ಜಾರ್ಖಂಡ್ ಕ್ರಿಕೆಟ್ ತಂಡವನ್ನು ಪ್ರತಿನಿಧಿಸುತ್ತಿರುವ ಧೋನಿ ನವದೆಹಲಿಯ ಫೈಸ್ಟಾರ್ ಹೋಟೆಲ್' ದ್ವಾರಕಾದಲ್ಲಿ ತಮ್ಮ ತಂಡದ ಆಟಗಾರರೊಂದಿಗೆ ಉಳಿದುಕೊಂಡಿದ್ದರು.ಬೆಳಿಗ್ಗೆ 6.00 ಗಂಟೆ ಸುಮಾರಿಗೆ ಹೋಟೆಲ್'ನ ಒಂದು ಭಾಗಕ್ಕೆ ಬೆಂಕಿ ಹತ್ತಿಕೊಂಡಿದೆ.
ನವದೆಹಲಿ(ಮಾ.17): ಭಾರತ ಕ್ರಿಕೆಟ್ ತಂಡದ ಖ್ಯಾತ ಆಟಗಾರ ಮಹೇಂದ್ರ ಸಿಂಗ್ ಧೋನಿ ಉಳಿದುಕೊಂಡಿದ್ದ ಹೋಟೆಲ್ ಬೆಂಕಿ ಬಿದ್ದಿದ್ದು, ಸ್ಟಾರ್ ಆಟಗಾರರನ್ನು ಅಪಾಯದಿಂದ ಪಾರು ಮಾಡಲಾಗಿದೆ.
ಜಾರ್ಖಂಡ್ ಕ್ರಿಕೆಟ್ ತಂಡವನ್ನು ಪ್ರತಿನಿಧಿಸುತ್ತಿರುವ ಧೋನಿ ನವದೆಹಲಿಯ ಫೈಸ್ಟಾರ್ ಹೋಟೆಲ್' ದ್ವಾರಕಾದಲ್ಲಿ ತಮ್ಮ ತಂಡದ ಆಟಗಾರರೊಂದಿಗೆ ಉಳಿದುಕೊಂಡಿದ್ದರು.ಬೆಳಿಗ್ಗೆ 6.00 ಗಂಟೆ ಸುಮಾರಿಗೆ ಹೋಟೆಲ್'ನ ಒಂದು ಭಾಗಕ್ಕೆ ಬೆಂಕಿ ಹತ್ತಿಕೊಂಡಿದೆ.
ತಕ್ಷಣವೇ ಅಗ್ನಿ ಶಾಮಕ ಪಡೆ ಆಗಮಿಸಿ ಧೋನಿ ಸೇರಿದಂತೆ ತಂಡದ ಆಟಗಾರರನ್ನು ಬೇರೆ ಕಡೆ ಸ್ಥಳಾಂತರಿಸಿದೆ. ಘಟನೆಯಲ್ಲಿ ಯಾರಿಗೂ ಅಪಾಯ ಸಂಭವಿಸಿಲ್ಲ. ಭಾರತ ತಂಡದ ಆಟಗಾರ ಜಾರ್ಖಂಡ್ ತಂಡದ ನಾಯಕನಾಗಿ ವಿಜಯ್ ಹಜಾರೆ ದೇಶಿ ಟೂರ್ನಿ ಆಡುತ್ತಿದ್ದು, ತಂಡವು ಸೆಮಿಫೈನಲ್ ಪ್ರವೇಶಿಸಿದೆ.