ನವದೆಹಲಿ[ಡಿ.21]: ‘ಭಾರತ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ, ರಣಜಿ ಟೂರ್ನಿಯಲ್ಲಿ ಆಡಿದರೆ ಯುವ ಆಟಗಾರರು ಅವಕಾಶವಂಚಿತರಾಗುತ್ತಾರೆ’ ಎಂದು ಜಾರ್ಖಂಡ್ ತಂಡದ ಕೋಚ್ ರಾಜೀವ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. 

ಸಾಕ್ಷಿ ಶೂ ಲೇಸ್ ಕಟ್ಟಿದ ಧೋನಿ..!

ಇತ್ತೀಚೆಗಷ್ಟೇ ಭಾರತ ತಂಡದ ಮಾಜಿ ಆಟಗಾರ ಸುನಿಲ್ ಗವಾಸ್ಕರ್, ಧೋನಿ ಏಕೆ ರಣಜಿ ಟೂರ್ನಿಯಲ್ಲಿ ಆಡುತ್ತಿಲ್ಲ? ಎಂದು ಪ್ರಶ್ನಿಸಿದ್ದರು. ‘ಧೋನಿ ಜಾರ್ಖಂಡ್ ತಂಡವನ್ನು ಏಕೆ ಪ್ರತಿನಿಧಿಸುತ್ತಿಲ್ಲ ಎಂಬ ಮಾತುಗಳು ಕೇಳುತ್ತಿವೆ. ಆದರೆ ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಒಂದು ವೇಳೆ ಧೋನಿ ತಂಡದಲ್ಲಿ ಆಡಿದರೆ, ಆ ಸ್ಥಾನದಲ್ಲಿ ಆಡುವ ಒಬ್ಬ ಯುವ ಆಟಗಾರ ಅವಕಾಶ ವಂಚಿತನಾಗುತ್ತಾನೆ. ಧೋನಿ, ಹಾಗೆ ಮಾಡುತ್ತಾರಾ? ಅಲ್ಲದೆ ಪ್ರತಿ ಯುವ ಆಟಗಾರನೂ ತನಗೆ ದೊರೆಯುವ ಅವಕಾಶಕ್ಕಾಗಿ ಎದುರು ನೋಡುತ್ತಿರುತ್ತಾನೆ ಎಂಬುದು ಎಲ್ಲ ಗಮನದಲ್ಲಿರಲಿ’ ಎಂದು ರಾಜೀವ್ ಹೇಳಿದ್ದಾರೆ.

ಐಪಿಎಲ್ 2019: ಧೋನಿ ನಾಯಕತ್ವದ ಸಿಎಸ್‌ಕೆ ತಂಡ ಹೀಗಿದೆ!

ಅಂತರಾಷ್ಟ್ರೀಯ ಪಂದ್ಯಗಳಲ್ಲಿ ರನ್ ಬರ ಅನುಭವಿಸುತ್ತಿರುವ ಮಹೇಂದ್ರ ಸಿಂಗ್ ಧೋನಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತ ತಂಡವನ್ನು ಕೂಡಿಕೊಳ್ಳಲಿದ್ದಾರೆ.