ಮುಂಬೈ[ಮೇ.28]: ಶೇನ್ ವಾಟ್ಸನ್ ಆಕರ್ಷಕ ಶತಕದ ನೆರವಿನಿಂದ ಚೆನ್ನೈ ಸೂಪರ್’ಕಿಂಗ್ಸ್ 11ನೇ ಆವೃತ್ತಿಯ ಐಪಿಎಲ್’ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. 
ಸನ್’ರೈಸರ್ಸ್ ಹೈದರಾಬಾದ್ ವಿರುದ್ಧ 8 ವಿಕೆಟ್’ಗಳ ಭರ್ಜರಿ ಜಯ ಸಾಧಿಸಿದ ಬಳಿಕ ಸಿಎಸ್’ಕೆ ಪಡೆ ಸಖತ್ ಸಂಭ್ರಮಾಚರಣೆ ಮಾಡಿತು. ಈ ವೇಳೆ ಧೋನಿ ತಮ್ಮ ಮಗಳು ಝೀವಾ ಜೊತೆ ಸೆಲಿಬ್ರೇಷನ್ ಮಾಡಿರುವ ವಿಡಿಯೋ ಟ್ರೆಂಡ್ ಆಗಿದೆ.

ಇಡೀ ತಂಡ ಪೋಟೋ ತೆಗೆಸಿಕೊಳ್ಳುವಾಗ 4 ವರ್ಷದ ಝೀವಾ ಅಪ್ಪನ ಬಳಿ ಓಡಿ ಬರುತ್ತಾಳೆ. ಮಗಳನ್ನು ಕಂಡ ಧೋನಿ ಎತ್ತಿಕೊಂಡು ಫೋಟೊಗೆ ಫೋಸ್ ಕೊಡುತ್ತಾರೆ. ಈ ಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ...