂತೆ ಟೀಂ ಇಂಡಿಯಾ ವೇಗಿಗಳು ಎದುರಾಳಿಯನ್ನ ಸುಲಭವಾಗಿ ಕಟ್ಟಿಹಾಕಬಲ್ಲರು ಎಂದು ಗಂಗೂಲಿ ಹೇಳಿದ್ದಾರೆ.